More

    4 ವರ್ಷಗಳ ಜೈಲು ವಾಸ ಅಂತ್ಯ: ಜೈಲಿನಿಂದ ಬಿಡುಗಡೆಯಾದ ಚಿನ್ನಮ್ಮ

    ಬೆಂಗಳೂರು: ನಾಲ್ಕು ವರ್ಷಗಳ ಸುದೀರ್ಘ ಜೈಲು ವಾಸದಿಂದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ನಟರಾಜನ್ ಬಂಧಮುಕ್ತರಾಗಿದ್ದಾರೆ. ಬುಧವಾರ (ಜ. 27) ಬೆಳಗ್ಗೆ ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು.

    ಶಶಿಕಲಾ ಕಳೆದ ನಾಲ್ಕು ವರ್ಷದಿಂದ ಜೈಲು ವಾಸ ಅನುಭವಿಸಿದ್ದಾರೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಗಿದ್ದ ಶಶಿಕಲಾ ಇಂದು ಬಿಡುಗಡೆಯಾಗಿದ್ದಾರೆ. ಇದಕ್ಕೂ ಮುನ್ನ ಸಾವಿರಾರು ಅಭಿಮಾನಿಗಳು ಶಶಿಕಲಾರನ್ನು ಕರೆದೊಯ್ಯಲು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದರು. ಕರೊನಾ ಸೋಂಕು ಹಿನ್ನೆಲೆ ಶಶಿಕಲಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಗುಣಮುಖವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಶಶಿಕಲಾರನ್ನು ಬಂಧಮುಕ್ತಗೊಳಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಿಂದಲೂ ಡಿಸ್ಚಾರ್ಜ್​ ಮಾಡಲಾಗಿದ್ದು, ಕೆಲ ದಿನಗಳ ಕಾಲ ಹೋಮ್​ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿದೆ.

    ಇದನ್ನೂ ಓದಿರಿ: ಕರೊನಾ ಬಂದಿದ್ದು ಶಿವನ ಕೂದಲಿನಿಂದ- ಸ್ವಂತ ಮಕ್ಕಳನ್ನು ಕೊಂದು ಪೊಲೀಸರೆದುರು ಕುಣಿದಾಡಿದರು

    ಜ್ವರ ಮತ್ತು ಬೆನ್ನು ಉರಿ ಹಿನ್ನೆಲೆಯಲ್ಲಿ ಬುಧವಾರ (ಜ.20) ಮಧ್ಯಾಹ್ನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕರೊನಾ ಪರೀಕ್ಷೆ ನಡೆಸಿದಾಗ ಕರೊನಾ ನೆಗೆಟಿವ್​ ವರದಿ ಬಂದಿತ್ತು. ಬೇರೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಎಂಆರ್​ಐ ಸ್ಕ್ಯಾನಿಂಗ್ ಸಲುವಾಗಿ ಗುರುವಾರ (ಜ.21) ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಶಿಕಲಾರನ್ನು ಸ್ಥಳಾಂತರಿಸಿದ್ದರು. ಅಲ್ಲಿ ಮತ್ತೊಮ್ಮೆ ಕರೊನಾ ಪರೀಕ್ಷೆ ಮಾಡಲಾಗಿತ್ತು. ಸೋಂಕು ಇರುವುದು ಖಚಿತವಾಗಿತ್ತು.

    ಶಶಿಕಲಾಗೆ ಟೈಪ್ 2 ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಹೈಪೋಥೈರಾಯ್ಡಿಸಮ್ ಯುಟಿಐ (ಮೂತ್ರಕೋಶದ ಸೋಂಕು), ಶಂಕಿತ ‘ಸಾರಿ’ (ತೀವ್ರ ಉಸಿರಾಟದ ತೊಂದರೆ) ಸಮಸ್ಯೆಯಿಂದಾಗಿ ಬೌರಿಂಗ್​ನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

    ಜಯಲಲಿತಾ ಆಪ್ತೆ ಶಶಿಕಲಾ​ಗೆ ಕರೊನಾ ಸೋಂಕು ದೃಢ! ಬಿಡುಗಡೆ ಮುಂದೂಡಿಕೆ ಸಾಧ್ಯತೆ

    ಶಶಿಕಲಾಗೆ ಉಸಿರಾಟದಲ್ಲಿ ತೊಂದರೆ; ಬೌರಿಂಗ್​ ಆಸ್ಪತ್ರೆಗೆ ದಾಖಲು

    ಬಿಡುಗಡೆಗೆ ವಾರವಿರುವಾಗಲೇ ಶಶಿಕಲಾ ಆರೋಗ್ಯದಲ್ಲಿ ಏರುಪೇರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts