More

    ಭಾರತದ ಪರಂಪರೆ ಎತ್ತಿ ಹಿಡಿದ ವಿವೇಕಾನಂದ

    ಮೈಸೂರು: ಸಾಧನೆ ಮಾಡಿ ದೇಶದ ಕೀರ್ತಿ ಹೆಚ್ಚಿಸಿದರೆ ನಾವು ಸ್ವಾಮಿ ವಿವೇಕಾನಂದರಿಗೆ ನೀಡುವ ನಿಜವಾದ ಗೌರವ ಎಂದು ಶಾಸಕ ಎಸ್.ಎ.ರಾಮದಾಸ್ ಅಭಿಪ್ರಾಯಪಟ್ಟರು.

    ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ನಗರದ ವಿವೇಕಾನಂದ ವೃತ್ತದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸಂತರಾಗಿ ದೇಶ, ವಿದೇಶ ಸುತ್ತಿದ ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿ, ಪರಂಪರೆ, ಧಾರ್ಮಿಕತೆಯನ್ನು ಎತ್ತಿ ಹಿಡಿದಿದ್ದರು. ಹೀಗಾಗಿ ಭಾರತ ಎಂದರೆ ವಿದೇಶಿಗರಿಗೆ ಸ್ವಾಮಿ ವಿವೇಕಾನಂದರು ನೆನಪಾಗುತ್ತಾರೆ. ಇಂದಿನ ಯುವ ಜನಾಂಗ ಅಂತವರ ಆದರ್ಶ ಪಾಲಿಸುವ ಮೂಲಕ ಜೀವನದಲ್ಲಿ ಉತ್ತಮ ಸ್ಥಾನ ಆಲಂಕರಿಸಿ, ದೇಶದ ಘನತೆ ಎತ್ತಿ ಹಿಡಿಯಬೇಕು ಎಂದು ಹೇಳಿದರು.

    ನಗರ ಪಾಲಿಕೆ ಸದಸ್ಯರಾದ ಸುನಂದಾ ಪಾಲನೇತ್ರ, ಬಿ.ವಿ.ಮಂಜುನಾಥ್, ಶಿವಕುಮಾರ್, ಗೀತಾ ಶ್ರೀಯೋಗನಂದ್, ಸೌಮ್ಯಾ ಉಮೇಶ್, ಶಾರದಮ್ಮ, ಜಿ.ರೂಪಾ, ಚಂಪಕಾ, ಛಾಯಾದೇವಿ, ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ವಡಿವೇಲು, ಉಪಾಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಓಂ.ಶ್ರೀನಿವಾಸ್, ಕಿಟ್ಟಿ, ಈಶ್ವರ್, ರಘು, ರವಿ, ನವೀನ್, ಗಿರೀಶ್, ಗುರುರಾಜ್, ಯೋಗೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts