More

    ಬಟ್ಟೆ ಒಗೆಯೋದಂದ್ರೆ ದೀಪಿಕಾ ಪಡುಕೋಣೆಗೆ ಬಲು ಇಷ್ಟವಂತೆ!

    ಏನೇ ಹೇಳಿ … ಕಾಲೇಜು ದಿನಗಳಲ್ಲಿನ ನೆನಪುಗಳೇ ಹಾಗೆ. ಮರೆತೆನೆಂದರೂ ಅವು ಮರೆಯಾಗುವುದಿಲ್ಲ. ಇದೀಗ ಅಂಥದ್ದೇ ಒಂದಷ್ಟು ಮರೆಯಲಾಗದ ನೆನಪುಗಳನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತವರ ಸ್ನೇಹಿತೆ ಹಿತೇಷಿ ಮೆಹ್ತಾ ಇಬ್ಬರೂ ಒಟ್ಟಿಗೆ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

    ‘ದೀಪಿಕಾ ಪಡುಕೋಣೆಗೆ ಕಾಲೇಜಿನ ದಿನಗಳಿಂದಲೂ ಬಟ್ಟೆ ಒಗೆಯುವುದಂದ್ರೆ ಬಲು ಇಷ್ಟ! ಕೇವಲ ತಮ್ಮದಷ್ಟೇ ಅಲ್ಲ, ಅವರ ಸ್ನೇಹಿತರ ಬಟ್ಟೆಗಳನ್ನೂ ದೀಪಿಕಾ ವಾಷ್ ಮಾಡಿ ಕೊಡುತ್ತಿದ್ದರು. ಹಾಗೆಂದ ಮಾತ್ರಕ್ಕೆ ತಾವೇ ಕೈಯಿಂದ ಬಟ್ಟೆ ಒಗೆಯುತ್ತಿರಲಿಲ್ಲ. ವಾಷಿಂಗ್ ಮಷಿನ್​ಗೆ ತಮ್ಮ ಮತ್ತು ಸ್ನೇಹಿತೆಯರ ಬಟ್ಟೆಗಳನ್ನು ಹಾಕುತ್ತಿದ್ದರು’ ಎಂಬ ವಿಚಾರವನ್ನು ದೀಪಿಕಾ ಸ್ನೇಹಿತೆ ಹಿತೇಷಿ ಮೆಹ್ತಾ ಹೇಳಿಕೊಂಡಿದ್ದಾರೆ. ಇಲ್ಲಿ ಇನ್ನೊಂದು ಮಜವಾದ ವಿಚಾರವನ್ನು ಹಿತೇಷಿ ಹಂಚಿಕೊಂಡಿದ್ದಾರೆ. ‘ದಿನಕ್ಕೆ ಏನಿಲ್ಲವೆಂದರೂ ಎರಡು ಬಾರಿ ಬಟ್ಟೆ ವಾಷ್ ಮಾಡುವ ರೂಢಿ ದೀಪಿಕಾಗಿತ್ತಂತೆ. ಆ ಒಂದು ಕಾರಣಕ್ಕೆ ನಿತ್ಯ ತಮ್ಮ ಬಟ್ಟೆಗಳನ್ನಷ್ಟೇ ಅಲ್ಲದೆ, ಕೈಗೆ ಸಿಗುವ ಎಲ್ಲರ ಬಟ್ಟೆಗಳನ್ನೂ ವಾಷಿಂಗ್ ಮಷಿನ್​ಗೆ ಹಾಕುತ್ತಿದ್ದಳು’ ಎಂದು ಹಿತೇಷಿ ನೆನಪಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಬೇಕ್-ಆಫ್’ ಎಂಬ ಅಡುಗೆ ಕಾರ್ಯಕ್ರಮದಲ್ಲಿ ದೀಪಿಕಾ ಜತೆಗೆ ಭಾಗವಹಿಸಿದ್ದ ಆಕೆಯ ಬಾಲ್ಯದ ಗೆಳತಿ, ಹಳೆಯ ನೆನಪುಗಳನ್ನು ಮೆಲುಕುಹಾಕಿದ್ದಾರೆ. ಈ ಕುರಿತು ಮಾತನಾಡಿರುವ ದೀಪಿಕಾ, ‘ಬರೀ ಬಟ್ಟೆ ಒಗೆಯುವುದಷ್ಟೇ ಅಲ್ಲ, ಪ್ಯಾಕಿಂಗ್ ಮಾಡುವುದು, ಮನೆ ಮತ್ತು ಆಫೀಸ್ ನಿರ್ವಹಣೆ, ಮನೆಗೆ ಬೇಕಾದ ದಿನಸಿ ತರಿಸುವುದು … ಇವೆಲ್ಲವನ್ನೂ ನಾನೇ ಮಾಡುತ್ತೇನೆ. ಅದು ನನ್ನ ಇಷ್ಟದ ಕೆಲಸ’ ಎಂದಿದ್ದಾರೆ. -ಏಜೆನ್ಸೀಸ್

    ಜೀವನ ಫಿಲ್ಮ್​ ಇದ್ದಂಗೆ- ಕೆಲವು ವೇಳೆ ಸೂಪರ್​ಹಿಟ್​ ಆಗುತ್ತೆ, ಕೆಲವು ಸಲ ಫ್ಲಾಪ್​ ಆಗತ್ತೆ: ಗಳಗಳನೆ ಅತ್ತ ರಾಗಿಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts