More

    ಪುಣ್ಯ ಕಾರ್ಯಕ್ಕೆ ಸಂಪತ್ತು ಬಳಕೆಯಾಗಲಿ

    ನೇಸರಗಿ: ಪ್ರತಿಯೊಬ್ಬರೂ ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಇಂಚಲ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

    ನೇಸರಗಿ-ಮಲ್ಲಾಪುರ ಗಾಳೇಶ್ವರ ಮಠದ ಸುವರ್ಣ ಜಾತ್ರಾ ಮಹೋತ್ಸವ ಅಂಗವಾಗಿ ವೇದಾಂತ ಪರಿಷತ್‌ನ ಹಸ್ತಕ್ಕೆ ಭೂಷಣ ದಾನಂ ವಿಷಯದ ಮೇಲೆ ಸೋಮವಾರ ಆಯೋಜಿಸಿರುವ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪರಮಾತ್ಮನು ಕೊಟ್ಟಾಗ ಉದಾರತನದಿಂದ ಸಂಪತ್ತನ್ನು ಲಾಪೇಕ್ಷೆ ಇಲ್ಲದೆ ದಾನ ಮಾಡಬೇಕು. ಪುಣ್ಯ ಕಾರ್ಯಗಳಿಗೆ ಸಂಪತ್ತು ಬಳಸಿಕೊಳ್ಳಬೇಕು. ದಾನ ಮಾಡುವುದರಿಂದ ಕೀರ್ತಿ ತಾನಾಗಿಯೇ ಬರುತ್ತದೆ. ಮಠಮಾನ್ಯಗಳಿಗೆ ದಾನ ಮಾಡಬೇಕು ಎಂದರು.

    ಮಠದ ಚಿದಾನಂದ ಸ್ವಾಮೀಜಿ ಮಾತನಾಡಿ, ದಾನಗಳಲ್ಲಿ ಹಲವು ವಿಧ. ದಾನಗಳಲ್ಲಿ ಅನ್ನದಾನ ಶ್ರೇಷ್ಠ. ಆದರೆ ವಿದ್ಯಾದಾನ ಅದಕ್ಕಿಂತ ಶ್ರೇಷ್ಠ ಎಂದರು.

    ಅಂಕಲಿಯ ನಿರುಪಾದೀಶ್ವರ ಸಂಸ್ಥಾನ ಮಠದ ವೀರಭದ್ರ ಸ್ವಾಮೀಜಿ, ಕುಳ್ಳೂರಿನ ಶಿವಯೋಗಿಶ್ವರ ಕಲ್ಮಠದ ಬಸವಾನಂದ ಭಾರತಿ ಸ್ವಾಮೀಜಿ, ಹಂಪಿ ವಿದ್ಯಾನಂದ ಸ್ವಾಮೀಜಿ, ಹುಬ್ಬಳ್ಳಿ ಜಡಿಸಿದ್ದೇಶ್ವರ ಮಠದ ರಮಾನಂದ ಭಾರತಿ ಸ್ವಾಮೀಜಿ, ಯರಗಟ್ಟಿ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಸೊಗಲ ಆಶ್ರಮದ ಚಿದಾನಂದ ಸ್ವಾಮೀಜಿ, ಗದಗನ ಅಕ್ಕಮಹಾದೇವಿ ತಾಯಿ, ಕಲ್ಲೂರಿನ ಸಿದ್ದಾರೂಢರ ಮಠದ ಮಾತೋಶ್ರೀ ಲಲಿತಮ್ಮ ಇದ್ದರು.

    ಹೂಲಿಗೇರಿಯ ವೀರಯ್ಯ ಸ್ವಾಮೀಜಿ ರಚಿಸಿದ ಅವಧೂತ ಗಾಳೇಶ್ವರ ಮಹಾರಾಜರ ಚರಿತಾಮೃತ ಗ್ರಂಥ ಬಿಡುಗಡೆ ಮಾಡಲಾಯಿತು. ಗೋಕಾಕದ ಮೇಟಿ ಕುಟುಂಬದವರಿಂದ ತೊಟ್ಟಿಲೋತ್ಸವ ಹಾಗೂ ಕಿರೀಟ ಪೂಜೆ ನೆರವೇರಿತು.

    ಬೆಳಗ್ಗೆ ಗಾಳೇಶ್ವರ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಯಿತು. ರೈತ ದೇಶದ ಬೆನ್ನೆಲುಬು ವಿಷಯದ ಮೇಲೆ ಕೊಲ್ಲಾಪುರ ಕನ್ಹೇರಿ ಮಠದ ಅದಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರವಚನ ನೀಡಿದರು.

    ರಾಜ್ಯ ರೈತ ಸಂಠದ ಕಾರ್ಯಾಧ್ಯಕ್ಷ ರಾಜು ಪವಾರ, ಚುವನಪ್ಪ ಪೂಜೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts