More

    ತಾತನ ಹಾದಿಯಲ್ಲಿ ನಡೆಯುವೆ

    ಕೆ.ಎಂ.ದೊಡ್ಡಿ: ನನ್ನ ತಾತ, ಮಾಜಿ ಸಂಸದ ಜಿ.ಮಾದೇಗೌಡರ ರೈತಪರ ಕಾಳಜಿ, ಹೋರಾಟ ನನಗೆ ಸ್ಫೂರ್ತಿಯಾಗಿದ್ದು, ಅವರ ಹಾದಿಯಲ್ಲಿ ನಡೆಯುತ್ತೇನೆ ಎಂದು ಎಂದು ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು ಮಾದೇಗೌಡ ತಿಳಿಸಿದರು.

    ಸಮೀಪದ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಆಶಯ್ ಜಿ.ಮಧು ಅಭಿಮಾನಿ ಬಳಗ, ಬೆಂಗಳೂರಿನ ಆರ್.ವಿ. ದಂತ ಕಾಲೇಜು ಮತ್ತು ಆಸ್ಪತ್ರೆ, ಭಾರತೀನಗರದ ಜಿ. ಮಾದೇಗೌಡ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪಥಿ ಆ್ಯಂಡ್ ಯೋಗ ವಿಜ್ಞಾನ ಕಾಲೇಜು, ಆಸ್ಟರ್ ಜಿ. ಮಾದೇಗೌಡ ಆಸ್ಪತ್ರೆ, ಕೆ.ಬೆಳ್ಳೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಆರೋಗ್ಯ ಉಚಿತ ತಪಾಸಣಾ, ಪ್ರಕೃತಿ ಮತ್ತು ಯೋಗ ಚಿಕಿತ್ಸೆ ಹಾಗೂ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ನನ್ನ ತಾತ ಜಿ.ಮಾದೇಗೌಡ ಸ್ವಂತಕ್ಕಾಗಿ ಏನನ್ನೂ ಸಂಪಾದನೆ ಮಾಡಿಲ್ಲ. ಗುರುದೇವರಹಳ್ಳಿಯಲ್ಲಿದ್ದ 2 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಅವರು ಸಾಮಾಜಿಕ ಕಳಕಳಿ ಉಳ್ಳಂತಹ ಮಹಾನ್ ವ್ಯಕ್ತಿಯಾಗಿದ್ದು ಗಾಂಧಿಗ್ರಾಮದ ಕನಸು ಕಂಡಿದ್ದರು. ಅದನ್ನು ನನ್ನ ತಂದೆ ಮಧು ಜಿ.ಮಾದೇಗೌಡ ಈಡೇರಿಸಲು ಪಣತೊಟ್ಟಿದ್ದಾರೆ ಎಂದರು.

    ಗ್ರಾಮೀಣ ಭಾಗದ ಜನರಿಗೆ ಆರೋಗ್ಯ, ರೈತರ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ನನ್ನ ಮುಖ್ಯ ಧ್ಯೇಯವಾಗಿದೆ. ನಾನು ಯುವಕನಾಗಿದ್ದು, ಜನರ ಅಗತ್ಯತೆಗಳನ್ನು ಅರಿಯಲು ಸಾಧ್ಯವಾಗದೆ ಇರಬಹುದು. ಆದರೆ ಈ ಭಾಗದ ಯಾವುದೇ ಹಳ್ಳಿಗಳ ಜನರು ತಮಗೆ ಅಗತ್ಯವಿರುವ ಮೂಲಸೌಲಭ್ಯಗಳ ಬಗ್ಗೆ ತಿಳಿಸಿದ್ದಲ್ಲಿ ನಾನೂ ಆ ಬಗ್ಗೆ ಗಮನಹರಿಸಿ ಅವರಿಗೆ ನೆರವಾಗುತ್ತೇನೆ ಎಂದು ಭರವಸೆ ನೀಡಿದರು.

    ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಜಿ.ಮಾದೇಗೌಡ ಅವರ ನಂತರ ಮತ್ತೊಬ್ಬ ಉತ್ತಮ ಜನಸೇವಕನನ್ನು ಆಶಯ್ ಜಿ.ಮಧು ಅವರಲ್ಲಿ ಕಾಣಬಹುದು. ಉತ್ತಮ ಜನಸೇವೆಯ ಮನಸ್ಸಿರುವ ಅವರು ಎಲ್ಲ ಬಡ ಜನರಿಗೆ ಸ್ಪಂದಿಸಲಿದ್ದಾರೆ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಸದಸ್ಯೆ ದಿವ್ಯಾ ರಾಮಚಂದ್ರಶೆಟ್ಟಿ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷ ಸಿ.ಕೆಂಪರಾಜು ಅಧ್ಯಕ್ಷತೆ ವಹಿಸಿದ್ದರು. ತಮೀಜ್ ಮಣಿ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ವಿಭಾಗೀಯ ನೋಡಲ್ ಅಧಿಕಾರಿ ಡಾ.ಬಿ.ಶರತ್‌ಬಸವೇಗೌಡ, ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಅಭಿಯಂತರ ಹಾಗಲಹಳ್ಳಿ ಬಸವರಾಜೇಗೌಡ, ತಾ.ಪಂ. ಮಾಜಿ ಸದಸ್ಯ ಬಿ.ಗಿರೀಶ್, ಬಾರತೀ ಕಾಲೆಜಿನ ಸಹಾಯಕ ಪ್ರಾಧ್ಯಾಪಕ ಬಿ.ಕೆ.ಕೃಷ್ಣ. ಡಾ.ಬಿ.ಸಿ.ಬಾಬು, ಮುಖ್ಯಶಿಕ್ಷಕ ರಾಜೇಂದ್ರರಾಜೇಅರಸ್, ಮುಖಂಡರಾದ ಆರ್.ಸಿದ್ದಪ್ಪ. ಕಾರ್ಕಹಳ್ಳಿ ಸ್ವರೂಪ್ ಬಸವೇಗೌಡ, ಹಾಗಲಹಳ್ಳಿ ಪುಟ್ಟಸ್ವಾಮಿಗೌಡ, ವಿನಯ್ ಹೊನ್ನೇಗೌಡ, ಬನ್ನಹಳ್ಳಿ ಶಿವಲಿಂಗೇಗೌಡ ಸೇರಿದಂತೆ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts