More

    ವಾರ್ಡ್ ವಿಂಗಡಣೆ ಆಧಾರದ ಮೇಲೆ ಪಾಲಿಕೆಗೆ ಚುನಾವಣೆ

    ಬೆಳಗಾವಿ: ವಾರ್ಡ್ ವಿಂಗಡಣೆ, ಮೀಸಲಾತಿ ಇನ್ನಿತರ ಕಾರಣಗಳಿಂದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ 2018ರ ವಾರ್ಡ್ ವಿಂಗಡಣೆ ಆಧಾರದ ಮೇಲೆ ಚುನಾವಣೆ ಜರುಗುವ ಸಾಧ್ಯತೆಯಿದೆ.

    ಪಾಲಿಕೆ ಚುನಾವಣೆ ಸಂಬಂಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರ 2018ರಲ್ಲಿ ಪಾಲಿಕೆಯ ವಾರ್ಡ್‌ಗಳ ವಿಂಗಡಣೆ ಮಾಡಿ ಹೊರಡಿಸಿದ್ದ ಅಧಿಸೂಚನೆ ಆಧಾರದ ಮೇಲೆ ವಾರ್ಡ್ ಮೀಸಲಾತಿ ಪರಿಷ್ಕರಿಸಿ ಚುನಾವಣೆ ಜರುಗಿಸುವ ಕುರಿತು ಯೋಜನೆ ರೂಪಿಸಿದೆ.

    ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ 2018, 2019ರಲ್ಲಿ ಹೊರಡಿಸಿರುವ ಅಧಿಸೂಚನೆ ವಾಪಸ್ ಪಡೆದುಕೊಳ್ಳವುದಾಗಿ ಕೋರ್ಟ್‌ಗೆ ತಿಳಿಸಿದೆ. ಇದು ವಾರ್ಡ್‌ಗಳ ಮರು ವಿಂಗಡಣೆ ಮಾಡಬೇಕೋ ಅಥವಾ ಬಿಡಬೇಕೋ ಎಂಬ ಗೊಂದಲಕ್ಕೆ ಕಾರಣವಾಗಿದೆ. ಕೊನೆಯ ಗಳಿಗೆಯಲ್ಲಿ ವಾರ್ಡ್ ವಿಂಗಡಣೆ ಕೈ ಬಿಟ್ಟು ವಾರ್ಡ್ ಮೀಸಲಾತಿ ಪಟ್ಟಿ ಪರಿಷ್ಕರಿಸಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.

    ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು, ಪಾಲಿಕೆಯ ಮಾಜಿ ಸದಸ್ಯರು ವಾರ್ಡ್ ಮರು ವಿಂಗಡಣೆ ಜತೆಗೆ ವಾರ್ಡ್ ಮೀಸಲಾತಿ ಪರಿಷ್ಕರಿಸಬೇಕು. ವಾರ್ಡ್ ವಿಂಗಡಣೆ ಕೈಬಿಟ್ಟು ಮೀಸಲಾತಿ ಮಾತ್ರ ಪರಿಷ್ಕರಿಸುವುದು ಬೇಡ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ತಿಂಗಳ ಅಂತ್ಯದ ಒಳಗೆ ಸರ್ಕಾರ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಮೇಲೆ ಸ್ಪಷ್ಟ ನಿರ್ಣಯ ಹೊರಬೀಳಲಿದೆ.

    2014ರಲ್ಲಿ ಪಾಲಿಕೆ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ 58 ಸದಸ್ಯರ ಅಧಿಕಾರಾವಧಿ 2019ರ ಮಾರ್ಚ್ 10ಕ್ಕೆ ಪೂರ್ಣಗೊಂಡಿತ್ತು. ಇದೀಗ ಚುನಾಯಿತ ಸದಸ್ಯರು ಇಲ್ಲದ ಕಾರಣ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆಡಳಿತಾಧಿಕಾರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts