More

    ಮತದಾರರ ಯಾದಿ; ಈಶಾನ್ಯದಲ್ಲಿ ಹೆಚ್ಚು, ಬೆಂಗಳೂರಿನಲ್ಲೇ ಕಡಿಮೆ !

    ಬೆಂಗಳೂರು: ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ವಿಧಾನ ಪರಿಷತ್‌ನ ಖಾಲಿಯಿರುವ ನಾಲ್ಕು ಶಿಕ್ಷಕರ ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ಹೊಸದಾಗಿ ಮತದಾರರ ಯಾದಿ ಸಿದ್ಧಪಡಿಸಿದೆ.

    ಮತದಾರರ ಪಟ್ಟಿಗಳು ಸಂಬಂಧಿಸಿದ ಮತದಾರರ ನೋಂದಣಿ ಅಧಿಕಾರಿಗಳು/ ಪ್ರಾದೇಶಿಕ ಆಯುಕ್ತರು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು/ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ (ceo.karnataka.gov.in) ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ.

    ಅರ್ಹ ಪದವೀಧರರು ಮತ್ತು ಶಿಕ್ಷಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಚುನಾವಣೆಗಳಿಗೆ ನಾಮನಿರ್ದೇಶನದ ಕೊನೆಯ ದಿನಾಂಕದ 10 ದಿನಗಳ ಮೊದಲು ನಿರಂತರ ಪರಿಷ್ಕರಣೆ ಅವಧಿಯಲ್ಲಿ ನಮೂನೆ 18 ಮತ್ತು 19ರಲ್ಲಿ ಅರ್ಜಿ ಸಲ್ಲಿಸಲು ಅಯೋಗ ಕೋರಿದೆ. ಮಾಹಿತಿಗೆ ಜಾಲ ತಾಣ ( https://ceo.karnataka.gov.in/341/teachers-and-graduatesconstituencies-2024/kn)ಕ್ಕೆ ಭೇಟಿ ನೀಡಬಹುದಾಗಿದೆ.

    ಅತಿ ಹೆಚ್ಚು, ಅತಿಕಡಿಮೆ ಮತದಾರರು

    ಅಂತಿಮ ಮತದಾರರ ಪಟ್ಟಿ ಪ್ರಕಾರ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಅತಿ ಹೆಚ್ಚು ಒಟ್ಟು 1,50,184 ಮತದಾರರಿದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಅತಿಕಡಿಮೆ ಒಟ್ಟು 16,063 ಮತದಾರರಿದ್ದಾರೆ.
    ಈಶಾನ್ಯ ಪದವೀಧರ ಕ್ಷೇತ್ರ: ಗಂಡು- 95,104, ಹೆಣ್ಣು- 55,061, ಇತರೆ- 19, ಒಟ್ಟು 1,50,184
    ನೈಋತ್ಯ ಪದವೀಧರ ಕ್ಷೇತ್ರ: ಗಂಡು- 38,051, ಹೆಣ್ಣು- 36,162, ಇತರೆ-5, ಒಟ್ಟು 74,218
    ಬೆಂಗಳೂರು ಪದವೀಧರ ಕ್ಷೇತ್ರ: ಗಂಡು- 48,236, ಹೆಣ್ಣು- 51,852, ಇತರೆ- 12, ಒಟ್ಟು 1,00,100
    ಆಗ್ನೇಯ ಶಿಕ್ಷಕರ ಕ್ಷೇತ್ರ: ಗಂಡು- 14,714, ಹೆಣ್ಣು- 8,851, ಇತರೆ-0, ಒಟ್ಟು 23,565
    ನೈಋತ್ಯ ಶಿಕ್ಷಕರ ಕ್ಷೇತ್ರ: ಗಂಡು- 9,042, ಹೆಣ್ಣು- 10,795, ಇತರೆ-0, ಒಟ್ಟು 19,837
    ದಕ್ಷಿಣ ಶಿಕ್ಷಕರ ಕ್ಷೇತ್ರ: ಗಂಡು- 10,386, ಹೆಣ್ಣು- 8,087, ಇತರೆ-2, ಒಟ್ಟು 18,475
    ಬೆಂಗಳೂರು ಶಿಕ್ಷಕರ ಕ್ಷೇತ್ರ: ಗಂಡು- 5,952, ಹೆಣ್ಣು- 10,106, ಇತರೆ-5, ಒಟ್ಟು 16,063.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts