More

    ಸತ್ಯ ಹೇಳಿದ್ದಿಕ್ಕೆ ಬೆಲೆ ತೆರುತ್ತಿದ್ದೇನೆ … ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ಹೀಗೆ ಹೇಳಿದ್ಯಾಕೆ?

    ಮುಂಬೈ: ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ, ‘ದಿ ಕಾಶ್ಮೀರ್​ ಫೈಲ್ಸ್​ ‘ ಚಿತ್ರವು ಬಹಳ ಅಸಭ್ಯವಾಗಿತ್ತು ಎಂದು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ (IFFI)ಜ್ಯೂರಿ ಮುಖ್ಯಸ್ಥರಾದ ನಾಡವ್ ಲ್ಯಾಪಿಡ್ ಹೇಳಿದ್ದರು ಮತ್ತು ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಚಿತ್ರ ಎಂದಿದ್ದರು. ಅದಕ್ಕೆ ವಿವೇಕ್​ ಅಗ್ನಿಹೋತ್ರಿ ಉತ್ತರ ನೀಡಿದ್ದರು.

    ಇದನ್ನೂ ಓದಿ: ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದ ‘ಅನ್​ಲಾಕ್ ರಾಘವ’ …

    ಈಗ ವಿವೇಕ್​ ಅಗ್ನಿಹೋತ್ರಿ ಇನ್ನೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಂತರ ಅವರಿಗೆ ಕೇಂದ್ರ ಸರ್ಕಾರವು ವೈ ಸೆಕ್ಯುರಿಟಿ ನೀಡಿತ್ತು. ಇತ್ತೀಚೆಗೆ ರಸ್ತೆಯಲ್ಲಿ ಅಗ್ನಿಹೋತ್ರಿ ವಾಕಿಂಗ್​ ಮಾಡುತ್ತಿರುವ ಸಂದರ್ಭದಲ್ಲಿ ಅವರ ಸೆಕ್ಯುರಿಟಿ ಗಾರ್ಡ್​ಗಳು ಅವರ ಜತೆಗೆ ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ಶೇರ್​ ಮಾಡಿಕೊಂಡಿದ್ದರು. ‘ಕಾಶ್ಮೀರದಲ್ಲಿ ಹಿಂದೂಗಳಿಗೇನಾಯಿತು ಎಂದು ಸತ್ಯ ಹೇಳಿದ್ದಿಕ್ಕೆ ತೆರಬೇಕಾಗರುವ ಬೆಲೆ ಇದು. ಹಿಂದೂ ಪ್ರಧಾನ ದೇಶದಲ್ಲಿ, ಇದೆಂಥಾ ವಾಕ್​ಸ್ವಾತಂತ್ರ್ಯ’ ಎಂದು ಅವರು ಬೇಸರಿಸಿಕೊಂಡಿದ್ದರು.

    ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿತ್ತು. ಈ ವಿಡಿಯೋ ನೋಡಿದವರೆಲ್ಲ, ‘ನಮ್ಮ ಟ್ಯಾಕ್​ ಹಣ ಎಷ್ಟು ಪೋಲಾಗುತ್ತಿದೆ’ ಎಂದು ತಮ್ಮ ಅಸಹನೆ ವ್ಯಕ್ತಪಡಿಸಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿರುವ ವಿವೇಕ್​, ‘ತೆರಿಗೆದಾರರ ಹಣವನ್ನು ಧಾರ್ಮಿಕ ಭಯೋತ್ಪಾದನೆ ನಿಲ್ಲಿಸುವುದಕ್ಕೆ ಬಳಸಲಾಗುತ್ತಿದೆ. ಅದು ನಿಂತರೆ, ನಾನು ಸಹ ನೆಮ್ಮದಿಯಾಗಿ ಬದುಕಬಹುದು’ ಎಂದು ಅವರು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ತಮ್ಮದೇ ಚಿತ್ರಗಳ ದಾಖಲೆಗಳನ್ನು ‘ಸಲಾರ್​’ ಮುರಿಯಲಿದೆಯಂತೆ … ವಿಜಯ್ ಕಿರಗಂದೂರು ವಿಶ್ವಾಸ

    ವಿವೇಕ್​ ಅಗ್ನಿಹೋತ್ರಿ ಅವರಿಗೆ ವೈ ಕೆಟಗರಿ ಭದ್ರತೆ ಕೊಟ್ಟಿದ್ದು ಎಷ್ಟು ಸರಿ ಮತ್ತು ಎಷ್ಟು ತಪ್ಪು ಎಂಬುದರ ಕುರಿತು ಇನ್ನೂ ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದ್ದು, ಹಲವರು ವಿವೇಕ್​ ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಸುಮಲತಾ ‘ಸ್ವಾಭಿಮಾನ’ವನ್ನು ಕೆಣಕಿದ ನಿಖಿಲ್ ಕುಮಾರಸ್ವಾಮಿ; 2019ರ ಸೋಲಿಗೆ ನೀವೇ ಉತ್ತರ ಕೊಡಿ ಎಂದು ಜನರಲ್ಲಿ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts