More

    ಅವಳಿ ಪದಕದ ಒಡತಿ ಪಿವಿ ಸಿಂಧುಗೆ ಅದ್ಧೂರಿ ಸ್ವಾಗತ

    ನವದೆಹಲಿ: ಸತತ 2ನೇ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿ ಭಾರತಕ್ಕೆ ವಾಪಸಾದ ಪಿವಿ ಸಿಂಧು ಅವರಿಗೆ ಮಂಗಳವಾರ ಅದ್ಧೂರಿ ಸ್ವಾಗತ ನೀಡಲಾಯಿತು. ಭಾರತೀಯ ಕ್ರೀಡಾ ಪ್ರಾಧಿಕಾರಿ (ಸಾಯ್) ಹಾಗೂ ಭಾರತೀಯ ಬ್ಯಾಡ್ಮಿಂಟನ್ ೆಡರೇಷನ್‌ನ (ಬಿಎ್ಐ) ಪದಾಧಿಕಾರಿಗಳು, ಸಿಂಧು ಕುಟುಂಬ ಸದಸ್ಯರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. 5 ವರ್ಷಗಳ ಹಿಂದೆ ರಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ರಜತ ಪದಕ ಜಯಿಸಿದ್ದರು. ಇದೀಗ ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎನಿಸುವ ಮೂಲಕ ಇನ್ನಷ್ಟು ಉತ್ತುಂಗದ ಸಾಧನೆ ದಾಖಲಿಸಿದ್ದಾರೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಮರಳಿದ ಬಿಲ್ಗಾರ ಜಾಧವ್‌ಗೆ ಬೆದರಿಕೆ ಕರೆಗಳ ಸ್ವಾಗತ!

    ಸಿಂಧು ಆಗಮಿಸುತ್ತಿದಂತೆಯೇ ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಜೈಕಾರ ಹಾಕಿ ಸ್ವಾಗತಿಸಿದರು. ಬಳಿಕ ಸಿಂಧು ಅವರನ್ನು ಬಿಗಿ ಭದ್ರತೆಯಿಂದ ವಿಮಾನ ನಿಲ್ದಾಣದಿಂದ ಹೊರಕ್ಕೆ ಕರೆತರಲಾಯಿತು. ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ಸೇರಿದಂತೆ ಬಿಎಐ ಪದಾಧಿಕಾರಿಗಳು ಇದೇ ವೇಳೆ ಹಾಜರಿದ್ದರು. ಸಿಂಧು ಹಾಗೂ ಅವರ ಕೋಚ್ ಪಾರ್ಕ್ ಟೀ ಸ್ಯಾಂಗ್ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಸನ್ಮಾನಿಸಲಾಯಿತು. ‘ನನಗೆ ತುಂಬ ಸಂತೋಷವಾಗುತ್ತಿದೆ. ಎಲ್ಲರೂ ನನಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನನಗೆ ಪ್ರೋತ್ಸಾಹ ನೀಡುತ್ತಿರುವ ಬಿಎಐಗೆ ಧನ್ಯವಾದಗಳು. ಇದು ನನ್ನ ಪಾಲಿಗೆ ತುಂಬ ಸಂತೋಷ ಹಾಗೂ ಉತ್ಸುಕವಾದ ದಿನ’ ಎಂದು ಸಿಂಧು ಹೇಳಿದರು.

    ಇದನ್ನೂ ಓದಿ: ಒಲಿಂಪಿಕ್ಸ್ ಈಕ್ವೇಸ್ಟ್ರಿಯನ್‌ನಲ್ಲಿ ಬೆಂಗಳೂರಿನ ಫವಾದ್ ಮಿರ್ಜಾಗೆ 23ನೇ ಸ್ಥಾನ, 

    ಬುಧವಾರ ಹೈದರಾಬಾದ್‌ಗೆ ಆಗಮಿಸುವುದಕ್ಕೂ ಮುನ್ನ ಸಿಂಧು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಕಂಚಿನ ಪದಕಕ್ಕಾಗಿ ಭಾನುವಾರ ನಡೆದ ಪಂದ್ಯದಲ್ಲಿ 26 ವರ್ಷದ ಪಿವಿ ಸಿಂಧು ಚೀನಾದ ಹೀ ಬಿಂಗ್ ಜಿವೋ ಅವರನ್ನು ಮಣಿಸಿದ್ದರು. ಇದಕ್ಕೂ ಮೊದಲು ಸೆಮಿೈನಲ್ ಹಣಾಹಣಿಯಲ್ಲಿ ಚೀನಾ ತೈಪೆಯ ತೈ ಜು ಯಿಂಗ್ ಎದುರು ಸೋಲನುಭವಿಸಿದ್ದರು.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts