More

    ಸಂಚಾರಿ ಪೇದೆ, ಬೆಳ್ಳುಳ್ಳಿ ಶುಂಠಿ ವ್ಯಾಪಾರಿಗೆ ವೈರಸ್ ಸೋಂಕು

    ದಾವಣಗೆರೆ: ನಗರದಲ್ಲಿ ಪೊಲೀಸ್ ಪೇದೆ, ಬೆಳ್ಳುಳ್ಳಿ, ಶುಂಠಿ ವ್ಯಾಪಾರಿ ಸೇರಿ ಮೂವರಲ್ಲಿ ಗುರುವಾರ ಸೋಂಕು ಪತ್ತೆಯಾಗಿದ್ದು, ಪ್ರಕರಣಗಳ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. ಸಂಚಾರ ಠಾಣೆಯ 34 ವರ್ಷದ ಪೇದೆಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಪೇದೆ ಮೇ 7, 8, 9 ರಂದು ಕಂಟೇನ್ಮೆಂಟ್ ವಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

    ಮತ್ತಿಬ್ಬರಿಗೆ ಸೋಂಕು: ಕಲಬುರಗಿ ಜಿಲ್ಲೆಯಲ್ಲಿ ಗುರುವಾರ ಮತ್ತೆರಡು ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 83ಕ್ಕೇರಿದೆ. 80 ವರ್ಷದ ವೃದ್ಧೆ ಮತ್ತು 28 ವರ್ಷದ ಯುವಕನಿಗೆ ಕರೊನಾ ಸೋಂಕು ಖಚಿತವಾಗಿದೆ.

    ನಾಲ್ವರಿಗೆ ಕರೊನಾ ದೃಢ: ಗದಗ ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದೆ. ನಾಲ್ವರು ಪುರುಷರಿಗೆ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಮೇ 12ರಂದು ಗುಜರಾತ್​ನ ಅಹಮದಾಬಾದ್​ನಿಂದ ಜಿಲ್ಲೆಗೆ ಆಗಮಿಸಿರುವ 9 ಜನರ ಪೈಕಿ ನಾಲ್ವರಲ್ಲಿ ಸೋಂಕು ಇರುವುದು ಖಚಿತವಾಗಿದೆ.

    ಇದನ್ನೂ ಓದಿ   4ಜಿ ಸ್ಮಾರ್ಟ್​ಫೋನ್​ ಬಳಕೆದಾರರೇ ಇನ್ನೆರಡು ವರ್ಷ ನಿಮಗಿಲ್ಲ ಚಿಂತೆ..!

    ಮಂಡ್ಯ, ಬೆಳಗಾವಿಗೆ ಮುಂಬೈ ನಂಟು

     ದೆಹಲಿ ತಬ್ಲಿಘಿ, ರಾಜಸ್ಥಾನದ ಅಜ್ಮೀರ್ ಬಳಿಕ ಮುಂಬೈನಿಂದ ಆಗಮಿಸುತ್ತಿರುವ ಮಂದಿ ಬೆಳಗಾವಿ ಹಾಗೂ ಮಂಡ್ಯ ಜನತೆಯ ನಿದ್ದೆಗೆಡಿಸಿದ್ದಾರೆ. ಬೆಳಗಾವಿಯಲ್ಲಿ ಗುರುವಾರ ಗರ್ಭಿಣಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಇತ್ತ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ನಾಲ್ವರು, ಮಳವಳ್ಳಿಯ ಒಬ್ಬರಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

    27 ವರ್ಷದ ಗರ್ಭಿಣಿ ಮೇ 7ರಂದು ಖಾಸಗಿ ವಾಹನದ ಮೂಲಕ ಮುಂಬೈನಿಂದ ಬೆಳಗಾವಿಗೆ ಬಂದಿದ್ದರು. ಅವರನ್ನು ಮನೆಯಲ್ಲೇ ಕ್ವಾರಂಟೈನ್​ನಲ್ಲಿಡಲಾಗಿತ್ತು. ಮೇ 11ರಂದು ಕಫ ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ವರದಿ ಪಾಸಿಟಿವ್ ಬಂದಿದ್ದು, ಗರ್ಭಿಣಿ ಸಂಪರ್ಕದಲ್ಲಿದ್ದ ಸಂಬಂಧಿಕರು, ಮುಂಬೈನಿಂದ ಕರೆದುಕೊಂಡು ಬಂದಿರುವ ಚಾಲಕನನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಗರ್ಭಿಣಿ ಆರೋಗ್ಯ ತಪಾಸಣೆ ನಡೆಸಿದ ವೈದ್ಯರನ್ನೂ ತಪಾಸಣೆಗೊಳಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

    ಇದನ್ನೂ ಓದಿ ಐದೇ ನಿಮಿಷದಲ್ಲಿ ಕರೊನಾ ಪರೀಕ್ಷೆ, ಒಂದೇ ಬಾರಿಗೆ 8 ಮಾದರಿ ಟೆಸ್ಟ್!

    ತಂದೆ, ಮಗ ಸೇರಿ ಐವರಿಗೆ ಸೋಂಕು: ಮುಂಬೈ ಮೂಲದ ನಾಲ್ವರ ಜತೆಗೆ ತಬ್ಲಿಘಿಗಳಿಂದ ಸೋಂಕು ಹರಡಿದ್ದ ಮಳವಳ್ಳಿಯಲ್ಲಿ ಹಲವು ದಿನಗಳ ನಂತರ ವ್ಯಕ್ತಿಯೊಬ್ಬನಿಗೆ ಸೋಂಕು ದೃಢವಾಗಿದೆ. ಕೆ.ಆರ್.ಪೇಟೆಯ ಸಾರಂಗಿ ಗ್ರಾಮದ 48 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಮುಂಬೈನ ಹಂದೇರಿ ಈಸ್ಟ್​ನಲ್ಲಿ ವಾಸವಾಗಿದ್ದ ಇವರ ಪತಿ ಆಟೋ ಚಾಲಕ, ಪುತ್ರ ಬ್ಯಾಂಕ್ ನೌಕರ. ಇವರು ಮೇ 10ರಂದು ಪಾಸ್ ಪಡೆದು ಮಂಡ್ಯಕ್ಕೆ ಆಗಮಿಸಿದ್ದರು. ಪತಿ, ಪುತ್ರನ ವರದಿ ನೆಗೆಟಿವ್ ಬಂದಿದೆ. ಕೆ.ಆರ್.ಪೇಟೆಯ ಜೈನಗರದ ನಿವಾಸಿ 38 ವರ್ಷದ ವ್ಯಕ್ತಿ ಹಾಗೂ ಆತನ ಪುತ್ರನಿಗೆ ಸೋಂಕು ದೃಢವಾಗಿದೆ. ಇವರು 10 ವರ್ಷದಿಂದ ಮುಂಬೈನ ನೆಹರು ನಗರದ ವಿಲೆ ಪಾರ್ಲೆ ಮುಂಬೈ ಈಸ್ಟ್​ನ ಹೋಟೆಲ್​ನಲ್ಲಿ ಬೌನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಿಕ್ಕೇರಿ ಹೋಬಳಿಯ ಮಾಣಿಕ್ಯನಹಳ್ಳಿಯ 26 ವರ್ಷದ ವ್ಯಕ್ತಿ ಮೆರೆನ್ ಡ್ರೖೆವ್ ಮುಂಬೈ ಸೆಂಟ್ರಲ್ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದು, ಮಾ.29ರಂದು ಮಡ್​ಗಾಂವ್​ಗೆ ಹೋಗಿ ನೆಲೆಸಿದ್ದರು. ಮೇ 8ರಂದು ಅಲ್ಲಿಂದ ಬಸ್​ನಲ್ಲಿ ಕೆ.ಆರ್.ಪೇಟೆಗೆ ಆಗಮಿಸಿದ ಈ ವ್ಯಕ್ತಿಯ ತಪಸಣಾ ವರದಿ ಪಾಸಿಟಿವ್ ಬಂದಿದೆ.

    ಬೀದರ್ ಗ್ರಾಮೀಣಕ್ಕೂ ಎಂಟ್ರಿ!

    ಬೀದರ್: ಮಹಾಮಾರಿ ಕರೊನಾ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟು ಜನರ ನೆಮ್ಮದಿ ಹಾಳು ಮಾಡಿದೆ. ಹುಮನಾಬಾದ್ ತಾಲೂಕಿನ ಹುಣಸಗೇರಾ ಗ್ರಾಮದ ಮಹಿಳೆಗೆ ಸೋಂಕು ತಗುಲಿರು ವುದು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಗುರುವಾರ ಜಿಲ್ಲೆಯಲ್ಲಿ 7 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಇವರಲ್ಲಿ ಬೀದರ್​ನ ಗೋಲೇಖಾನಾ ಹಾಗೂ ಮನಿಯಾರ್ ತಾಲೀಮ್ 6 ಮಂದಿ ಹಾಗೂ ಹುಣಸಗೇರಾದ ಮಹಿಳೆ ಸೇರಿದ್ದಾರೆ. ಮಹಿಳೆಯು ಮುಂಬೈನಿಂದ ಬಂದಿರುವ ಕಾರಣಕ್ಕೆ ಸೋಂಕಿತಳಾದರೆ, ಉಳಿದವರು ನಗರದ ಓಲ್ಡ್ ಸಿಟಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ತಂದೆಯಿಂದಲೇ ಅಜ್ಜನ ಹತ್ಯೆ, ನೊಂದ ಮೊಮ್ಮಗಳು ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts