More

    ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ

    ಬೆಂಗಳೂರು: ಮಲ್ಲೇಶ್ವರದ ಸುಮುಖ ಮನೋವಿಕಾಸ ಕೇಂದ್ರದಲ್ಲಿ ಆರೈಕೆ ಪಡೆಯುತ್ತಿದ್ದ ಬುದ್ಧಿಮಾಂದ್ಯ ಬಾಲಕನಿಗೆ ವಾರ್ಡನ್ ಹಾಗೂ ಅಡುಗೆಯಾಕೆ ಮುದ್ದೆ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಗುಂಡ್ಲುಪೇಟೆ ಮೂಲದ ಮಾದೇಶ (14) ಹಲ್ಲೆಗೊಳಗಾದ ಬಾಲಕ. ಹಲ್ಲೆ ಆರೋಪದಲ್ಲಿ ಸುಮುಖ ಮನೋವಿಕಾಸ ಕೇಂದ್ರದ ವಾರ್ಡನ್ ಭಾಗ್ಯಮ್ಮ ಮತ್ತು ಅಡುಗೆ ಕೆಲಸದಾಕೆ ವಿರುದ್ಧ ಶೇಷಾದ್ರಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿ: ಮಗು ನನ್ನದಲ್ಲ ಎನ್ನಿಸುತ್ತಿದೆ, ಸಾಬೀತಾದರೆ ನನಗೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?

    ಬುದ್ಧಿಮಾಂದ್ಯನಾಗಿದ್ದ ಮಾದೇಶನನ್ನು ಆತನ ಪಾಲಕರು 5 ವರ್ಷಗಳಿಂದ ಮಲ್ಲೇಶ್ವರದ ಸುಮುಖ ಕೇಂದ್ರದಲ್ಲಿ ಆರೈಕೆಗಾಗಿ ಬಿಟ್ಟಿದ್ದರು. ಪ್ರತಿ ತಿಂಗಳು ಶುಲ್ಕ ಪಾವತಿಸಿ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು. ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ಜಾರಿಗೊಳಿಸಿದ್ದರಿಂದ ಮಾರ್ಚ್​ನಿಂದ ಪುತ್ರನ ಆರೋಗ್ಯ ವಿಚಾರಿಸಲು ಸಾಧ್ಯವಾಗಿರಲಿಲ್ಲ. ಮೇ 19ರಂದು ಮನೋವಿಕಾಸ ಕೇಂದ್ರದಿಂದ ಕರೆ ಮಾಡಿದ ವಾರ್ಡನ್, ಮಾದೇಶನಿಗೆ ಹುಷಾರಿಲ್ಲ. ಆತನನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು.

    ಇದನ್ನೂ ಓದಿ:  ವಿಶ್ವಗುರು: ಅಮೆರಿಕದ ದಾಳಕ್ಕೆ ಚೀನಾ ಪತರಗುಟ್ಟುವುದೇ?

    ಮಾದೇಶನ ತಾಯಿ ಊರಿನಿಂದ ಬಂದು ನೋಡಿದಾಗ ಮಗನ ಮೊಣಕಾಲು, ಭುಜ, ಬೆನ್ನು ಭಾಗದಲ್ಲಿ ಗಾಯ ಕಂಡು ಬಂದಿದೆ. ಈ ಬಗ್ಗೆ ವಾರ್ಡನ್​ನನ್ನು ವಿಚಾರಿಸಿದಾಗ, ಯಾವುದೋ ವಸ್ತು ತೆಗೆದುಕೊಳ್ಳಲು ಸಜ್ಜೆ ಏರಿದ್ದ. ಆಗ ಬಿದ್ದು ಗಾಯ ಮಾಡಿಕೊಂಡಿದ್ದಾನೆ ಎಂದು ಸಬೂಬು ಹೇಳಿದ್ದರು. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಹಲ್ಲೆ ನಡೆಸಿದ್ದರಿಂದ ಗಾಯಗಳಾಗಿರುವುದು ವೈದ್ಯರ ತಪಾಸಣೆಯಲ್ಲಿ ಕಂಡುಬಂದಿದೆ. ಮನೋವಿಕಾಸ ಕೇಂದ್ರದಲ್ಲಿನ ಪರಿಚಯಸ್ಥರೊಬ್ಬರು, ವಾರ್ಡನ್ ಮತ್ತು ಅಡುಗೆಯಾಕೆ ಸೇರಿ ಮಾದೇಶನಿಗೆ ಮುದ್ದೆಕೋಲಿನಿಂದ ಹೊಡೆದಿದ್ದಾರೆ. ಇದರಿಂದ ಗಾಯಗೊಂಡಿದ್ದಾನೆ ಎಂದು ತಿಳಿಸಿದಾಗ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ಅಂದಗಾತಿ ಪತ್ನಿಗೆ ಟಾರ್ಚರ್!: ತಲೆ ಬೋಳಿಸಿಕೊಂಡು ವಿಕಾರವಾಗಿರಲು ಒತ್ತಾಯಿಸಿ ಚಿತ್ರಹಿಂಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts