More

    ಮೂಕಪ್ರಾಣಿಗಳ ಸೇವೆಯ ಕಾರ್ಯ ಶ್ರೇಷ್ಠ

    ಶಹಾಪುರ: ನಗರದಲ್ಲಿನ ನಂದಿ ಬೆಟ್ಟದಲ್ಲಿರುವ ವಿಶ್ವಮಾತಾ ಗೋಶಾಲೆಗೆ ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ, ಹಸುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

    ಈ ವೇಳೆ ಗೋಶಾಲೆ ಮುಖ್ಯಸ್ಥ ಗುರುಬಸಯ್ಯ ಶಾಸ್ತ್ರೀ ಹಾಗೂ ಸಂಗಮೇಶ ಶಾಸ್ತ್ರೀ ಜತೆ ಚಚರ್ೆ ನಡೆಸಿದ ಅವರು, ವೈಯಕ್ತಿಕವಾಗಿ 25 ಸಾವಿರ ರೂ.ಗಳ ದೇಣಿಗೆ ನೀಡಿದರು. ಗೋಶಾಲೆ ದಾನಿಗಳು ನೀಡುವ ಸಹಕಾರದಿಂದ ನಡೆಸಲಾಗುತ್ತಿದೆ. ಸಧ್ಯ ಲಾಕ್ಡೌನ್ನಿಂದ ದನಗಳಿಗೆ ಮೇವಿಲ್ಲದೆ ತೊಂದರೆಯಾಗುತ್ತಿದೆ ಎಂದು ಮುಖ್ಯಸ್ಥರು ತಿಳಿಸಿದರು.

    ಗೋವುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸುವುದರ ಜತೆ ಕೊಳವೆ ಬಾವಿ ಕೊರೆಸಲಾಗುವುದು. ಇಲ್ಲಿನ ಗೋಶಾಲೆಯ ಮಾಹಿತಿ ಪಡೆದುಕೊಂಡು ಬಂದಿದ್ದೇನೆ ವಿವಿಧ ತಳಿಯ ಗೋವುಗಳನ್ನು ಇಲ್ಲಿ ಸಾಕಲಾಗುತ್ತಿದ್ದು, ನಿಜಕ್ಕೂ ಈ ಸೇವೆಯ ಕಾರ್ಯ ಶ್ರೇಷ್ಠವಾಗಿದೆ. ಮುಂದಿನ ದಿನಗಳಲ್ಲಿ ಗೋವುಗಳಿಗೆ ಶೇಡ್ಗಳ ವ್ಯವಸ್ಥೆ ಕಲ್ಪಿಸಿ, ಸರ್ಕಾರದ ಅಧೀನಕ್ಕೆ ತಗೆದುಕೊಂಡು ಎಲ್ಲ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

    ಕರೊನಾ ವೈರಸ್ ಲಾಕ್ಡೌನ್ನಿಂದ ಜಾನುವಾರುಗಳಿಗೆ ನೀರಿನ ತೊಂದರೆಯಾಗುತ್ತಿದೆ. ಇಲ್ಲಿನ ಗೋಶಾಲೆಗೆ ಭೇಟಿ ನೀಡಿ ಹಸುಗಳನ್ನು ಕಂಡು ಖಷಿಯಾಗಿದೆ. ಮುಂದಿನ ದಿನಗಳಲ್ಲಿ ನನ್ನಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಶಾಸಕರು ಗೋಶಾಲೆಗೆ ಭೇಟಿ ನೀಡಿದ್ದು ಸಧ್ಯ ಜಿಲ್ಲಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನಗರಸಭೆ ಮಾಜಿ ಸದಸ್ಯ ವಸಂತ ಸುರಪುರ್, ಅರವಿಂದ ಉಪ್ಪಿನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts