More

    ಸಚಿವರಿಂದ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಭೇಟಿ

    ಮೈಸೂರು: ತಮ್ಮ ಎರಡು ದಿನಗಳ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಸರಸ್ವತಿ ಸನ್ಮಾನ್ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಕಾದಂಬರಿಕಾರ, ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರನ್ನು ಭೇಟಿಯಾಗಿದ್ದರು.
    ಕುವೆಂಪುನಗರದ ಭೈರಪ್ಪ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ಸಚಿವರು, ಕೆಲವೊತ್ತು ಕುಶಲೋಪರಿ ಮಾತುಕತೆ ನಡೆಸಿ ಮಾರ್ಗದರ್ಶನ ಕೋರಿದರು.

    ಕಾವೇರಿ ವಿಷಯದಲ್ಲಿ ಸದಾ ಖ್ಯಾತೆ ತೆಗೆಯುವ ತಮಿಳುನಾಡು, ಕೊಡಗಿನಲ್ಲಿ ಮಳೆ ಬಿದ್ದಾಗ ನೀರು ಬಿಡುವಂತೆ ಹೋರಾಟ ನಡೆಸುತ್ತದೆ. ಆದರೆ ಅದೇ ಕೊಡಗಿನಲ್ಲಿ ಮಳೆಯಿಂದ ಪ್ರವಾಹ ಬಂದು ಹಾನಿಯಾದರೆ ಕೊಡಗಿಗೆ ತಮಿಳುನಾಡು ಪರಿಹಾರ ನೀಡುವುದಿಲ್ಲ ಏಕೆ?. ಈ ಬಗ್ಗೆ ರಾಜ್ಯ ಸರ್ಕಾರ, ಕೇಂದ್ರದ ಗಮನಕ್ಕೆ ತರಬೇಕು ಎಂದು ಈ ಹಿಂದೆ ಸಲಹೆ ನೀಡಿದ್ದರು.

    ಭೈರಪ್ಪ ಅವರ ಜ್ಞಾನ ಭಂಡಾರ ಅಗಾಧವಾಗಿದ್ದು, ಇಳಿ ವಯಸ್ಸಿನಲ್ಲಿಯೂ, ಅವರ ಉತ್ಸಾಹ, ಬದ್ಧತೆ ಎಲ್ಲರಿಗೂ ಮಾದರಿ. ಅಖಂಡ ಭಾರತದ ಚರಿತ್ರೆಯ ಬಗ್ಗೆ, ಟಿಪ್ಪು ಆಕ್ರಮಣ, ಯದುವಂಶ ದೊರೆಗಳಿಗಿದ್ದ ಸಾಮಾಜಿಕ ಕಳಕಳಿ, ಕಾವೇರಿ ನದಿ ಸೇರಿದಂತೆ ಹಲವು ಜ್ವಲಂತ ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದರು. ನಾನೂ ಕೂಡಾ ಅವರ ಭಿತ್ತಿ, ಮತದಾನ, ಆವರಣ, ಗೃಹಭಂಗ ಕಾದಂಬರಿಗಳ ಸೂಕ್ಷ್ಮತೆಯ ಕುರಿತು ಭೈರಪ್ಪನವರೊಂದಿಗೆ ಮಾತನಾಡಿದ್ದೇನೆ. ಕನ್ನಡ ಸಾರಸ್ವತ ಲೋಕದಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ ಎಂದು ರಮೇಶ್ ಜಾರಕಿಹೊಳಿ ಅವರು ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts