More

    ಶ್ರಾದ್ಧ ಮಾಡಿ ಮುಗಿಸಿದ್ದ ಮಕ್ಕಳಿಗೆ ಈಗ ಅಪ್ಪನನ್ನು ನೋಡುವ ತವಕ!

    ಮೈಸೂರು: ಇದೊಂದು ಮನಮಿಡಿಯುವ ಕತೆ…! ನಾಲ್ಕು ವರ್ಷ ಹಿಂದೆ ಕಣ್ಮರೆಯಾಗಿದ್ದ ತಂದೆ ಶಾಶ್ವತವಾಗಿ ದೂರವಾಗಿದ್ದಾರೆ ಎಂದು ಕಂಗಾಲಾಗಿದ್ದ ಕುಟುಂಬಕ್ಕೆ ಈಗ ಹೊಸ ಚೈತನ್ಯ ಮೂಡಿದೆ. ಸತ್ತು ಹೋಗಿರಬಹುದು ಅಂತ ಶ್ರಾದ್ಧವನ್ನೂ ಮಾಡಿದ್ದ ಮಕ್ಕಳೀಗ ತಂದೆಯನ್ನು ಕಾಣುವ ತವಕದಲ್ಲಿದ್ದಾರೆ.

    ಮಹಾಮಾರಿ ಕರೊನಾ ಹಿನ್ನೆಲೆಯ ಲಾಕ್‌ಡೌನ್‌ನಿಂದ ಲೆಕ್ಕವಿಲ್ಲದಷ್ಟು ಜನರು ಒಂದೊತ್ತಿನ ಊಟ ಸಿಗದೆ ಸಂತ್ರಸ್ತರಾಗುತ್ತಿರುವ ಮಧ್ಯೆ 70 ವರ್ಷದ ಈ ವೃದ್ಧನ ಪಾಲಿಗೆ ಲಾಕ್‌ಡೌನ್ ಶುಭವಾಗಿ ಪರಿಣಮಿಸಿದೆ. ದೂರಾಗಿದ್ದ ಅಪ್ಪ- ಮಕ್ಕಳನ್ನು ಒಂದುಗೂಡಿಸಿದೆ.

    ಇದನ್ನೂ ಓದಿ  ಈ ದಿಗ್ಗಜರಿಗೆ ಒಲಿಯಲೇ ಇಲ್ಲ ಖೇಲ್‌ರತ್ನ…

    ದಾರಿ ತಪ್ಪಿ ನಗರಕ್ಕೆ ಬಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಉತ್ತರಪ್ರದೇಶದ ಮೂಲದ ವೃದ್ಧ ಮತ್ತೆ ತಮ್ಮ ಕುಟುಂಬವನ್ನು ಸೇರಿಕೊಳ್ಳಲಿದ್ದಾರೆ. 70 ವರ್ಷದ ಕರಮ್ ಸಿಂಗ್‌ಗೆ ಲಾಕ್‌ಡೌನ್ ವೇಳೆ ಪಾಲಿಕೆ ವತಿಯಿಂದ ತೆರೆದಿದ್ದ ನಿರ್ಗತಿಕರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ನಗರದ ನಂಜರಾಜ ಬಹದ್ದೂರ್ ನಿರ್ಗತಿಕರ ಆಶ್ರಯ ಕೇಂದ್ರದಲ್ಲಿ ಮನಪರಿವರ್ತನೆ ಚಟುವಟಿಕೆ ಮಾಡಿಸಲಾಗಿತ್ತು.

    ಮಾನಸಿಕ ತಜ್ಞರ ಚಿಕಿತ್ಸೆಗೆ ಸ್ಪಂದಿಸಿದ ಅವರು, ಇದೀಗ ತನ್ನ ಹಿನ್ನೆಲೆಯನ್ನು ಹೇಳಿಕೊಂಡಿದ್ದಾರೆ. ಉತ್ತರ ಪ್ರದೇಶದ ಸಾರಂಗ್‌ಪುರ್ ಜಿಲ್ಲೆಯ ರಾಜುಪುರದ ನಿವಾಸಿಯಾಗಿರುವ ಕರಮ್ ಸಿಂಗ್‌ಗೆ ಇಬ್ಬರು ಪುತ್ರರು, ಸೊಸೆ ಮತ್ತು ಮೊಮ್ಮಕ್ಕಳು ಇದ್ದಾರೆ. ಕಿರಿಯ ಪುತ್ರನ ವಿವಾಹಕ್ಕೆ ಹಣವನ್ನು ಹೊಂದಿಸುವ ಯತ್ನದಲ್ಲಿದ್ದರು. ಉದ್ಯೊಗ ನಿಮಿತ್ತ ರೈಲಿನಲ್ಲಿ ಹರಿದ್ವಾರಕ್ಕೆ ತೆರಳಬೇಕಿದ್ದ ಕರಮ್ ಸಿಂಗ್, ದಾರಿ ತಪ್ಪಿ ಬೆಂಗಳೂರಿಗೆ ಬಂದಿಳಿದ್ದಾರೆ. ಅಲ್ಲಿಂದ ಮೈಸೂರಿಗೆ ಬಂದು ಭಿಕ್ಷೆ ಬೇಡುತ್ತಿದ್ದರು.

    ಪೊಲೀಸರ ಸಹಾಯದಿಂದ ಪಾಲಿಕೆ ಅಧಿಕಾರಿಗಳು ಮಕ್ಕಳನ್ನು ಸಂಪರ್ಕಿಸಿದ್ದಾರೆ. ಮಕ್ಕಳ ಬಳಿಗೆ ತಂದೆಯನ್ನು ಸೇರಿಸಲು ಕ್ರೆಡಿಟ್ ಐ ಸಂಸ್ಥೆ ನೆರವಾಗಿದೆ. ‘ತನ್ನ ತಂದೆ ಬದುಕಿಲ್ಲ’ ಎಂದುಕೊಂಡಿದ್ದ ಮಕ್ಕಳು, ಇದೀಗ ತಂದೆ ಬದುಕಿರುವ ಸುದ್ದಿ ತಿಳಿದು ಖುಷಿ ಪಟ್ಟಿದ್ದಾರೆ. ಕರಮ್ ಸಿಂಗ್ ಶುಕ್ರವಾರ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

    ಬಾಲಕಿ ಮೇಲೆ ನಿರಂತರ ಅತ್ಯಾಚಾರ: ನಗರಸಭೆ ಕಾಂಗ್ರೆಸ್ ಸದಸ್ಯನ ಮೇಲೆ ಕೇಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts