More

    VIDEO-PHOTO| ಆಂಧ್ರ ಅನಿಲ ದುರಂತದ ಮನಕಲಕುವ ಚಿತ್ರಣ

    ವಿಶಾಖಪಟ್ಟಣಂ: ಜಿಲ್ಲೆಯ ಆರ್​.ಆರ್​. ವೆಂಕಟಪುರಂ ಗ್ರಾಮದ ಸಮೀಪವಿರುವ ಎಲ್​.ಜಿ ಪಾಲಿಮರ್ಸ್​ ಇಂಡಿಯಾ ಪ್ರವೈಟ್​ ಲಿಮಿಟೆಡ್​ ಕೆಮಿಕಲ್​ ಫ್ಯಾಕ್ಟರಿಯಲ್ಲಿ ಇಂದು (ಗುರುವಾರ) ಬೆಳಗ್ಗೆ ಸಂಭವಿಸಿದ ವಿಷಾನಿಲ ಸೋರಿಕೆ ದುರಂತದಲ್ಲಿ 10 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

    ಇದನ್ನೂ ಓದಿ: ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆ ಇತಿಹಾಸ ಗೊತ್ತಾ?

    ಮೂಲಗಳ ಪ್ರಕಾರ ಕಾರ್ಖಾನೆಯಲ್ಲಿ ಸ್ಟೈರೀನ್ ಗ್ಯಾಸ್​ ಲೀಕ್​ ಆಗಿದ್ದು, ಇದರಿಂದಾಗಿ ಜನರಿಗೆ ಕಣ್ಣು, ಚರ್ಮ ಮತ್ತು ಮೂಗಿನಲ್ಲಿ ಉರಿ ಅನುಭವ ಕಾಣಿಸಿಕೊಂಡಿದ್ದು, ಉಸಿರಾಟದ ತೊಂದರೆಯು ಎದುರಾಗಿದೆ. ಕಾರ್ಖಾನೆ ಸಮೀಪದ ನಿವಾಸಿಗಳಲ್ಲಿ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಿ-ಪಕ್ಷಿಗಳಿಗೂ ವಿಷಾನಿಲ ಪರಿಣಾಮ ಬೀರಿದ್ದು, ಉಸಿರಾಟದ ತೊಂದರೆಯಿಂದ ನರಳಾಟ ಅನುಭವಿಸಿದ ಹೃದಯ ವಿದ್ರಾವಕ ಘಟನೆಗಳು ನಡೆದಿವೆ. ಇದರ ನಡುವೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸ್ಥಳೀಯ ನಿವಾಸಿಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

    ಇದನ್ನೂ ಓದಿ: ಆಂಧ್ರ ಅನಿಲ ದುರಂತ: ಸೋರಿಕೆಯಾಗಿರುವುದು ಸ್ಟೈರೀನ್ ಗ್ಯಾಸ್, ಇದರಿಂದಾಗುವ ದುಷ್ಪರಿಣಾಮಗಳೇನು?​

    ಸಾಮಾಜಿಕ ಜಾಲತಾಣದಲ್ಲಿ #VizagGasLeak ಮತ್ತು #Vizag ಹ್ಯಾಶ್​ಟ್ಯಾಗ್ ಮೂಲಕ ದುರಂತ ಸ್ಥಳದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಲ್ಲಿನ ಭೀಕರತೆ ಮನಕಲಕುವಂತಿದೆ. ಸಾಕಷ್ಟು ನೆಟ್ಟಿಗರು ಸಂತ್ರಸ್ತರ ನೋವಿಗೆ ಕಂಬನಿ ಮಿಡಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts