More

    ಕರೊನಾ ವಿರುದ್ಧ ವಾರ್ಡ್ ‘ವಾರ್’

    ಮೃತ್ಯುಂಜಯ ಕಪಗಲ್
    ಬೆಂಗಳೂರು: ಜನರ ಜೀವ-ಜೀವನವನ್ನು ಕಾಡುತ್ತಿರುವ ಕರೊನಾ ವಿರುದ್ಧ ವಾರ್ಡ್ ‘ವಾರ್’ಗೆ ತಡವಾಗಿಯಾದರೂ ಭೂಮಿಕೆ ಸಿದ್ಧಗೊಳ್ಳುತ್ತಿದ್ದು, ಸರ್ಕಾರದ ಅಪೇಕ್ಷೆಯಂತೆ ತಳಮಟ್ಟದಲ್ಲಿ ಚುರುಕಿನ ಕಾರ್ಯಾಚರಣೆಗೆ ವಾರ್ಡ್​ವಾರು ಸಮಿತಿಗಳು ರಚನೆಯಾಗಿವೆ.

    ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಮುದಾಯ ಕೈಜೋಡಿಸಿದರೆ ಹೆಚ್ಚು ಪರಿಣಾಮಕಾರಿ ಹಾಗೂ ಫಲಪ್ರದವಾಗುತ್ತದೆ. ಅಲ್ಲದೆ, ಜನರಲ್ಲಿನ ಕರೊನಾತಂಕ ಹೋಗಲಾಡಿಸಿ, ಆತ್ಮಸ್ಥೈರ್ಯ ತುಂಬಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ವಾರ್ಡ್ ಸಮಿತಿಗಳನ್ನು ರಚಿಸಲಾಗಿದೆ. ಬೆಂಗಳೂರು ಮಹಾನಗರದ 198 ವಾರ್ಡ್​ಗಳಲ್ಲಿ ಆಯಾ ಕಾಪೋರೇಟರ್ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು, ಬಿಬಿಎಂಪಿ ಎಇಇ, ಕಂದಾಯ ಅಧಿಕಾರಿಯನ್ನು ಒಳಗೊಂಡು 15-20 ಸದಸ್ಯ ಬಲದ ಸಮಿತಿಗಳು ರಚನೆಯಾಗಿವೆ.

    ಇದನ್ನೂ ಓದಿ: ‘ನಿನ್ನೇ ಮದುವೆ ಆಗ್ತೇನೆ ಚಿನ್ನಾ ಅದಕ್ಕೂ ಮೊದ್ಲು ಮನೆ ಬೇಡ್ವಾ.. ಸ್ವಲ್ಪ ಹಣ ಅಕೌಂಟ್​ಗೆ ಹಾಕು.!’

    ಕೋವಿಡ್ ನಿಯಂತ್ರಿಸಲು ಸಮುದಾಯದ ಸಹಭಾಗಿತ್ವವು ಅಷ್ಟೇ ಮುಖ್ಯವಾಗಿದ್ದು, ಇದಕ್ಕಾಗಿ ವಾರ್ಡ್​ವಾರು ಸಮಿತಿಗಳ ರಚನೆ ಪ್ರಕ್ರಿಯೆ ಪೂರ್ಣಗೊಂಡಿದೆ. ಚುರುಕಾಗಿ ಪಾಲ್ಗೊಳ್ಳುವುದಕ್ಕೆ ಹುರಿದುಂಬಿಸಿ, ಅಗತ್ಯ ಮಾಹಿತಿ ಹಾಗೂ ತರಬೇತಿ ಮೂಲಕ ಕಾರ್ಯಾಚರಣೆಗೆ ಸನ್ನದ್ಧಗೊಳಿಸಲಾಗುತ್ತಿದೆ.
    | ಎಲ್.ಕೆ. ಅತೀಕ್
    ವಾರ್ಡ್ ಸಮಿತಿಗಳ ರಾಜ್ಯ ಮೇಲುಸ್ತುವಾರಿ

    ಏಕಕಾಲಕ್ಕೆ ಸಭೆ: ಈ ಸಮಿತಿಗಳು ಸೋಮವಾರ ಬೆಳಗ್ಗೆ 10ಕ್ಕೆ ಏಕಕಾಲದಲ್ಲಿ ಸಭೆ ಸೇರಲಿರುವುದು ವಿಶೇಷ. ಆಯಾ ವಾರ್ಡ್​ನ ಸ್ಥಿತಿಗತಿ ಸಮೀಕ್ಷೆ, ಸ್ಥಳದಲ್ಲಿಯೇ ಪರಿಹಾರ ಕ್ರಮಗಳ ಕುರಿತು ರ್ಚಚಿಸಿ, ಸ್ಪಷ್ಟವಾದ ಕಾರ್ಯಸೂಚಿಯನ್ನು ಸಿದ್ಧಪಡಿಸಲಿವೆ. ಕಾರ್ಯಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸಿಗೆ ರಾಜ್ಯ ಸರ್ಕಾರದತ್ತ ಕೈಚಾಚಿಲ್ಲ. ಬಿಬಿಎಂಪಿ ತನ್ನದೇ ಆದ ಆರ್ಥಿಕ ಸಂಪನ್ಮೂಲದಲ್ಲಿ ಪ್ರತಿ ವಾರ್ಡ್​ಗೆ 20 ಲಕ್ಷ ರೂ. ಅನುದಾನ ಕಾದಿರಿಸಿದ್ದು, ತುರ್ತು ಅಗತ್ಯದ ಪರಿಹಾರ ಕ್ರಮಗಳಿಗೆ ವಿನಿಯೋಗಿಸಲಿದೆ. ವಾರ್ಡ್​ವಾರು ಸಮಿತಿಗಳಿಗೆ ರಾಜ್ಯ ಮೇಲಸ್ತುವಾರಿಯೂ ಆದ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್, ವಾರ್ಡ್ ಸಮಿತಿಗಳ ಕ್ರಿಯಾಶೀಲ ಕಾರ್ಯನಿರ್ವಹಣೆ ಕುರಿತು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.

    ಇದನ್ನೂ ಓದಿ: ಕೆಲಸ ಕೊಡಿಸ್ತೇವೆ ಅಂದ್ರು, ನಾಲ್ಕಾರು ಉದ್ಯೋಗಾಕಾಂಕ್ಷಿಗಳಿಂದ 3 ಲಕ್ಷ ರೂಪಾಯಿ ಎಗರಿಸಿದ್ರು!

    ಯೂಟ್ಯೂಬ್​ನಲ್ಲಿ ತರಬೇತಿ: ಬೆಂಗಳೂರು ಹೊರತುಪಡಿಸಿ ರಾಜ್ಯದ ಇನ್ನುಳಿದ 281 ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ 6,800 ವಾರ್ಡ್​ಗಳಲ್ಲಿ ಕರೊನಾ ನಿರ್ವಹಣೆ ಸಮಿತಿಗಳು ರಚನೆಯಾಗಿವೆ. ಆಯಾ ವಾರ್ಡ್​ನ ಸದಸ್ಯ ಈ ಸಮಿತಿಗೆ ಸದಸ್ಯರಾಗಿದ್ದು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ 8-10 ಸದಸ್ಯರ ಸಮಿತಿಗಳು ರಚನೆಯಾಗಿವೆ.

    ಸಮಿತಿ ಸದಸ್ಯರಿಗೆ ಕಾರ್ಯಕೌಶಲ, ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಸೋಮವಾರ ಬೆಳಗ್ಗೆ 11ಕ್ಕೆ ಯೂಟ್ಯೂಬ್ ಮೂಲಕ ತರಬೇತಿ ನೀಡಲಾಗುತ್ತಿದೆ. ಸೂಕ್ತ ಮಾಹಿತಿ ಒದಗಿಸಿ, ಸಂದೇಹ ನಿವಾರಿಸಿಕೊಳ್ಳಲು ಪ್ರಶ್ನೆಗಳನ್ನು ಕೇಳಲು ಅವಕಾಶ ಕಲ್ಪಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಇತ್ಯಾದಿ ಪ್ರಾಥಮಿಕ ಹಂತದ ಚಟುವಟಿಕೆಗಳ ಖರ್ಚು-ವೆಚ್ಚಗಳನ್ನು ಸ್ಥಳೀಯವಾಗಿ ಭರಿಸಿಕೊಳ್ಳಬೇಕು. ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳು ಎಸ್​ಎಫ್​ಸಿ ಅಥವಾ ಇತರ ಮೂಲದಿಂದ ಈ ವೆಚ್ಚ ಸರಿದೂಗಿಸಲು ಅವಕಾಶವಿದೆ.

    ಇದನ್ನೂ ಓದಿ: VIDEO: ವಿರಳ ಹಳದಿ ಬಣ್ಣದ ಆಮೆ ಪತ್ತೆ

    ಗ್ರಾಮ ಪಂಚಾಯಿತಿ ಮಟ್ಟದಲ್ಲಿ 6,000 ಟಾಸ್ಕ್ ಫೋರ್ಸ್​ಗಳನ್ನು ರಚಿಸಿದ ಮಾದರಿಯಲ್ಲೇ ಗ್ರಾಮ ಮಟ್ಟದ ಟಾಸ್ಕ್​ಫೋರ್ಸ್​ಗಳು ಅಸ್ತಿತ್ವಕ್ಕೆ ಬಂದಿವೆ. ಈ ಸಮಿತಿಗೆ ಚುನಾಯಿತ ಸದಸ್ಯರಿಲ್ಲದ ವಾರ್ಡ್ ಗಳಲ್ಲಿ ಆಸಕ್ತ ಮಾಜಿ ಕಾಪೋರೇಟರ್, ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಇದನ್ನೂ ಓದಿ: ಗಡಿಯಲ್ಲಿ ಗುಂಡು ಹಾರಿಸೋಕೆ ನೇಪಾಳ ಪೊಲೀಸರೂ ಶುರುಮಾಡಿದ್ರು!: ಭಾರತೀಯನಿಗೆ ಗಾಯ

    ವಾರ್ಡ್ ಸಮಿತಿಗಳ ಜವಾಬ್ದಾರಿಗಳೇನು?: ಸೋಂಕು ದೃಢಪಟ್ಟ ವ್ಯಕ್ತಿಯ ಸಂಪರ್ಕಿತರ ಪತ್ತೆ, ಆರೋಗ್ಯ ಸಮೀಕ್ಷೆಗೆ ನೆರವು, ರೋಗ ಲಕ್ಷಣರಹಿತರು ಇಲ್ಲವೇ ಲಘು ಪ್ರಮಾಣದ ರೋಗ ಲಕ್ಷಣವುಳ್ಳವರಿಗೆ ಅವಕಾಶವಿದ್ದರೆ ಮನೆಯಲ್ಲೇ ಕ್ವಾರಂಟೈನ್​ನಲ್ಲಿ ಇರಲು ಸಲಹೆ, ಕುಟುಂಬ ಸದಸ್ಯರಿಗೆ ತಿಳಿವಳಿಕೆ, ತೊಂದರೆ ನೀಡದಂತೆ ಅಕ್ಕ-ಪಕ್ಕದವರಿಗೂ ಅರಿವು, ಹಿರಿಯರ ಜತನ, ಮಾಸ್ಕ್ ಧರಿಸುವುದು, ಸ್ವಚ್ಚತೆ, ಸುರಕ್ಷಿತ ಅಂತರ ಪಾಲನೆ ಇತ್ಯಾದಿ ಮುನ್ನೆಚ್ಚರಿ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಸಮಿತಿಗಳ ಜವಾಬ್ದಾರಿಯಾಗಿದೆ.

    ಫಾರ್ಮಾ ವಿದ್ಯಾರ್ಥಿಗಳಿಗೆ ಸಿಗುತ್ತೆ ಪ್ರಮಾಣಪತ್ರ: ಆದ್ರೆ ಷರತ್ತು ಅನ್ವಯ ಅಂತಿದೆ ರಾಜೀವ್ ಗಾಂಧಿ ಆರೋಗ್ಯ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts