More

    ಜ್ಞಾನಿಗಳು ಶಿವನ ಸಾಕಾರ ಮೂರ್ತಿಗಳು: ಶ್ರೀಕಾಶಿ ಜಗದ್ಗುರು ಅಭಿಮತ

    ವಾರಾಣಸಿ: ಜ್ಞಾನಿಗಳು ಶಿವನ ಸಾಕಾರ ಮೂರ್ತಿಗಳು ಎಂಬ ವಿಚಾರವನ್ನು ಶ್ರೀ ಕಾಶಿ ಜಗದ್ಗುರು ಡಾಕ್ಟರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿರುವ ವಿದ್ವಾಂಸರ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತ ಅವರು ಹೀಗೆ ನುಡಿದರು.

    ಪ್ರತಿ ವರ್ಷ ಪದ್ಧತಿಯಂತೆ ನಡೆದುಕೊಂಡು ಬಂದಿರುವ ಈ ಸನ್ಮಾನ ಸಮಾರಂಭದಲ್ಲಿ ರಾಷ್ಟ್ರಮಟ್ಟದ ಶ್ರೀ ಜಗದ್ಗುರು ವಿಶ್ವರಾಧ್ಯ ವಿಶ್ವ ಭಾರತಿ ಪುರಸ್ಕಾರವನ್ನು ಈ ವರ್ಷ ರಾಷ್ಟ್ರೀಯ ವಿದ್ವಾಂಸರಾದ ಕಾಶಿ ಹಿಂದೂ ವಿಶ್ವವಿದ್ಯಾಲಯದ ವಿಶ್ರಾಂತ ಪ್ರೊ.ಕೃಷ್ಣ ಕಾಂತ ಶರ್ಮಾ ಅವರಿಗೆ ನೀಡಲಾಯಿತು. ಹಾಗೆಯೇ ಕೋಡಿಮಠ ಸಾಹಿತ್ಯ ಪುರಸ್ಕಾರವನ್ನು ನೇಪಾಳ ದೇಶದ ಭರತ ಮಣಿ ಜಂಗಮ; ಶೈವ ಭಾರತಿ ಪುರಸ್ಕಾರವನ್ನು ಆಚಾರ್ಯ ಶೇಷ ನಾರಾಯಣ ಮಿಶ್ರ; ಸೌ ಸಿಂಧೂ ಸುಭಾಸ್ ಮ್ಹಮಾನೆ ಮಾತೃ ಶಕ್ತಿ ಪುರಸ್ಕಾರವನ್ನು ಡಾಕ್ಟರ್ ಮಂಜು ಕುಮಾರಿ; ಜಯದೇವ ಶ್ರೀ ಹಿಂದಿ ಸಾಹಿತ್ಯ ಪುರಸ್ಕಾರವನ್ನು ಪ್ರಖ್ಯಾತ ಹಿಂದಿ ಕವಿ ಪಂ. ಉಮಾ ಶಂಕರ ಚತುರ್ವೇದಿ ಅವರಿಗೆ ಮತ್ತು ಪ್ರೊ. ವಾಗೀಶ ದಿನಕರ ಇವರಿಗೆ ವಿಶೇಷ ಆಗಮ ಪುರಸ್ಕಾರವನ್ನು ಅನುಗ್ರಹಿಸಲಾಯಿತು.

    ಈ ಸಮಾರಂಭದಲ್ಲಿ ಶಾಖಾಪೂರ್ ತಪೋವನ ಮಠದ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ. ಬಸವರಾಜ್ ಜಯಚಂದ್ರ ಸ್ವಾಮೀಜಿ, ಉತ್ತರ ಪ್ರದೇಶದ ಭೂತಪೂರ್ವ ಮಂತ್ರಿ ಡಾ. ನೀಲಕಂಠ ತೇವಾರಿ, ಶಾಸಕ ಸೌರಭ ಶ್ರೀವಾಸ್ತವ ಹಾಗೂ ಕಾಶಿ ಹಿಂದೂ ವಿಶ್ವವಿದ್ಯಾಲಯ, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ, ಕಾಶಿ ವಿದ್ಯಾಪೀಠ ಮತ್ತು ಅನೇಕ ಸಂಸ್ಕೃತ ಮಹಾವಿದ್ಯಾಲಯಗಳ 500ಕ್ಕೂ ಹೆಚ್ಚು ವಿದ್ವಾಂಸರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

    ಕಾಶಿ ಜಗದ್ಗುರು ಚಂದ್ರಶೇಖರ, ಶಿವಾಚಾರ್ಯ ಮಹಾಸ್ವಾಮಿಗಳಿಂದ ಸಂಸ್ಕೃತ ಅನುಷ್ಟುಪ್ ಛಂದಸ್ಸಿನಲ್ಲಿ ವಿರಚಿತವಾದ “ಪಂಚಾಚಾರ್ಯ ಪಂಚ ಸೂತ್ರಾಣಿ” ಎಂಬ ಸಂಸ್ಕೃತ ಗ್ರಂಥವು ಇದೇ ಸಂದರ್ಭದಲ್ಲಿ ಲೋಕಾರ್ಪಣೆಯಾಯಿತು. ಆಗಮಿಸಿದ ವಿದ್ವಾಂಸರ ಉಪನ್ಯಾಸದ ನಂತರ ಉಭಯ ಜಗದ್ಗುರುಗಳು ಆಶೀರ್ವಚನ ನೀಡಿದರು. ಕೊನೆಗೆ ಎಲ್ಲ ಪಂಡಿತರನ್ನು ಶಾಲು ಶ್ರೀಫಲ ಹಾಗೂ ಗುರುದಕ್ಷಿಣೆ ಕೊಟ್ಟು ಗೌರವಿಸಲಾಯಿತು.

    ಮತ್ತೆ ‘ಸೈಲೆಂಟ್’ ಸದ್ದು: ದೇವಾಲಯದಲ್ಲಿ ಭಕ್ತರಿಗೆ ಕೊಡುವ ಲಡ್ಡು ಪೊಟ್ಟಣಗಳ ಮೇಲೂ ರೌಡಿ ಸುನೀಲನ ಚಿತ್ರ!

    ಊಟ ಮಾಡುತ್ತಲೇ ಕುಸಿದು ಬಿದ್ದು ಸಾವಿಗೀಡಾದ ನೌಕರ; ಸಿಸಿಟಿವಿಯಲ್ಲಿ ದೃಶ್ಯ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts