More

    ‘ನಮಸ್ತೆ ಟ್ರಂಪ್​’ಗಾಗಿ ಸಿದ್ಧಗೊಳ್ಳುತ್ತಿರುವ ಮೊಟೆರಾ ಕ್ರೀಡಾಂಗಣದಲ್ಲಿ ಎರಡು ಕಡೆ ಸಣ್ಣ ಅವಘಡ…ಯಾರೂ ಗಾಯಗೊಂಡಿಲ್ಲವೆಂದ ಪೊಲೀಸರು

    ನವದೆಹಲಿ: ಅಹಮದಾಬಾದ್​ನಲ್ಲಿ ಹೊಸದಾಗಿ ನಿರ್ಮಿತವಾದ ಜಗತ್ತಿನ ಅತಿದೊಡ್ಡ ಕ್ರೀಡಾಂಗಣವಾದ ಮೊಟೆರಾ ಸ್ಟೇಡಿಯಂನಲ್ಲಿ ನಾಳೆ ನಮಸ್ತೆ ಟ್ರಂಪ್​ ಕಾರ್ಯಕ್ರಮ ನಡೆಯಲಿದ್ದು, ಅಲ್ಲೆಲ್ಲ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.

    ಮೊಟೆರಾ ಕ್ರೀಡಾಂಗಣವನ್ನು ವಿವಿಐಪಿಗಳು ಅಂದರೆ ಡೊನಾಲ್ಡ್​ ಟ್ರಂಪ್, ಮೋದಿ ಮತ್ತಿತರ ವಿಶೇಷ ಗಣ್ಯರು ಪ್ರವೇಶ ಮಾಡುವುದಕ್ಕಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಪ್ರವೇಶ ದ್ವಾರ ಇಂದು ಬೆಳಗ್ಗೆ ಕುಸಿದುಬಿದ್ದಿದೆ. ಜೋರಾಗಿ ಗಾಳಿ ಬೀಸಿದ ಕಾರಣ ಈ ತಾತ್ಕಾಲಿಕ ಪ್ರವೇಶ ಗೇಟ್​ ಕೆಳಗೆ ಬಿದ್ದಿದೆ ಎಂದು ಹೇಳಲಾಗಿದೆ.

    ವಿವಿಐಪಿ ಗೇಟ್​ ಗಾಳಿಯಿಂದ ಕುಸಿದಿದ್ದನ್ನು ಅಲ್ಲಿಯೇ ಇದ್ದವರೊಬ್ಬರು ವಿಡಿಯೋ ಮಾಡಿದ್ದಾರೆ. ನಂತರ ಇದನ್ನು ಸ್ಥಳೀಯ ಸುದ್ದಿ ಚಾನೆಲ್​ಗಳಲ್ಲಿ ಪ್ರಸಾರ ಮಾಡಲಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್​ ಯಾರೂ ಗಾಯಗೊಂಡಿಲ್ಲ.
    ಈ ಗೇಟ್​ನ್ನು ವೆಲ್ಡ್ ಮಾಡಿದ ಸ್ಟೀಲ್​ ರಾಡ್​ಗಳಿಂದ ನಿರ್ಮಿಸಲಾಗಿತ್ತು. ಅದನ್ನು ಬ್ಯಾನರ್​, ಫ್ಲೆಕ್ಸ್​ಗಳಿಂದ ಮುಚ್ಚಲಾಗಿತ್ತು. ಇದೊಂದು ದೊಡ್ಡ ಘಟನೆಯಲ್ಲ ಎಂದು ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇದೊಂದೇ ಅಲ್ಲ, ಕ್ರೀಡಾಂಗಣದ ಮುಖ್ಯ ಪ್ರವೇಶ ದ್ವಾರವೂ ಗಾಳಿಯಿಂದ ಕುಸಿದುಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿ ಕೂಡ ಯಾರಿಗೂ ಗಾಯವಾಗಿಲ್ಲ ಎಂದು ವರದಿಯಾಗಿದೆ.

    ಡೊನಾಲ್ಡ್​ ಟ್ರಂಪ್​ ಮತ್ತವರ ಪತ್ನಿ ಮೆಲಾನಿಯಾ ಅವರು ನಾಳೆ ಬೆಳಗ್ಗೆ 11 ಗಂಟೆಯಷ್ಟೊತ್ತಿಗೆ ಅಹಮದಾಬಾದ್​ ತಲುಪಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts