More

    ನಟ ಆಮೀರ್​ ಖಾನ್​ ಮತ್ತು ಸಾರಾಗೆ ಶಾಕ್​ ನೀಡಿದ ವಿವೋ ಮೊಬೈಲ್​ ಕಂಪನಿ!

    ಗಡಿ ಕದನದ ಹಿನ್ನೆಲೆಯಲ್ಲಿ ಇಂಡಿಯಾ ಮತ್ತು ಚೀನಾ ನಡುವೆ ಶೀತಲ ಸಮರ ನಡೆಯುತ್ತಿದೆ. ಪ್ರತಿಯಾಗಿ ಈಗಾಗಲೇ ಚೀನಾದ 50ಕ್ಕೂ ಅಧಿಕ ಆ್ಯಪ್​ಗಳನ್ನು ಭಾರತದಲ್ಲಿ ಬ್ಯಾನ್​ ಮಾಡಲಾಗಿದೆ. ಅದೇ ರೀತಿ ಚೀನಾ ಉತ್ಪನ್ನಗಳನ್ನೂ ಬ್ಯಾನ್​ ಮಾಡುವಂತೆ ಸೋಷಿಯಲ್​ ಮೀಡಿಯಾದಲ್ಲಿ ಅಭಿಯಾನಗಳು ಶುರುವಾಗಿವೆ. ಇ ನಡುವೆ, ಒಂದಷ್ಟೂ ವ್ಯಾವಹಾರಿಕ ಒಕ್ಕೂಟಗಳು ಸಾಮೂಹಿಕವಾಗಿ ಚೀನಾ ವಸ್ತುಗಳ ಮಾರಾಟವನ್ನು ನಿಲ್ಲಿಸಿವೆ. ಇದೀಗ ಚೀನಾದ ವಿವೋ ಮೊಬೈಲ್​ ಕಂಪನಿ ಹೊಸದೊಂದು ನಿರ್ಧಾರ ತೆಗೆದುಕೊಂಡಿದೆ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ಅನಾರೋಗ್ಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಿರ್ದೇಶಕ ರೂಮಿ ಜೆಫ್ರಿ

    ಗಡಿಕದನ ತೀವ್ರಗೊಂಡ ಬೆನ್ನಲ್ಲೇ ಬಾಲಿವುಡ್​ನ ಕಲಾವಿದರು ಚೀನಾ ಉತ್ಪನ್ನಗಳ ರಾಯಭಾರಿಯನ್ನು ಕೈ ಬಿಡುವಂತೆ ಆಗ್ರಹಿಸಲಾಗಿತ್ತು. ಒಂದಷ್ಟು ಸೆಲೆಬ್ರಿಟಿಗಳು ಮುಂದೆ ಬಂದು ಬ್ರಾಂಡ್​ ಅಂಬಾಸಿಡರ್​ನಿಂದ ಆಚೆ ಬಂದಿದ್ದರು. ಹೀಗಿರುವಾಗಲೇ ಚೀನಾದ ವಿವೋ ಮೊಬೈಲ್​ ಸಂಸ್ಥೆಯೇ ಇದೀಗ ಭಾರತದ ಬ್ರಾಂಡ್​ ರಾಯಭಾರಿಗಳಾದ ಆಮೀರ್​ ಖಾನ್​ ಮತ್ತು ಸಾರಾ ಅಲಿ ಖಾನ್​ ಅವರನ್ನು ಕೈಬಿಟ್ಟಿದೆ.

    ಇದನ್ನೂ ಓದಿ: PHOTOS: ಜನ್ಮದಿನದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಚಿರತರುಣಿ ಸುಮನ್​ ರಂಗನಾಥನ್​…

    ಹಾಗಂತ ಅವರನ್ನು ಶಾಶ್ವತವಾಗಿ ಕೈಬಿಟ್ಟಿಲ್ಲ. ಬದಲಿಗೆ ಒಂದಷ್ಟು ತಿಂಗಳುಗಳ ಕಾಲ ಅವರನ್ನು ದೂರ ಇಟ್ಟಿದೆ. ಇದಕ್ಕೆ ಕಾರಣ ಐಪಿಎಲ್​. ಹೌದು, ಇನ್ನು ಕೆಲ ದಿನಗಳಲ್ಲಿ ಐಪಿಎಲ್​ ಪಂದ್ಯಾವಳಿ ನಡೆಯಲಿದ್ದು, ಆ ವೇಳೆ ಹೊಸ ಬ್ರಾಂಡ್​ ಫೋನ್​ಗಳನ್ನು ವಿವೋ ಬಿಡುಗಡೆ ಮಾಡಲಿದೆ. ಐಪಿಎಲ್​ನಲ್ಲಿ ವಿವೋ ಟೈಟಲ್​ ಪ್ರಾಯೋಜಕತ್ವ ಹೊಂದಿದೆ. ಅಲ್ಲಿಯವರೆಗೂ ಅವರು ಬೇರೆ ಯಾವ ಫೋನ್​ ಪ್ರಚಾರ ಮಾಡುವುದಿಲ್ಲ ಎಂದು ವಿವೋ ತಿಳಿಸಿದೆ. (ಏಜೆನ್ಸೀಸ್​)

    ಕಮಲ್​ ಹಾಸನ್​ ಹಿಂದಿಕ್ಕಿದ ಸುಶಾಂತ್​ ಸಿಂಗ್​; IMDb ರೇಟಿಂಗ್​ನಲ್ಲಿ ‘ದಿಲ್​ ಬೇಚಾರಾ’ ದಾಖಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts