More

    ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪರಿಶೀಲನೆ

    ದೇವದುರ್ಗ: ಕುಡಿವ ನೀರು, ಬೀದಿ ದೀಪ, ರಸ್ತೆ ಅಭಿವೃದ್ಧಿ, ಅಂಗನವಾಡಿ ಕೇಂದ್ರಗಳಿಗೆ ಮೂಲಸೌಲಭ್ಯಕ್ಕೆ ಅನುದಾನ ಮೀಸಲಿಡುವಂತೆ ಅಧಿಕಾರಿಗಳಿಗೆ ಸಹಾಯಕ ಆಯುಕ್ತೆ ಮಹೆಬೂಬಿ ಸೂಚಿಸಿದರು.

    ಪುರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಬುಧವಾರ ಮಾತನಾಡಿದರು. ಎಸ್‌ಎಫ್‌ಸಿ 71 ಲಕ್ಷ ರೂ. ಅನುದಾನದಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಾರ್ಡ್‌ಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಶೇ.5 ಅನುದಾನವನ್ನು ಅಂಗವಿಕಲರ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಆಗಿರುವ ಕೆಲಸಗಳಿಗೆ ಅನುದಾನ ಬಳಕೆ ಮಾಡುವುದಕ್ಕಿಂತ ಬೇರೆ ಅಭಿವೃದ್ಧಿಗೆ ಆದತ್ಯೆ ನೀಡಬೇಕು. ವಾರ್ಡ್ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಎಲ್ಲ ಸದಸ್ಯರ ಅನುಮತಿ ಅಗತ್ಯವಿದೆ. ಇನ್ನೊಂದು ಪ್ರತ್ಯೇಕ ಸಭೆ ಮಾಡಿ ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸುವೆ ಎಂದರು.

    ತಬುಸುಮ್ ಶಾಲಂ ಉದ್ದಾರ್ ಮಾತನಾಡಿ, ಹಲವು ವಾರ್ಡ್‌ಗಳಲ್ಲಿ ಶೌಚಗೃಹಗಳ ಕೊರತೆಯಿದ್ದು, ಕೆಲವು ಕಡೆ ಕಟ್ಟಿದ್ದರೂ ಉದ್ಘಾಟನೆ ಮಾಡಿಲ್ಲ. ಇದರಿಂದ ಮಹಿಳೆಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಸೌಲಭ್ಯ ಇಲ್ಲದೆ ಮಕ್ಕಳು ಹಾಗೂ ಮಹಿಳೆಯರು ತೊಂದರೆ ಪಡುತ್ತಿದ್ದಾರೆ. ಸಮಸ್ಯೆಗಳ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗುತ್ತಿದೆ. ಸೂಕ್ತ ಅನುದಾನ ಕಾಯ್ದಿರಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

    ಸಮಸ್ಯೆ ಇರುವ ವಾರ್ಡ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಜನರ ದೂರು ಆಲಿಸಬೇಕು. ಸಣ್ಣ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ತಾಪಮಾನ ಹೆಚ್ಚಾದರೆ ಕುಡಿವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕುಡಿವ ನೀರನ್ನು ಸಮರ್ಪಕವಾಗಿ ಬಳಕೆ ಹಾಗೂ ಪೂರೈಕೆ ಮಾಡಬೇಕು ಎಂದು ಸಹಾಯಕ ಆಯುಕ್ತೆ ತಿಳಿಸಿದರು.

    ನಿಮ್ಮ ವಾರ್ಡ್‌ನಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ಸದಸ್ಯೆಯರಿಗೆ ಸಹಾಯಕ ಆಯುಕ್ತೆ ತಿಳಿಸಿದ್ದರಿಂದ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು. 15ನೇ ಹಣಕಾಸು, ಎಸ್‌ಎಫ್‌ಸಿ ಸೇರಿ 2.87 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಕ್ರಿಯೆ ಯೋಜನೆಗೆ ಅನುಮೋದನೆ ಪಡೆಯಲಾಯಿತು. ಸದಸ್ಯರಾದ ಶರಣಗೌಡ ಗೌರಂಪೇಟೆ, ಮಾನಪ್ಪ ಮೇಸ್ತ್ರಿ, ವೆಂಕಟೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts