More

  ಸಿಡಿದೆದ್ದ ಸ್ಯಾಂಡಲ್​ವುಡ್​, ಅಭಿಮಾನಿಗಳ ಆಕ್ರೋಶ; ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಪ್ರಕರಣ ಬಗ್ಗೆ ಚುರುಕಾದ ಪೊಲೀಸರು

  ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್​ ಪುತ್ಥಳಿ ಧ್ವಂಸ ಪ್ರಕರಣದ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುವ ಜತೆಗೆ ಸ್ಯಾಂಡಲ್​ವುಡ್​ ಕೂಡ ಸಿಡಿದೆದ್ದ ಕಾರಣ, ಪೊಲೀಸರು ಈಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗಾಗಿ ಮತ್ತಷ್ಟು ಚುರುಕಾಗಿದ್ದಾರೆ.

  ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಷ್ಣುವರ್ಧನ್​ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ಧ್ವಂಸ ಮಾಡಿರುವುದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿತ್ತು. ಈ ಪ್ರಕರಣ ಬಯಲಾಗುತ್ತಿದ್ದಂತೆ ಸ್ಥಳದಲ್ಲಿ ವಿಷ್ಣುವರ್ಧನ್​ ಅಭಿಮಾನಿಗಳು ಜಮಾಯಿಸಿ ಖಂಡನೆ ವ್ಯಕ್ತಪಡಿಸಿದ್ದರು. ಮೈಸೂರಲ್ಲೂ ವಿಷ್ಣು ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

  ಜತೆಗೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್​, ಚಾಲೆಂಜಿಂಗ್ ಸ್ಟಾರ್ ದರ್ಶನ್​, ಸಚಿವ ವಿ.ಸೋಮಣ್ಣ ಮುಂತಾದವರು ಶನಿವಾರವೇ ಈ ಘಟನೆಯನ್ನು ಖಂಡಿಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಇಂದು ಬೆಳಗ್ಗೆ ನಟ ಕಿಚ್ಚ ಸುದೀಪ್​ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಜಗ್ಗೇಶ್ ಕೂಡ ಘಟನೆಯನ್ನು ಖಂಡಿಸಿ ದನಿಗೂಡಿಸಿದ್ದಾರೆ. ಹೀಗೆ ವಿಷ್ಣುವರ್ಧನ್ ಪರ ದನಿ ಜೋರಾಗುತ್ತಿದ್ದಂತೆ ಮತ್ತಷ್ಟು ಚುರುಕಾಗಿರುವ ಪೊಲೀಸರು, ಎಫ್​ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

  ಕಿಡಿಗೇಡಿಗಳ ವಿರುದ್ಧ ಸೆಕ್ಷನ್​ 427 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಘಟನಾ ಸ್ಥಳದಲ್ಲಿ ಶನಿವಾರ ಓಡಾಡಿದ್ದವರ ಮಾಹಿತಿ ಕಲೆಹಾಕಲು ಆರಂಭಿಸಿದ್ದಾರೆ.

  ದಯವಿಟ್ಟು ಸಿಕ್ಕಿಹಾಕೋಬೇಡಿ, ನಿಮ್ಮ ಹೆಸ್ರು ಗೊತ್ತಾದ್ರೆ ಮುಂದಾಗೋದ್ನ ಯಾರೂ ತಡೆಯೋಕಾಗಲ್ಲ; ವಿಷ್ಣು ಪುತ್ಥಳಿ ಧ್ವಂಸ ಮಾಡಿದವರಿಗೆ ಕಿಚ್ಚ ಸುದೀಪ್​ ವಾರ್ನಿಂಗ್

  ವಿಷ್ಣುದಾದಗೆ ಅಪಮಾನ: ದುಷ್ಕರ್ಮಿಗಳ ವಿರುದ್ಧ ಸಿಡಿದೆದ್ದ ದರ್ಶನ್​

  ವಿಷ್ಣುವರ್ಧನ್​ ಪುತ್ಥಳಿ ಧ್ವಂಸ; ಅಭಿಮಾನಿಗಳಿಂದ ಪ್ರತಿಭಟನೆ, ಆಕ್ರೋಶ

  ಸಾಹಸಸಿಂಹ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳು: ಮಾಗಡಿ ರಸ್ತೆಯಲ್ಲಿ ಕೃತ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts