More

    ಕನವಳ್ಳಿಯಲ್ಲಿ ಮತದಾರರ ಪ್ರತಿಭಟನೆ

    ಗುತ್ತಲ: ಮತದಾರರ ಯಾದಿಯಲ್ಲಿ ಸುಮಾರು 65 ಜನರ ಹೆಸರುಗಳು ಬಿಡತಕ್ಕವುಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದಕ್ಕೆ ಆಕ್ರೋಶಗೊಂಡ ಸ್ಥಳೀಯ ಮತದಾರರು ಮತದಾನಕ್ಕೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ ಘಟನೆ ಸಮೀಪದ ಕನವಳ್ಳಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ.

    ಗ್ರಾಮದ ಗ್ರಾಪಂ ವಾರ್ಡ್​ನ 3ನೇ ವಾರ್ಡ್ 114 ಹಾಗೂ 144ಎ ಮತಗಟ್ಟೆಯಲ್ಲಿ ಸುಮಾರು 65 ಮತದಾರರ ಹೆಸರುಗಳು ಬಿಡತಕ್ಕವುಗಳ ಪಟ್ಟಿಯಲ್ಲಿ ಪ್ರಕಟವಾಗಿದ್ದವು. ಹೀಗಾಗಿ ಅಧಿಕಾರಿಗಳು ಮತ ಚಲಾಯಿಸಲು ಅವಕಾಶ ನೀಡಲಿಲ್ಲ. ಇದರಿಂದ ಆತಂಕ ಹಾಗೂ ಆಕ್ರೋಶಗೊಂಡ ಮತದಾರರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

    ನಾಮಪತ್ರ ಸಲ್ಲಿಸುವಾಗ ಪಟ್ಟಿಯಲ್ಲಿ 65 ಜನರು ಹೆಸರುಗಳಿದ್ದವು. ಆದರೆ, ಮಂಗಳವಾರ ಬೆಳಗ್ಗೆ ಮತಗಟ್ಟೆ ಅಧಿಕಾರಿಗಳ ಬಳಿ ಇರುವ ಲಿಸ್ಟ್​ನಲ್ಲಿ ಬಿಡತಕ್ಕವುಗಳ ಪಟ್ಟಿಯಲ್ಲಿ ಎಲ್ಲ 65 ಜನರ ಹೆಸರುಗಳು ಸೇರ್ಪಡೆಯಾಗಿವೆ. ಒಂದೇ ಕೋಮಿಗೆ ಸೇರಿದ ಜನರ ಹೆಸರುಗಳು ಬಿಟ್ಟಿದ್ದರಿಂದ ಅನುಮಾನ ಮೂಡುತ್ತಿದೆ ಎಂದು ರಸ್ತೆಯಲ್ಲಿ ಪ್ರತಿಭಟನೆ ಕುಳಿತರು.

    ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಜಿ.ಎಸ್. ಶಂಕರ, ಪ್ರತಿಭಟನಾನಿರತರನ್ನು ಸಮಾಧಾನಪಡಿಸಿ,‘ನಾವು ಮೂರು ಬಾರಿ ಮತದಾರರ ಯಾದಿಯನ್ನು ಪ್ರಕಟ ಮಾಡಿದ್ದೇವೆ. ಮೊದಲೆರಡರಲ್ಲಿ ನಿಮ್ಮ ಹೆಸರುಗಳಿವೆ. ಆದರೆ, ಅಂತಿಮ ಪ್ರಕಟಣೆಯಲ್ಲಿ ಬಿಡತಕ್ಕವುಗಳ ಪಟ್ಟಿಯಲ್ಲಿ ಬಂದಿದೆ. ಇದನ್ನು ನೋಡಿ ಆಕ್ಷೇಪಣೆ ನೀಡಿದ್ದಲ್ಲಿ ನಾವು ಅಂದೇ ಸರಿಪಡಿಸುತ್ತಿದ್ದೆವು’ ಎಂದು ಸಮಜಾಯಿಸಿ ನೀಡಿದರು.

    ನಂತರ ಮುಖಂಡರು, ಪ್ರಮಾದಕ್ಕೆ ಕಾರಣರಾದವರ ಮೇಲೆ ಸೂಕ್ತ ಕಾನೂನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಮನವಿ ಸಲ್ಲಿಸಿ ಪ್ರತಿಭಟನೆ ಹಿಂಪಡೆದರು.

    ಅಬ್ದುಲ್​ಖಾದರ ಗಡ್ಡದ, ಪರಮೇಶಪ್ಪ ಜಾಲಿ, ಮೌಲಸಾಬ ಹೊಸಮನಿ, ಖಾದರಸಾಬ ಝುಂಡೇಕಟ್ಟಿ, ರಮೇಶ ಕೋಡಿಹಳ್ಳಿ, ಮಂಜಪ್ಪ ಯರಿಮನಿ, ನೀಲಪ್ಪ ಸೊಟ್ಟಪ್ಪನವರ, ಫಕೃಸಾಬ ಭೂಶಿ, ರಫೀಕ ಭೂಶಿ, ಜಯೇದಾ ಭೂಶಿ, ಶಹಿನಾ ಕಲ್ಲಂಗಡಿ, ಮೈಮೂನ್ ಝುಂಡೇಕಟ್ಟಿ ಸೇರಿದಂತೆ ಅನೇಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts