More

    ಲಾಕ್ಡೌನ್ಗೆ ಡೋಂಟ್ ಕೇರ್

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ದೇಶಾದ್ಯಂತ ಬೆಂಬಿಡದೆ ಕಾಡುತ್ತಿರುವ ಹೆಮ್ಮಾರಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಲಾಕ್ಡೌನ್ ಆದೇಶಕ್ಕೆ ನಗರ ಜನತೆ ಕ್ಯಾರೇ ಎನ್ನುತ್ತಿಲ್ಲ. ಇದರಿಂದ ಜಿಲ್ಲಾಡಳಿತ ಏನೇ ಕ್ರಮ ಕೈಗೊಂಡರೂ ನೀರಲ್ಲಿ ಹೋಮ ಮಾಡಿದಂತಾಗುತ್ತಿದೆ.

    ಕರೊನಾ ಎಂಬ ಪೆಡಂಭೂತ ಪಕ್ಕದ ಕಲಬುರಗಿ ಜಿಲ್ಲೆಗೆ ಎಂಟ್ರಿ ಹೊಡೆದಾಗಿದೆ. ಮೊನ್ನೆಯಷ್ಟೇ ಗಡಿ ಜಿಲ್ಲೆ ಬೀದರ್ನಲ್ಲೂ 10 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಅದೃಷ್ಟವಶಾತ್ ಗಿರಿ ಜಿಲ್ಲೆ ಸೋಂಕಿನಿಂದ ಸದ್ಯ ಸೇಫ್ ಆಗಿದೆ. ಆದರೆ ಇದನ್ನೇ ನೆಪ ಮಾಡಿಕೊಂಡು ಜನತೆ ಮತ್ತೆ ಮತ್ತೆ ರಸ್ತೆಗಳಿಯುತ್ತಿರುವುದು ಮತ್ತಷ್ಟು ಆತಂಕ ಮೂಡಿಸುತ್ತಿದೆ.

    ಮೂರು ವಾರಗಳಿಂದ ಜಿಲ್ಲಾಡಳಿತ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಆದರೆ ಶುಕ್ರವಾರದಿಂದ ನಗರದಲ್ಲಿ ಜನತೆ ಮೆಲ್ಲಗೆ ಹೊರ ಬರುತ್ತಿದ್ದು, ಅಲ್ಲಲ್ಲಿ ಗುಂಪಾಗಿ ಚರ್ಚಿಸುವುದು, ಸುಮ್ಮನೆ ಹರಟೆ ಹೊಡೆಯುವುದು, ಪಡ್ಡೆ ಹುಡಗರು ರಸ್ತೆಯಲ್ಲಿ ಜಾಲಿಯಾಗಿ ಬೈಕ್ನಲ್ಲಿ ತ್ರಿಪಲ್ ರೈಡ್ ಮಾಡುವುದು ಸಾಮಾನ್ಯವಾಗಿದೆ.

    ಇದರೊಂದಿಗೆ ಆಟೋರಿಕ್ಷಾಗಳು ಸಹ ರೋಡಿಗಿಳಿದಿದ್ದು, ಕಾರು, ಜೀಪ್ಗಳ ಓಡಾಟ ಲೆಕ್ಕವಿಲ್ಲದಂತಾಗಿದೆ. ಇವರಾಡುವ ಹುಡುಗಾಟಕ್ಕೆ ನಿಜವಾಗಿಯೂ ಸಮಸ್ಯೆ ಇದ್ದವರು ಹೊರಗಡೆ ಬಂದರೆ ಪೊಲೀಸರಿಂದ ಗೂಸಾ ಬೀಳುತ್ತಿದೆ. ಕರೊನಾ ವೈರಸ್ಗೆ ಸದ್ಯಕ್ಕೆ ಯಾವುದೇ ಔಷಧವಿಲ್ಲ. ಇದು ಅಪ್ಪಿತಪ್ಪಿ ವಕ್ಕರಿಸಿದರೆ ನಿಯಂತ್ರಣ ಮಾಡುವುದು ದೊಡ್ಡ ಸವಾಲಿನ ಕೆಲಸ. ಈಗಾಗಲೇ ಬೀದರ್ ಮತ್ತು ಕಲಬುರಗಿಯಲ್ಲಿ ಜನತೆ ವೈರಸ್ನಿಂದಾಗಿ ಥಂಡಿ ಹೊಡೆದು ಬೆಚ್ಚಗೆ ಮನೆಯಲ್ಲೇ ಕುಳಿತ್ತಿದ್ದಾರೆ. ಆದರೆ ಜಿಲ್ಲೆ ಜನತೆ ಮಾತ್ರ ವೈರಸ್ ಅಲ್ಲ, ಅವರಪ್ಪ ಬಂದರೂ ಹೆದರುವುದಿಲ್ಲ ಎಂಬ ಮೊಂಡುತನದಿಂದ ಬೀದಿ ಬೀದಿ ಸಂಚರಿಸುತ್ತಿರುವುದು ವರ್ತಮಾನದ ದುರಂತ.

    ಹೆಮ್ಮಾರಿ ವೈರಸ್ ಭೀತಿಯಿಂದಾಗಿ ಹೊಟ್ಟೆಪಾಡಿಗೆ ದೊಡ್ಡ ದೊಡ್ಡ ಸಿಟಿಗಳಿಗೆ ಗುಳೆ ಹೋದ ಜನತೆ ಮರಳಿ ತಮ್ಮ ಮನೆ ಸೇರಿದ್ದಾರೆ. ಅಂದಾಜು ಒಂದು ಲಕ್ಷ ಜನ ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಬಂದಿದ್ದು, ಇವರ ಆರೋಗ್ಯ ತಪಾಸಣೆ ಮಾಡುವುದರೊಳಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹೈರಾಣಾಗುತ್ತಿದ್ದರೆ, ಬಿರು ಬಿಸಿಲಲ್ಲಿ ಪೊಲೀಸರ ಕಷ್ಟ ಹೇಳತೀರದ್ದಾಗಿದೆ. ಆದರೆ ಜನತೆಗೆ ಮಾತ್ರ ಈ ಎಲ್ಲ ಸಿಬ್ಬಂದಿ ಟೈಂಪಾಸ್ಗಾಗಿ ಇಷ್ಟೆಲ್ಲ ಕಷ್ಟ ಪಡುತ್ತಿದ್ದಾರೇನೋ ಎಂಬಂತೆ ಕಾಣುತ್ತಿರಬಹುದೇ? ಈ ಪ್ರಶ್ನೆಗೆ ಉತ್ತರ ಮಾತ್ರ ಸಿಗುತ್ತಿಲ್ಲ.

    ಲಾಕ್ಡೌನ್ನಿಂದಾಗಿ ಜನರ ಜೀವನ ಪದ್ಧತಿ ಹಳಿ ತಪ್ಪಿದೆ ನಿಜ. ಎಲ್ಲರಿಗೂ ಸಮಸ್ಯೆಗಳಿವೆ. ಹಾಗಂತ ಮನಸ್ಸಿಗೆ ಬಂದಂತೆ ಅಲೆದಾಡಿದರೆ ಹೇಗೆ? ದೇಶದ ಪ್ರಧಾನಿ 14ರತನಕ ಲಾಕ್ಡೌನ್ ಆದೇಶ ನೀಡಿದ್ದಾರೆ. ಅಲ್ಲಿಯ ತನಕ ಜನತೆ ಇದೊಂದು ತಪಸ್ಸು ಎಂದು ತಿಳಿದು ಮನೆಯಲ್ಲಿರುವ ಮೂಲಕ ಮಹಾಮಾರಿ ಜಿಲ್ಲೆಯೊಳಗೆ ಬಿಡದಿರಲು ಒಗ್ಗಟ್ಟಾಗುವುದು ಸದ್ಯದ ಜರೂರಿಯಾಗಿದೆ.

    ರೋಡ್ಗಳು ಫ್ರೀ, ಬಡಾವಣೆ ರಶ್
    ನಗರದ ಕೆಲ ಮುಖ್ಯರಸ್ತೆಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಜನರಿಲ್ಲದೆ ಫ್ರೀಯಾಗಿವೆ ಎಂದು ಖುಷಿ ಪಡುವಂತಿಲ್ಲ. ಕಾರಣ ಬಡಾವಣೆಗಳಲ್ಲಿ ಜನತೆ ಗುಂಪಾಗಿ ಚಚರ್ೆ ನಡೆಸುವ ಮೂಲಕ ವೈರಸ್ ಹರಡಲು ಮುಕ್ತ ಅವಕಾಶ ನೀಡುತ್ತಿದ್ದಾರೆ. ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿ ಲಾಕ್ಡೌನ್ನ ಉಳಿದ ದಿನಗಳೂ ಸೇಫಾಗಿಟ್ಟುಕೊಳ್ಳಲು ಮುಂದಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts