More

    ಉಗ್ರಾಣದಲ್ಲಿ ಸಂಗ್ರಹಿಸಿದ್ದ 3 ಸಾವಿರ ಭತ್ತದ ಮೂಟೆ ಕಳವು

    ಕಾರಟಗಿ: ಪಟ್ಟಣದ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿದ್ದ 3 ಸಾವಿರ ಭತ್ತದ ಮೂಟೆ (75.ಕೆಜಿ)ಗಳ ದಾಸ್ತಾನು ಕಳ್ಳತನವಾದ ಸಂಬಂಧ ರೈತ ಚಂದ್ರಶೇಖರ್ ಉಗ್ರಾಣ ನಿಮಗದ ಅಧಿಕಾರಿಗಳ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಗೋದಾಮಿನಲ್ಲಿ ಸಂಗ್ರಹಿಸಿದ್ದ ಭತ್ತದ ಚೀಲಗಳು ಕಳ್ಳತನವಾಗಿದ್ದಕ್ಕೆ ನಿಗಮದ ಅಧಿಕಾರಿಗಳೇ ಹೊಣೆಗಾರರು ಹೀಗಾಗಿ ತಮಗೆ ನ್ಯಾಯ ಕೊಡಿಸುವಂತೆ ನ್ಯಾಯಲಯದ ಮೊರೆ ಹೋಗಿದ್ದರು. ಕೋರ್ಟ್ ನಿರ್ದೇಶನದಂತೆ ಅ.5 ರಂದು ಸಿದ್ದನಗೌಡ ನೀಡಿದ ದೂರಿನ ಮೇಲೆ ಪಟ್ಟಣದ ಉಗ್ರಾಣ ನಿಗಮದ ವ್ಯವಸ್ಥಾಪಕ ಲಕ್ಷ್ಮೀಕಾಂತ್ ಹಾಗೂ ಸಿಬ್ಬಂದಿ ರಾಕೇಶ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರಕರಣದ ವಿವರ: ರೈತ ಚಂದ್ರಶೇಖರ 2017 ಮೇ 29 ರಂದು 1200 ಭತ್ತದ ಚೀಲ ಹಾಗೂ 2017 ಜೂನ್ 23 ರಂದು 1800 ಭತ್ತದ ಚೀಲಗಳನ್ನು ಪಟ್ಟಣದ ರಾಜ್ಯ ಉಗ್ರಾಣ ನಿಗಮದಲ್ಲಿ ಸಂಗ್ರಹಿಸಿದ್ದರು. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪಕರಿಂದ ಅಧಿಕೃತ ರಸೀದಿ ಪಡೆದಿದ್ದರು. ದಾಸ್ತಾನು ಮಾಡಿದ್ದ ಭತ್ತಕ್ಕೆ ಸಂಬಂಧಿಸಿದಂತೆ ಸಿಂಧನೂರಿನ ಕರ್ನಾಟಕ ಬ್ಯಾಂಕ್ ನಲ್ಲಿ 12 ಲಕ್ಷ, ವಿಜಯ ಬ್ಯಾಂಕ್ ನಲ್ಲಿ 18 ಲಕ್ಷ ರೂ. ಸಾಲ ಪಡೆದಿದ್ದರು. 2019 ಆ.16 ರಂದು ಭತ್ತ ಮಾರಾಟ ಮಾಡಿ ಸಾಲ ಪಾವತಿಸಲು ಗೋದಾಮಿಗೆ ತೆರಳಿದ ವೇಳೆ ವ್ಯವಸ್ಥಾಪಕರು ಗೈರಾಗಿದ್ದರು. ನಿಗಮದ ಸಿಬ್ಬಂದಿ ಗೋದಾಮು ತೆರದ ವೇಳೆ ಭತ್ತ ಕಳ್ಳತನವಾಗಿರುವುದು ಕಂಡುಬಂದಿದೆ. ಸದ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts