More

    ಅಲೆ ಸಮುದ್ರ್ದು; ಸಮುದ್ರ ಅಲೆಯದ್ದಲ್ಲ!

    ಸಮಾಜವಾದವು ಸನಾತನ ಧರ್ಮವನ್ನು ಅರ್ಥೈಸಿಕೊಂಡೇ ವ್ಯವಹರಿಸಬೇಕು. ಜೈವಿಕ ಮಾನವನೂ ಸಂಸ್ಕಾರವಂತನಾದರಷ್ಟೇ ಅವನ ಉಳಿವು, ಹೋರಾಟ, ಯಶಸ್ಸು, ಇದನ್ನೇ ಸನಾತನ ಧರ್ಮ ಪ್ರತಿಪಾದಿಸಿದ್ದು, ಹಿಂದೂ ಧರ್ಮದಲ್ಲಿ ಕೇವಲ ಜಾತಿಯಿಂದಷ್ಟೇ ಯಾರೂ ಪೂಜನೀಯರಾಗಲಿಲ್ಲ, ಲೋಕ ಗುರುವಾಗಲಿಲ್ಲ!

    ಅಲೆ ಸಮುದ್ರ್ದು; ಸಮುದ್ರ ಅಲೆಯದ್ದಲ್ಲ!ಭಾರತೀಯ ಸನಾತನ ಪರಂಪರೆಯು ಮಾನವನ ಅಭ್ಯುದಯ ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ಅನುಗ್ರಹಿಸಿದ ಜೀವನಸಂಹಿತೆಯೇ ಧರ್ಮ. ಮಾನವ ಇತಿಹಾಸದ ನಾಗರಿಕ ಪಯಣಕ್ಕೆ ಎರಡು ಅತಿಮುಖ್ಯ ರಕ್ಷಾಕವಚಗಳನ್ನು ನೀಡಿ ಕಾಪಾಡಿದ್ದನ್ನು, ಕಾಪಾಡುತ್ತಿರುವುದನ್ನು ಬುದ್ಧಿ ಹೃದಯಗಳ ತೆರೆದು ಪರಿಭಾವಿಸಿದಾಗ ಸತ್ಯವು ವೇದ್ಯವಾಗುತ್ತದೆ. ಬೆಳೆಯ ಜೊತೆಗೆ ಕಳೆಯೂ ನಾಗರಿಕ ಪಯಣದಲ್ಲಿ ಗೋಚರಿಸುತ್ತದೆಂಬ ವಾಸ್ತವಿಕತೆಯನ್ನರಿತು ಕಾರ್ಯನಿರ್ವಹಿಸುತ್ತ ಬಂದ ಅವತಾರ ಪುರುಷರು ಮಾನವನಿಗೆ ಶಾಶ್ವತ ನೆಲೆಗಟ್ಟಾದ ಕೃತಿಗಳನ್ನು ಶ್ರದ್ಧೆಯಿಂದ ಗೌರವಿಸುವುದ ರೊಂದಿಗೆ ಯುಗಧರ್ಮಕ್ಕೆ ತಕ್ಕಂತೆ ದೇಶಕಾಲ ಸನ್ನಿವೇಶಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅನುವಾಗುವಂತೆ ಸ್ಮೃತಿಗಳ ಆಚರಣೆಗೂ ಒತ್ತು ನೀಡಿದ್ದಾರೆ. ವ್ಯವಸ್ಥೆ ಹಾಗೂ ಅವ್ಯವಸ್ಥೆಗಳೆಂಬ ಆದಿ ಅಂತ್ಯಗಳನ್ನು ಹೊತ್ತ ನಾಗರಿಕತೆಗಳಿಗೆ ಮಾರ್ಗಮಧ್ಯದಲ್ಲಿ ನಿರಂಕುಶ ಬದುಕೂ ಆಪ್ಯಾಯಮಾನ ಎಂದೆನಿಸುವುದರಿಂದ ಅದು ಮಾನವನ ಅಭ್ಯುದಯಕ್ಕೆ ಸೀಮಿತ ಬಲವನ್ನಷ್ಟೇ ತುಂಬಬಲ್ಲದು!

    ಇದನ್ನೂ ಓದಿ  ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅಭ್ಯಾಸಕ್ಕೆ ಅಪ್ಪನ ನೆರವು…!

    ಭಾರತೀಯ ಜೀವನ ಸಂಹಿತೆ ಇಡೀ ಜಗತ್ತಿಗೆ ಆದರ್ಶಪ್ರಾಯವಾದದ್ದು. ಅಜ್ಞಾನಿಗಳು, ಅಲ್ಪಮತಿಗಳು, ವಿಚಾರವಾದಿಗಳು ಅದೆಷ್ಟೇ ಬೊಬ್ಬೆ ಹೊಡೆದರೂ ಮಾನವ ಇತಿಹಾಸದಲ್ಲಿ ಅರವತ್ತೆಂಟಕ್ಕೂ ಅಧಿಕ ದಾಳಿಗಳನ್ನೆದುರಿಸಿದ, ಸ್ವಾತಂತ್ರ್ಯ ಬಂದ ಗಳಿಗೆಯಲ್ಲಿ ಧರ್ವಧಾರಿತವಾಗಿ ದೇಶವನ್ನು ವಿಭಜಿಸಿ ಪ್ರಸ್ತುತ ಭಾರತವನ್ನು ಇನ್ನಿಲ್ಲದಷ್ಟು ಆಘಾತ, ಅವಘಡ, ಅನಿಶ್ಚಿತತೆಗಳಿಗೆ ಒಳಪಡಿಸಿದರೂ ಸನಾತನ ಧರ್ಮದ ಶಕ್ತಿ, ಸತ್ತ್ವ ಹಾಗೂ ಶಾಶ್ವತ ಮೌಲ್ಯಗಳು ನಮ್ಮನ್ನು ನೈತಿಕವಾಗಿ ಶಕ್ತರಾಗಿ, ಜಗತ್ತಿಗೆ ಆದರ್ಶಪೂರ್ಣವಾಗಿ ಕೊಂಡೊಯ್ಯುತ್ತಿರುವುದು ಸತ್ಯಸ್ಯಸತ್ಯ.

    ಜಗತ್ತಿನ ಪ್ರಾಚೀನ ರಾಷ್ಟ್ರಗಳಲ್ಲೊಂದಾದ ಭಾರತವು ತನ್ನತನವನ್ನು ಉಳಿಸಿಕೊಂಡು ಮುಂದೆ ಸಾಗುತ್ತಿರುವುದಕ್ಕೆ ಅತಿಮುಖ್ಯ ಕಾರಣವೆಂದರೆ ಅದರ ಸರ್ವಜನಹಿತ, ಸರ್ವಜನಸುಖದ ಮಹಾನ್ ಆದರ್ಶ, ಜಗತ್ತಿನ ಆಸ್ತಿಕ, ನಾಸ್ತಿಕ, ನಿರೀಶ್ವರವಾದ, ಪ್ರತಿಮೋಪಾಸನೆ, ಇವೇ ಮೊದಲಾದ ಎಲ್ಲ ಸಿದ್ಧಾಂತಗಳಿಗೂ ಗೌರವ ನೀಡಿರುವುದು. ನಾಗರಿಕತೆಯ ಪಯಣದಲ್ಲಿ ಜಗತ್ತು ಗುರ್ತಿಸಿಕೊಂಡ ಸಮಾಜವಾದ, ಜಾತ್ಯತೀತತೆ ಮೊದಲಾದ ವಿಚಾರಗಳಿಗೂ ಸ್ವಾಗತವಿತ್ತು, ಅವುಗಳನ್ನು ಶುದ್ಧೀಕರಿಸಿ, ಅವು ವೇದಾಂತ ಸಾಗರದ ಅಲೆಗಳೆಂದೇ ಮನವರಿಕೆ ಮಾಡಿಕೊಟ್ಟು, ಅವುಗಳ ಇತಿಮಿತಿಗಳನ್ನು ಸ್ಪಷ್ಟಪಡಿಸಿ, ಅದರಿಂದಾಚೆಗೆ ಇರುವ ಆಧ್ಯಾತ್ಮಿಕ ಪ್ರಪಂಚದ ದರ್ಶನಕ್ಕೆ ಉಪಯುಕ್ತವಾದ ಪಥದೋರಿದ ಹೆಗ್ಗಳಿಕೆ ಸನಾತನ ವೇದಾಂತ ಧರ್ಮಕ್ಕೆ ಸೇರುತ್ತದೆ. ಆದ್ದರಿಂದಲೇ ಸನಾತನ ವೇದಾಂತ ಧರ್ಮದ ಸಾಗರದಲ್ಲಿ ಸಮಾಜವಾದವು ಒಂದು ಅಲೆಯಷ್ಟೇ ಎಂದು ತೀರ್ವನಿಸಲಾಗಿದೆ.

    ಇದನ್ನೂ ಓದಿ   ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್ “ಗವಿ” ಖಾತೆಗೆ 15 ದಶಲಕ್ಷ ಡಾಲರ್ : ಪ್ರಧಾನಿ ಮೋದಿ ವಾಗ್ದಾನ

    ಭಾರತದಲ್ಲಿ ಬುದ್ಧದೇವನು ಅವತರಿಸುವ ವೇಳೆಗಾಗಲೇ ನಾವು ನಾಗರಿಕತೆಯ ಉಚ್ಛ್ರಾಯ ಸ್ಥಿತಿಯಲ್ಲಿದ್ದರೆ ಪಾಶ್ಚಾತ್ಯ ಜಗತ್ತು ಇನ್ನೂ ಅಂಬೆಗಾಲಿಡುತ್ತ ತೆವಳುತ್ತಿದ್ದುದು ಇತಿಹಾಸದ ಪುಟಗಳಿಂದ ವೇದ್ಯವಾಗುತ್ತದೆ. ಜಗತ್ತಿನ ಇತರೆಲ್ಲ ಮತಧರ್ಮಗಳೂ ಸನಾತನ ಧರ್ಮದ ಪ್ರತಿಧ್ವನಿಗಳಾಗಿ ಗೋಚರಿಸುತ್ತವೆ. ಆದ್ದರಿಂದಲೇ ಇತಿಹಾಸದಲ್ಲಿ ಮಾರ್ಕ್​ಟ್ವೇನ್​ನ,In religion all other countries are paupers; India is the only millionaire’ಎಂಬ ಮಾತು ಆಲೋಚನೀಯ.

    ಸನಾತನ ಧರ್ಮದ ಹೆಗ್ಗಳಿಕೆಯಾದರೂ ಏನು? ಪ್ರಾಚೀನ ಆರ್ಷವಾಣಿ ಮಾನವನನ್ನು ಹೀಗೆ ಎಚ್ಚರಿಸುತ್ತದೆ:

    ಶ್ರೂಯತಾಂ ಧರ್ಮ ಸರ್ವಸ್ವಂ ಶೃತ್ವಾಚೈವಾವಧಾರ್ಯತಾಂ|

    ಆತ್ಮನಃ ಪ್ರತಿಕೂಲಾನಿ ಪರೇಶಾಂ ನ ಸಮಾಚರೇತ್||

    ಧರ್ಮದ ಸರ್ವಸ್ವವನ್ನು ಮತ್ತೆ ಮತ್ತೆ ಕೇಳಿ ನಿಶ್ಚಯಿಸಿಕೊಳ್ಳಿರಿ. ತನಗೆ ಯಾವುದು ಹಿತವೆನಿಸದೋ, ವಿರೋಧವೆನಿಸುತ್ತದೆಯೋ ಅಂತಹ ಪ್ರತಿಕೂಲ ಕ್ರಿಯೆಗಳನ್ನು ಇತರರಿಗೆ ಮಾಡದಿರುವುದೇ ಧರ್ಮ. ಈ ಮಾತು ಜಗತ್ತಿಗೆ ಅನುಗ್ರಹಿತವಾದ ಸಾವಿರಾರು ವರ್ಷಗಳ ನಂತರ ವಿಖ್ಯಾತ ಪಾಶ್ಚಾತ್ಯ ಚಿಂತಕ ಲೆಹಾರ್ಡ್ ಡಿ. ಚಾರ್ಡಿಯನ್ ಹೇಳಿದ್ದಾನೆ: The age of nation is now over. The time has come for men to shake off their ancient prejudices and turn as one man, to build the earth’

    ‘ಯಥಾ ರಾಜಾ ತಥಾ ಪ್ರಜಾ’, ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಭಾರತೀಯ ರಾಜಧರ್ಮದ ಆದರ್ಶಗಳು ಶ್ರೀರಾಮಚಂದ್ರನು ಸೋದರ ಭರತನಿಗೆ ರಾಜನು ಮಾಡುವ ಹದಿನಾಲ್ಕು ದೋಷಗಳನ್ನು ಹೀಗೆ ಎಚ್ಚರಿಸುತ್ತಾನೆ: ‘ನಾಸ್ತಿಕತೆ, ಸುಳ್ಳು, ಸಿಟ್ಟು, ಅಸಮಾಧಾನ, ನಿಧಾನವಾಗಿ ತಡೆದು ಕೆಲಸ ಮಾಡುವುದು, ಪ್ರಾಜ್ಞರಾದ ಸಜ್ಜನರೊಂದಿಗೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನವಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗುವುದು, ಯಾರೊಂದಿಗೂ ಸಮಾಲೋಚಿಸದೆ ಏಪಕ್ಷೀಯ ನಿರ್ಧಾರ, ಅನುಭವವಿಲ್ಲದವರೊಡನೆ ಮಂತ್ರಾಲೋಚನೆ, ನಿಶ್ಚಯಿಸಿದ ಕಾಯಕವನ್ನು ಆರಂಭಿಸದಿರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು, ಮಂಗಳಕರವಾದ ಶುಭಕಾರ್ಯಗಳನ್ನು ಮಾಡದಿರುವುದು, ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ’.

    ಇದನ್ನೂ ಓದಿ  ದೇಶಾದ್ಯಂತ 8 ವರ್ಷಗಳಲ್ಲಿ 750 ಹುಲಿಗಳ ಸಾವು: ಕರ್ನಾಟಕದಲ್ಲೆಷ್ಟು?

    ಶ್ರೀಕೃಷ್ಣ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಹೇಳಿದ್ದು: ‘ಅರ್ಜುನ ನೀನು ಯದ್ಧ ಮಾಡಲು ಹಿಂಜರಿಯುತ್ತಿರುವೆ. ಕ್ಷತ್ರಿಯನಾದ ನಿನಗೆ ಹೃದಯದೌರ್ಬಲ್ಯವು ಶೋಭಿಸದು, ಅದು ನಿನಗೆ ನಪುಂಸಕ ಪಟ್ಟ ನೀಡುತ್ತದೆ. ಅಧರ್ಮ ನಿಮೂಲನೆಗೆ ಯುದ್ಧ ಮಾಡುವುದೇ ಈ ಕ್ಷಣದ ನಿನ್ನ ಕರ್ತವ್ಯ. ಯುದ್ಧದಲ್ಲಿ ಗೆದ್ದರೆ ರಾಜ್ಯ, ಸತ್ತರೆ ಸ್ವರ್ಗ ಪ್ರಾಪ್ತಿ; ಯುದ್ಧದಿಂದ ಓಡಿಹೋದರೆ ಅಪಕೀರ್ತಿ, ಸಂಭಾವಿತನಾದವನಿಗೆ ಅಪಕೀರ್ತಿ ಎಂಬುದು ಮರಣಕ್ಕಿಂತಲೂ ಘೊರ’. ಸನಾತನ ಧರ್ಮವು ರಾಜ್ಯವಾಳುವ ಚಕ್ರವರ್ತಿಗೆ ವಿಧಿಸಿದ ಕಟ್ಟುಪಾಡುಗಳನ್ನು ಇಲ್ಲಿ ತಿಳಿಯಬಹುದಾಗಿದೆ.

    ಲೋಕಗುರು ಶ್ರೀಶಂಕರಾಚಾರ್ಯರು ನಮಗೆ ಧರ್ಮದ ಸಾಕ್ಷಾತ್ ಸ್ವರೂಪವನ್ನು ಉಪನಿಷತ್ತಿನ ಆಧಾರದ ಮೇಲೆ ಅನುಗ್ರಹಿಸಿದ್ದಾರೆ. ಅವರ ಪ್ರಕಾರ ‘ವೇದಾಂತವು ಪ್ರತಿಪಾದಿಸುವಂತೆ ಧರ್ಮಕ್ಕೆ ಪ್ರವೃತ್ತಿ ಮತ್ತು ನಿವೃತ್ತಿಗಳೆಂಬ ಆಯಾಮ ಗಳಿವೆ. ಪ್ರವೃತ್ತಿಯು ಬಹಿರಂಗ ಜಗತ್ತಿನಲ್ಲಿ ಕರ್ಮವನ್ನು ನಿರ್ದೇಶಿಸುತ್ತದೆ, ನಿವೃತ್ತಿಯು ಅಂತರಂಗದಲ್ಲಿ ಧ್ಯಾನಕ್ಕೆ ಪ್ರೇರಣೆ ನೀಡುತ್ತದೆ. ಪ್ರವೃತ್ತಿಯಿಂದ ಸಮಾಜ ಕಲ್ಯಾಣ ಮತ್ತು ನಿವೃತ್ತಿಯಿಂದ ಆಧ್ಯಾತ್ಮಿಕ ಶ್ರೇಯಸ್ಸು ಪ್ರಾಪ್ತವಾಗುತ್ತದೆ. ಪ್ರವೃತ್ತಿ ಮತ್ತು ನಿವೃತ್ತಿಗಳ ಯೋಗ್ಯ ಸಂಯೋಜನೆಯಿಂದ ಜಗತ್ತಿನಲ್ಲಿ ಸಮತೋಲನವನ್ನು ಸಾಧಿಸುವುದು ಸಾಧ್ಯವಾಗುತ್ತದೆ!’

    ‘ಮಾನವನು ಆಧ್ಯಾತ್ಮಿಕ ವ್ಯಕ್ತಿಯಾಗುವುದರಿಂದಷ್ಟೇ ಬದುಕಿನ ಅಭ್ಯುದಯಕ್ಕೆ ಪೂರಕವಾಗುವ ಎಲ್ಲ ಆಯಾಮಗಳ ಪ್ರಗತಿಯನ್ನು ತನ್ನದಾಗಿಸಿಕೊಂಡಂತಾಗುತ್ತದೆ’ ಎಂಬುದು ಸನಾತನಧರ್ಮದ ನಿಶ್ಚಿತ ಅಭಿಮತ. ಸಾಮಾನ್ಯ ತತ್ತ್ವಕ್ಕಷ್ಟೇ ಮೊರೆಹೋಗುವುದರಿಂದ ಮಾನವನು ಸಮಾಜದ ಪ್ರಗತಿಯನ್ನು ನಿರ್ಲಕ್ಷಿಸಿ, ನರಿಯ ಕುಟಿಲತೆಯಿಂದ ಒಂದಿಷ್ಟು ವೈಯಕ್ತಿಕ ಹಿತಾಸಕ್ತಿ ಸಾಧಿಸಬಹುದಷ್ಟೇ. ಆದರೆ ವೇದಾಂತತತ್ತ್ವಕ್ಕೆ ಮೊರೆ ಹೋಗುವುದರಿಂದ ಅವನು ಶ್ರದ್ಧೆ, ನೈತಿಕ ಬೆಳವಣಿಗೆ ಹಾಗೂ ಚಾರಿತ್ರ್ಯ ಶಕ್ತಿಗಳನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಎದುರಾಗುವ ಎಂತಹ ದುರ್ಗಮ ಪಥವನ್ನೂ ಯೋಗ್ಯ ರೀತಿಯಿಂದ, ಸಾಹಸದಿಂದ ಕ್ರಮಿಸಿ ಸರ್ವಜನರ ಯೋಗಕ್ಷೇಮ, ಮಾನವೀಯ ಕಾಳಜಿಗಳ ಜೀವನಧ್ಯೇಯದೊಂದಿಗೆ ಸಂತತ್ವದಲ್ಲಿ ನೆಲೆನಿಂತು ಜಗತ್ತಿಗೆ ಮಾದರಿಯಾಗುತ್ತಾನೆ!

    ಇದನ್ನೂ ಓದಿ    ಈ ದಿಗ್ಗಜರಿಗೆ ಒಲಿಯಲೇ ಇಲ್ಲ ಖೇಲ್‌ರತ್ನ…

    ‘ಯದೇವ ವಿದ್ಯಯಾ ಕರೋತಿ, ಶ್ರದ್ಧಯಾ, ಉಪನಿಷದಾ, ತದೇವ ವೀರ್ಯವತ್ತರಂ ಭವತಿ’ ಎಂದಿರುವ ಛಾಂದೋಗ್ಯ ಉಪನಿಷತ್ತು, ‘ಮಾನವನು ಯಾವುದೇ ಕಾರ್ಯವನ್ನು ಜ್ಞಾನದ ಬೆಳಕಿನಲ್ಲಿ ಶ್ರದ್ಧೆ ಹಾಗೂ ವಿಶ್ವಾಸದಿಂದ ನಿರ್ವಹಿಸಬೇಕು. ವ್ಯಕ್ತಿಯು ಮಹಾತ್ಮರ ಜೀವನಾದರ್ಶಗಳಲ್ಲಿ ಶ್ರದ್ಧೆ, ವಿಶ್ವಾಸಗಳನ್ನು ಬೆಳೆಸಿಕೊಳ್ಳಬೇಕಲ್ಲದೆ ಈ ಚಿಂತನೆಗಳ ಬೆಳಕಿನಲ್ಲಿ ತಾನು ತನ್ನಲ್ಲಿ ಅಚಲ ಶ್ರದ್ಧೆ, ವಿಶ್ವಾಸಗಳನ್ನು, ತನ್ನ ಸಾಮರ್ಥ್ಯಗಳಲ್ಲೂ ವಿಶ್ವಾಸ ಬೆಳೆಸಿಕೊಂಡು ಶ್ರಮಿಸಬೇಕು. ತಾನು ಕೈಗೆತ್ತಿಕೊಂಡ ಕಾರ್ಯವನ್ನು ಆಳವಾದ ಆಲೋಚನೆಯಿಂದ ಗ್ರಹಿಸಿ, ಅದರ ಸ್ವರೂಪವನ್ನು ಮನನ ಮಾಡಿ, ಚುರುಕಾಗಿ ಕರ್ತವ್ಯ ನಿರ್ವಹಿಸುವುದರಿಂದ ಕಾರ್ಯವು ಯೋಗ್ಯವಾಗಿ ಯಶಸ್ವಿಯಾಗುತ್ತದೆ’ ಎಂದು ಸಾರುತ್ತದೆ.

    ನಾಗರಿಕತೆ ಉರುಳಿದಂತೆ ನಾವು ಗಮನಿಸುತ್ತೇವೆ ಜಗತ್ತಿನಲ್ಲಿ ಜನರು ಧರ್ಮವನ್ನು ಪ್ರಶ್ನಿಸುತ್ತ ಸಾಗಿದ ಪರಿ. ಆದರೆ ಸನಾತನ ಧರ್ಮದ ಪ್ರತಿಯೊಂದು ವಿಚಾರವೂ ಪ್ರಶ್ನಿಸಲ್ಪಟ್ಟಿದೆ ಹಾಗೂ ಆ ಸವಾಲುಗಳನ್ನು ಅದು ಯೋಗ್ಯ ರೀತಿಯಲ್ಲಿ ಉತ್ತರಿಸಿದ್ದಲ್ಲದೆ ಇಂದ್ರಿಯಗ್ರಾಹ್ಯ ಸತ್ಯಗಳನ್ನಷ್ಟೇ ಅವಲಂಬಿಸಿದ ಲೌಕಿಕ ವಿಜ್ಞಾನಕ್ಕೆ ಇಂದ್ರಿಯಾತೀತ ಸತ್ಯಗಳ ಅರಿವನ್ನು ಮೂಡಿಸುವಲ್ಲಿ ಯಶಸ್ಸು ಕಂಡಿದೆ. ಕಾಲಘಟ್ಟದಲ್ಲಿ ಕೃಷಿಪ್ರಧಾನ ನಾಗರಿಕತೆಯು ಕೈಗಾರಿಕಾ ಕ್ರಾಂತಿಯ ಪ್ರಭಾವಕ್ಕೆ ಒಳಗಾಗಿ ಯಂತ್ರಪ್ರಧಾನ ನಾಗರಿಕತೆಯಾಗಿ ಮಾರ್ಪಟ್ಟಿತ್ತು. ಪ್ರಕೃತಿಯ ಭಾವನಾತ್ಮಕ ವಲಯದಲ್ಲಿ ಸಾಗುತ್ತ ಬಂದಿದ್ದ ಮಾನವನಿಗೆ ಲೌಕಿಕ ಅವಶ್ಯಕತೆಗಳಿಗಷ್ಟೇ ಸೀಮಿತವಾದ ಜೀವನಾದರ್ಶವನ್ನು ಮುಂದಿರಿಸಿ, ಅವನನ್ನು ಯಂತ್ರಗಳ ಗುಲಾಮನಾಗಿಸಿದ್ದು ಸುಳ್ಳಲ್ಲ. ಮಾನವನು ಜೀವನ ಸಮತೋಲನಕ್ಕೆ ಒತ್ತು ನೀಡಿದ್ದ ಧರ್ಮ, ಅಧ್ಯಾತ್ಮ ಮೌಲ್ಯಗಳ ಬಗ್ಗೆ ಸಂದೇಹವಾದಿಯಾದ, ಸಿನಿಕತನದಿಂದ ನಡೆದುಕೊಂಡ ಹಾಗೂ ನಿರಾಶಾವಾದಿಯಾಗಿಯೂ ವ್ಯವಹರಿಸಹೊರಟ.

    ‘ಮಾನವನ ಜೀವನ ನಿಂತಿರುವುದು ಉದ್ದೇಶವೊಂದನ್ನು ಸಾಧಿಸುವೆನೆಂಬ ನಂಬಿಕೆಯ ಆಧಾರದ ಮೇಲೆ. ಶ್ರದ್ಧಾರಹಿತ ಬದುಕು, ಅದು ಬದುಕೇ ಅಲ್ಲ, ಇರುವಿಕೆ ಬೇರೆ, ಜೀವಿಸುವಿಕೆಯೇ ಬೇರೆ’ ಎಂದಿದ್ದಾನೆ ಟಾಲ್​ಸ್ಟಾಯ್. ’‘Practice is the criterian of Truth’ಎಂಬುದು ಕಾರ್ಲ್​ವಾರ್ಕ್ಸ್​ಗೆ ಕಾಲಾಂತರದಲ್ಲಾದ ಜ್ಞಾನೋದಯ. ‘ಗುಲಾಮಗಿರಿ ಎಂಬುದು ಮಾನವನ ಇತಿಹಾಸದುದ್ದಕ್ಕೂ ಕಂಡ ಸತ್ಯ. ಜಗತ್ತಿನಲ್ಲಿ ಮಿದುಳುಗಳು ನಿರ್ವಣಗೊಂಡದ್ದು ಜ್ಞಾನಿಯಾಗಲು, ಅಭಿವೃದ್ಧಿ ಸಾಧಿಸಲು. ಆದರೂ ಮಾನವ ಗುಲಾಮಗಿರಿಯನ್ನು ಒಪ್ಪಿಕೊಂಡಿದ್ದೇಕೆ? ಆಘಾತವೆಂದರೆ ಇಂದು ಮಾನವನು ಯಂತ್ರಗಳ ಗುಲಾಮನಾಗುತ್ತಿರುವುದು!’ ಎಂದಿದ್ದಾನೆ ಆಸ್ಕರ್ ವೈಲ್ಡ್.

    ಇದನ್ನೂ ಓದಿ   ಬಿಲ್ ಕಲೆಕ್ಟರ್ ಅನುಮಾನಾಸ್ಪದ ಸಾವು

    ಶ್ರೀರಾಮಕೃಷ್ಣರು ಹೇಳುತ್ತಾರೆ: ‘ಕಾಡಿನ ಪಥದಲ್ಲಿ ಸಾಗುವಾಗ ದಾರಿಯುದ್ದಕ್ಕೂ ಮುಳ್ಳುಗಳಿವೆ. ಮುಳ್ಳುಗಳನ್ನು ಆಯುತ್ತ ಕುಳಿತುಕೊಳ್ಳುವುದು ಅವಿವೇಕ, ಬದಲಾಗಿ ಪಾದರಕ್ಷೆ ಧರಿಸಿ ಮುಂದೆ ಸಾಗಬೇಕು!’.

    ಸಮಾಜವಾದವು ಸನಾತನ ಧರ್ಮವನ್ನು ಅರ್ಥೈಸಿಕೊಂಡೇ ವ್ಯವಹರಿಸಬೇಕು. ಇಲ್ಲದಿದ್ದರೆ ಸಮುದ್ರದ ಕಪ್ಪೆಯೊಂದಿಗೆ ಬಾವಿಕಪ್ಪೆ ಕದನಕ್ಕೆ ಇಳಿದಂತಾಗುತ್ತದೆ! ಹಾಲಿಗೆ ನೀರು ಶತ್ರುವೇ ಆದರೂ ಹಾಲನ್ನು ಸಂಸ್ಕರಣಗೊಳಿಸಿ ಬೆಣ್ಣೆ ತೆಗೆದಾಗ ಅದನ್ನು ರಕ್ಷಿಸಲು ನೀರೇ ಬೇಕು. ಜೈವಿಕ ಮಾನವನೂ ಅಂತೆಯೇ. ಸಂಸ್ಕಾರವಂತನಾದರಷ್ಟೇ ಅವನ ಉಳಿವು, ಹೋರಾಟ, ಯಶಸ್ಸು, ಇದನ್ನೇ ಸನಾತನ ಧರ್ಮ ಪ್ರತಿಪಾದಿಸಿದ್ದು, ಹಿಂದೂ ಧರ್ಮದಲ್ಲಿ ಕೇವಲ ಜಾತಿಯಿಂದಷ್ಟೇ ಯಾರೂ ಪೂಜನೀಯರಾಗಲಿಲ್ಲ, ಲೋಕ ಗುರುವಾಗಲಿಲ್ಲ!

    1990ರಲ್ಲಿ ಮಾಸ್ಕೋನಲ್ಲಿ ನಡೆದ”Global Forum on Spiritual and Parliamentary Leaders’ ’ ಹೀಗೆ ಮನವಿ ಮಾಡಿದೆ: ‘ಎಲ್ಲ ಧಾರ್ವಿುಕ ಸಂಪ್ರದಾಯಗಳು ಮತ್ತು ಬೋಧನೆಗಳು ಪ್ರಕೃತಿಯ ರಕ್ಷಣೆಯನ್ನು ಕುರಿತು ಬೆಳಕು ಚೆಲ್ಲಿವೆ. ಆದರೆ ನಮ್ಮ ನಡವಳಿಕೆಗಳಿಂದ ಪವಿತ್ರ ಪ್ರಕೃತಿಯ ಸಹಜ ವಿನ್ಯಾಸವು ಭಗ್ನಗೊಂಡು ಏರುಪೇರಾಗಿದೆ. ಪವಿತ್ರವೂ ಹಾಗೂ ಮಾನವೀಯವೂ ಆದ ನಮ್ಮ ನಡವಳಿಕೆಯಿಂದಷ್ಟೇ ಪ್ರಕೃತಿಯನ್ನು ಶೋಷಿಸುವ ಮತ್ತು ನಿರ್ಲಕ್ಷಿಸುವ ಮನೋಧರ್ಮಕ್ಕೆ ಅಂತ್ಯ ಕಾಣಿಸಬಹುದು’.

    ಉಪಸಂಹಾರ: ಜನರು ಘರ್ಷಣೆ ಹಾಗೂ ವೈರುಧ್ಯಗಳ ಜಗತ್ತಿನಲ್ಲಿ ಬದುಕುತ್ತಿದ್ದಾರೆ. ಇದಕ್ಕೆ ಕಾರಣ ಅವರು ತಮ್ಮ ನಡುವೆ ನಿರ್ವಿುಸಿಕೊಂಡ ಎಲ್ಲೆಗಳು! ಸಂದಿಗ್ಧತೆಗೆ ದಾರಿಮಾಡಿಕೊಟ್ಟಿರುವ ಈ ರೇಖೆಗಳು ಸಮರದ ಗಡಿರೇಖೆಗಳೋ ಎಂಬಂತೆ ಚಿತ್ರಣಗೊಂಡಿದೆ. ಕಬೀರ ಹೇಳುತ್ತಾನೆ: ‘ಬೀಜದೊಳಗೆ ಇದೆ ಎಣ್ಣೆ, ಹಾಲಿನೊಳಗೆ ಇದೆ ಬೆಣ್ಣೆ; ನಿನ್ನಯ ದೇವ ನಿನ್ನೊಳಗಿಹನೈ, ಕೈಲಾದರೆ ನೋಡೈ!’. ತುರ್ತು ಅಗತ್ಯತೆ ಏನೆಂದರೆ ನಾವು‘shop till you drop; buy till you die’

    ಎಂಬ ಕೊಳ್ಳುಬಾಕ ನಡವಳಿಕೆಯಿಂದ ದೂರ ಸರಿಯಬೇಕು. ವ್ಯಕ್ತಿಯು ತನ್ನಲ್ಲಿ ಕ್ರಿಯಾಶೀಲ ವ್ಯಕ್ತಿತ್ವ, ಪೌರತ್ವ, ತನ್ಮೂಲಕ ಆಧ್ಯಾತ್ಮಿಕ ವ್ಯಕ್ತಿತ್ವದ ಹಂತಕ್ಕೇರಲು ಸನಾತನ ಧರ್ಮವೇ ಪಥದರ್ಶಿ.

    ತತ್ತ್ವಶಾಸ್ತ್ರಜ್ಞ ಗಯಟೆ ಹೇಳುತ್ತಾನೆ- ‘ಆಲೋಚನಾಪರನಾದ ಮಾನವನ ಆನಂದ ಇರುವುದು ಶೋಧಿಸುವಷ್ಟು ಶೋಧಿಸುವುದರಲ್ಲಿ ಮತ್ತು ಶೋಧಿಸಲಾಗದುದರ ಮುಂದೆ ಮಣಿಯುವುದರಲ್ಲಿ’. ನಿನ್ನೆ ಮೊನ್ನೆಯ ಸಮಾಜವಾದ ತೆರೆದ ಮನಸ್ಸಿನಿಂದ ವೇದಾಂತವನ್ನು ಅರಿಯುವಂತಾಗಲಿ. ಆಗ ಮಾತ್ರವೇ ಅರ್ಥವಾಗುವುದು ಸನಾತನ ಧರ್ಮದ ಸಾಗರದಲ್ಲಿ ಸಮಾಜವಾದ ಎಂಬುದೊಂದು ಅಲೆ. ‘ಅಲೆ ಸಮುದ್ರದ್ದು; ಆದರೆ ಸಮುದ್ರ ಅಲೆಯದ್ದಲ್ಲ’, ಅಲ್ಲವೇ?

    ಶ್ರಾದ್ಧ ಮಾಡಿ ಮುಗಿಸಿದ್ದ ಮಕ್ಕಳಿಗೆ ಈಗ ಅಪ್ಪನನ್ನು ನೋಡುವ ತವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts