More

    ಹಬ್ಬಕ್ಕೆ ಎನ್ನುವಂತೆ ಪ್ರತಿವರ್ಷವೂ ಬರುತ್ತಂತೆ ಕರೊನಾ; ಚೀನಾದಿಂದಲೇ ಬಂದಿದೆ ವಾರ್ನಿಂಗ್​

    ನವದೆಹಲಿ: ಇನ್ನೊಂದು ತಿಂಗಳಲ್ಲಿ ಕರೊನಾ ಸಂಕಷ್ಟ ಮುಗಿದರೂ ಕೂಡ ಇದರ ಆಘಾತದಿಂದ ಚೇತರಿಸಿಕೊಳ್ಳಲು ಇನ್ನಾರು ತಿಂಗಳಾದರೂ ಬೇಕು ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು. ಅಷ್ಟರಲ್ಲಾಗಲೇ ಮತ್ತೊಮ್ಮೆ ಕರೊನಾ ವಕ್ಕರಿಸಿದರೆ ಅಚ್ಚರಿಯಿಲ್ಲ!

    ಇಂಥದ್ದೊಂದು ಎಚ್ಚರಿಕೆ ಕರೊನಾ ಜನ್ಮಸ್ಥಳವಾದ ಚೀನಾದಿಂದಲೇ ಬಂದಿದೆ. ಕರೊನಾವನ್ನು 17 ವರ್ಷಗಳ ಹಿಂದೆ ಜಗತ್ತನ್ನು ಕಾಡಿದ್ದ ಸಾರ್ಸ್​ ವೈರಾಣುವಿನ ಸೋದರ ಸಂಬಂಧಿ ಎನ್ನಬಹುದು. ಸಾರ್ಸ್​ನಿಂದ ಉಂಟಾದ ಕಾಯಿಲೆಯನ್ನು ಒಮ್ಮೆ ತಡೆದರೆ ಮತ್ತೊಮ್ಮೆ ದೇಹದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಗುಣಲಕ್ಷಣಗಳನ್ನೇ ತೋರಿಸಿದ ಕರೊನಾ ಕಥೆಯೇ ಬೇರೆ ಎನ್ನುತ್ತಿದ್ದಾರೆ ಚೀನಿ ಸಂಶೋಧಕರು.
    ಕರೊನಾ ವೈರಸ್​ಅನ್ನು ನಿರ್ಮೂಲನೆ ಮಾಡುವುದು ಸಾಧ್ಯವೇ ಇಲ್ಲ. ಶೀತ, ನೆಗಡಿಯಂತೆ ಇದು ಕಾಡುತ್ತಲೇ ಇರುತ್ತದೆ ಎಂದು ಹೇಳುತ್ತಾರೆ.

    ದೇಹದಲ್ಲಿ ವೈರಸ್​ ಅಡಗಿರುವ ಯಾವುದೇ ಲಕ್ಷಣಗಳು ಕಾಣಿಸದಿದ್ದಾಗ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದು. ಹೀಗಾಗಿ ಇದು ಇನ್ನೊಬ್ಬರಿಗೆ ಹರಡುವುದು ಗೊತ್ತಾಗುವುದೇ ಇಲ್ಲ ಎಂದು ಚೀನಾ ಸಂಶೋಧಕರ ತಂಡ ಹೇಳಿದೆ.

    ಸಾರ್ಸ್​ನಿಂದ ತೀವ್ರ ಸ್ವರೂಪದ ಶೀತಜ್ವರ ಕಾಣಿಸಿಕೊಳ್ಳುತ್ತಿತ್ತು. ಅವರನ್ನು ಇತರರಿಂದ ಪ್ರತ್ಯೇಕಿಸಿದರೆ, ವೈರಸ್​ ಹಬ್ಬುವುದನ್ನು ತಡೆದಂತಾಗುತ್ತಿತ್ತು. ಆದರೆ, ಅಂದಾಜು ಎರಡೂವರೆ ತಿಂಗಳ ಲಾಕ್​ಡೌನ್​ ಬಳಿಕವೂ ಎಷ್ಟೇ ಪ್ರಯತ್ನ ನಡೆಸಿದರೂ ಚೀನಾದಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ.

    ಕೋವಿಡ್​-19 ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕರೊನಾ ವೈರಸ್​ ಮಾನವ ದೇಹದಲ್ಲಿ ದೀರ್ಘ ಕಾಲದವರೆಗೆ ಇರುತ್ತದೆ ಎಂದು ಚೀನಾ ವೈದ್ಯಕೀಯ ಅಕಾಡೆಮಿಯ ಪ್ಯಾಥೋಜನ್​ ಬಯಾಲಜಿ ವಿಭಾಗದ ನಿರ್ದೇಶಕ ಜಿನ್​ ಕೀ ಹೇಳಿದ್ದಾರೆ.

    ದೇಶದ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡುವ ಲಾಕ್​ಡೌನ್​ ವಿಧಿಸಿದ ಹೊರತಾಗಿಯೂ ಈ ವೈರಸ್​ ನಿಯಂತ್ರಿಸಲಾಗುತ್ತಿಲ್ಲ. ಇದೊಂದು ಕಾಲಮಾನ ಆಧಾರಿತ ಕಾಯಿಲೆಯಾಗಿ ಕಾಣಿಸಿಕೊಳ್ಳಲಿದೆ ಎಂದು ಅಮೆರಿಕದ ಸಾಂಕ್ರಾಮಿಕ ಹಾಗೂ ಅಲರ್ಜಿ ಸಂಬಂಧಿಸಿದ ಕಾಯಿಲೆಗಳ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಅಂಥೋನಿ ಫೌಸಿ ಹೇಳಿದ್ದಾರೆ. ಚೀನಾದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿ ಎಂದಿದ್ದಾರೆ.

    ಕರೊನಾ…… ಎಲ್ಲೆಲ್ಲಿ ಹುಡುಕಲಿ ನಿನ್ನ, ಕೊಚ್ಚೆ ನೀರಿನ ಮೇಲೂ ಕಣ್ಣಿಟ್ಟಿದ್ದಾರೆ ವಿಜ್ಞಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts