More

    ಸ್ವಇಚ್ಛೆಯಿಂದ ಆರ್‌ಸಿಯುಗೆ ಭೂಮಿ

    ಹಿರೇಬಾಗೇವಾಡಿ : ಯಾವುದೇ, ಯಾರದೇ ಒತ್ತಡವಿಲ್ಲದೆ ಸ್ವಇಚ್ಛೆಯಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಭೂಮಿ ಕೊಡಲು ನಾವು ಒಪ್ಪಿದ್ದೇವೆ. ಶಿಕ್ಷಣದ ನೆಪದಲ್ಲಿ ನಮಗೆ ಯಾರೂ ಮೋಸ ಮಾಡಿಲ್ಲ ಎಂದು ಹಿರೇಬಾಗೇವಾಡಿಯ ರೈತರು ಸ್ಪಷ್ಟಪಡಿಸಿದರು.

    ಇಲ್ಲಿನ ಪ್ರಭುದೇವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ರೈತರಾದ ವೈಜನಾಥಗೌಡ ಪಾಟೀಲ, ಪಡಿಗೌಡ ಪಾಟೀಲ, ವಕೀಲ ಯಲಗೌಡ ಪಾಟೀಲ, ಪಡಿಗೌಡ ಅಂಕಲಗಿ, ಭೀಮನಗೌಡ ಪಾಟೀಲ ಹಾಗೂ ಇತರರು ಮಾತನಾಡಿ, ಹಿರೇಬಾಗೇವಾಡಿಯಲ್ಲಿ ಆರ್‌ಸಿಯು ನಿರ್ಮಿಸುವಂತೆ ಸರ್ಕಾರಕ್ಕೆ ಗ್ರಾಪಂ ಪ್ರಸ್ತಾವನೆ ಕಳುಹಿಸಿತ್ತು. ಅದರಂತೆ 70 ಎಕರೆ ಭೂಮಿಯಲ್ಲಿ ಆರ್‌ಸಿಯು ನಿರ್ಮಾಣಕ್ಕೆ ಕಂದಾಯ ಸಚಿವರು ಅನುಮೋದನೆ ನೀಡಿದ್ದಾರೆ. ಆದರೆ, ಇನ್ನುಳಿದ ಹೆಚ್ಚುವರಿ ರೈತರ ಭೂಮಿಗಾಗಿ ಶಿಕ್ಷಣದ ಹೆಸರು ಹೇಳಿ ಭೂಮಿ ನೀಡುವಂತೆ ನಮ್ಮನ್ನು ಯಾರೂ ಮೋಸದಿಂದ ಒಪ್ಪಿಸಿಲ್ಲ. ಗ್ರಾಮದ ಸಮಗ್ರ ಅಬಿವೃದ್ಧಿಯ ದೂರದೃಷ್ಟಿಯಿಂದ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ನಮಗೆ ಯಾವ ಮಧ್ಯವರ್ತಿಗಳೂ ಬೇಡ. ಯೋಗ್ಯ ಬೆಲೆ ಕೊಟ್ಟರೆ ಭೂಮಿ ಕೊಡಲು ನಮ್ಮದೇನೂ ಅಭ್ಯಂತರವಿಲ್ಲ. ಒಟ್ಟಾರೆ ನಮ್ಮೂರಿನಲ್ಲಿ ಆರ್‌ಸಿಯು ಸ್ಥಾಪನೆಯಾಗುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅದರಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿಯಾಗಲಿದೆ. ರೈತರ ಯಾಮಾರಿಸಿ ಭೂಮಿ ಪಡೆಯಲಾಗುತ್ತಿದೆ ಎಂಬ ಊಹಾಪೋಹ ಹೇಳಿಕೆಗಳೆಲ್ಲ ಸುಳ್ಳು ಎಂದು ತಿಳಿಸಿದರು.

    ಸಭೆಯಲ್ಲಿ ಎ.ಡಿ. ಸಾಗರ, ಬಿ.ಎಲ್. ಹೆಗಡೆ, ಬಸವರಾಜ ಕಡೇಮನಿ, ರಾಜು ಹಂಚಿನಮನಿ, ಯಲಗೌಡ ಚ. ಪಾಟೀಲ, ರಾಜಶೇಖರ ಪಾಟೀಲ, ಮಹಾಂತೇಶ ಪಾಟೀಲ, ಬಸವರಾಜ ರೊಟ್ಟಿ, ಅಡಿವೆಪ್ಪ ರೊಟ್ಟಿ, ಚಂಬಣ್ಣ ಪಾಶ್ಚಾಪುರ, ಚೇತನ ಪಾಶ್ಚಾಪುರ, ಬಸಪ್ಪ ವಾಲಿ, ಶಿವರಾಯಗೌಡ ಪಾಟೀಲ, ಅಜ್ಜಪ್ಪ ವಾಲಿ, ರವಿ ವಾಲಿ, ಬಾಬು ಎಮ್ಮಿನಕಟ್ಟಿ, ಮಹಾಂತೇಶ ಪೊಲೇಶಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts