More

    ಕ್ರಿಕೆಟ್​ ಜೀವನದ 2 ವಿಷಾದಗಳನ್ನು ಹೇಳಿಕೊಂಡ ಸಚಿನ್ ತೆಂಡುಲ್ಕರ್!

    ಮುಂಬೈ: ಎರಡು ದಶಕಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳನ್ನು ಆಡಿ 100 ಶತಕಗಳನ್ನು ಒಳಗೊಂಡಂತೆ 34 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಆದರೂ ಅವರಿಗೆ ಕ್ರಿಕೆಟ್ ಜೀವನದ ಬಗ್ಗೆ ಎರಡು ವಿಷಾದಗಳು ಇನ್ನೂ ಉಳಿದುಕೊಂಡಿವೆ. ಅವು ಯಾವುವು ಗೊತ್ತೇ?

    ಕ್ರಿಕೆಟ್​ ಜೀವನದ 2 ವಿಷಾದಗಳನ್ನು ಹೇಳಿಕೊಂಡ ಸಚಿನ್ ತೆಂಡುಲ್ಕರ್!

    ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ಸುನೀಲ್ ಗಾವಸ್ಕರ್ ಜತೆಗೆ ಮತ್ತು ವೆಸ್ಟ್ ಇಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ವಿರುದ್ಧ ಆಡದಿರುವ ಬಗ್ಗೆ ಸಚಿನ್ ತೆಂಡುಲ್ಕರ್ ಈಗಲೂ ವಿಷಾದ ಹೊಂದಿದ್ದಾರಂತೆ! ‘ನಾನು ಎರಡು ವಿಷಾದಗಳನ್ನು ಹೊಂದಿರುವೆ. ಮೊದಲನೆಯದು, ಸುನೀಲ್ ಗಾವಸ್ಕರ್ ಅವರೊಂದಿಗೆ ಆಡದಿರುವುದು. ಬಾಲ್ಯದಿಂದಲೇ ಗಾವಸ್ಕರ್ ನನ್ನ ಬ್ಯಾಟಿಂಗ್ ಹೀರೋ ಆಗಿದ್ದರು. ಅವರನ್ನೊಳಗೊಂಡ ತಂಡದ ಭಾಗವಾಗಿ ಆಡದಿರುವುದು ನನ್ನ ವಿಷಾದವಾಗಿಯೇ ಉಳಿದಿದೆ. ನಾನು ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದಕ್ಕೆ ಎರಡು ವರ್ಷ ಮುನ್ನವೇ ಗಾವಸ್ಕರ್ ವಿದಾಯ ಹೇಳಿದ್ದರು’ ಎಂದು ಸಚಿನ್ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿ: VIDEO | ಧೋನಿ ಫಾರ್ಮ್​ಹೌಸ್​​ನಲ್ಲಿ ಕುದುರೆಯನ್ನು ಮುದ್ದಿಸುವ ವಿಡಿಯೋ ವೈರಲ್​

    ‘ನನ್ನ ಬಾಲ್ಯದ ಹೀರೋ ಸರ್ ವಿವಿಯನ್ ರಿಚರ್ಡ್ಸ್ ವಿರುದ್ಧ ಆಡದಿರುವುದು ನನ್ನ ಜೀವನದ ಮತ್ತೊಂದು ವಿಷಾದ. ಕೌಂಟಿ ಕ್ರಿಕೆಟ್‌ನಲ್ಲಿ ಒಮ್ಮೆ ಅವರ ವಿರುದ್ಧ ಆಡಿದ್ದೆ. ಆದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ವಿರುದ್ಧ ಆಡದ ನೋವು ಇನ್ನೂ ಉಳಿದುಕೊಂಡಿದೆ. ಸರ್ ವಿವ್ ರಿಚರ್ಡ್ಸ್ 1991ರಲ್ಲಿ ಕ್ರಿಕೆಟ್‌ಗೆ ಹೇಳಿದ್ದರು. ನಾವಿಬ್ಬರು ಎರಡು ವರ್ಷ ಏಕಕಾಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿದ್ದರೂ, ನಮ್ಮಿಬ್ಬರ ತಂಡಗಳು ಪರಸ್ಪರ ಮುಖಾಮುಖಿ ಆಗಿರಲಿಲ್ಲ’ ಎಂದು ಸಚಿನ್ ವಿವರಿಸಿದ್ದಾರೆ.

    16 ಬಾರಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್​ಗೆ ಕ್ರಿಕೆಟ್​ ದಿಗ್ಗಜ ರಾಹುಲ್​ ದ್ರಾವಿಡ್​ ಮಾತೇ ಸ್ಫೂರ್ತಿ..

    ಪತ್ನಿಗೆ ತೆಲುಗಿನಲ್ಲಿ ರೊಮ್ಯಾಂಟಿಕ್​ ಸಂದೇಶ ರವಾನಿಸಿದ ಡೇವಿಡ್​ ವಾರ್ನರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts