More

    ಅಂಗೈಯಲ್ಲೇ ದೇವಾಲಯ ದರ್ಶನ; ಮುಜರಾಯಿ ಇಲಾಖೆ ದೇಗುಲಗಳಿಗೆ ಡಿಜಿಟಲ್ ಸ್ಪರ್ಶ

    | ಪಂಕಜ ಕೆ.ಎಂ. ಬೆಂಗಳೂರು

    ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರತಿಷ್ಠಿತ ದೇವಾಲಯಗಳ ಐತಿಹ್ಯ, ವಾಸ್ತುಶಿಲ್ಪ, ವಿಶೇಷತೆ, ಸೇವೆಗಳು ಸೇರಿ ಸಮಗ್ರ ಮಾಹಿತಿ ಆನ್​ಲೈನ್​ನಲ್ಲೇ ದೊರೆಯಲಿದ್ದು, ಇನ್ನು ಮುಂದೆ ಅಂಗೈಯಲ್ಲೇ ದೇವಾಲಯ ದರ್ಶನ ಹಾಗೂ ಪ್ರವಾಸ ಮಾಡಬಹುದಾಗಿದೆ.

    ನ್ಯಾಷನಲ್ ಇನ್​ಫರ್ಮ್ಯಾಟಿಕ್ಸ್​ ಸೆಂಟರ್ (ಎನ್​ಐಸಿ) ಸೂಚನೆ ಮೇರೆಗೆ ರಾಜ್ಯ ಮುಜರಾಯಿ ಇಲಾಖೆ ನೂತನ ವೆಬ್​ಸೈಟ್ ಹಾಗೂ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿದ್ದು, ತಮಿಳುನಾಡು ಮಾದರಿಯಲ್ಲಿ ಐಟಿಎಂಎಸ್ (ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್​ವೆುಂಟ್ ಸಿಸ್ಟಂ) ಮೂಲಕ ದೇವಾಲಯಗಳ ಮಾಹಿತಿ ಒದಗಿಸಲಿದೆ. ಈ ಯೋಜನೆ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಎನ್​ಐಸಿ ವಹಿಸಿಕೊಂಡಿದ್ದು, ಶೀಘ್ರದಲ್ಲೇ ಚಾಲನೆ ಪಡೆಯಲಿದೆ.

    ವರ್ಚುಯಲ್ ಟೆಂಪಲ್ ಟೂರ್

    ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗದವರು ತಾವು ಇರುವಲ್ಲಿಯೇ ವರ್ಚುಯಲ್ ಟೆಂಪಲ್ ಟೂರ್ ಮೂಲಕ ದೇವಾಲಯದ ದರ್ಶನ ಮಾಡಬಹುದಾಗಿದೆ. ಇದರಲ್ಲಿ 360 ಡಿಗ್ರಿ ಕೋನದಲ್ಲಿ ದೇವಾಲಯಗಳ ಚಿತ್ರಣ ವೀಕ್ಷಿಸಬಹುದಾಗಿದೆ. ಅಲ್ಲಿನ ವಾಸ್ತುಶಿಲ್ಪ, ವಿನ್ಯಾಸದ ಶೈಲಿ, ಒಳ ಮತ್ತು ಹೊರಾಂಗಣ ಚಿತ್ರಣವನ್ನೂ ನೋಡಬಹುದಾಗಿದೆ. ಜತೆಗೆ ವೆಬ್​ಪೇಜ್​​ನಲ್ಲಿ ದೇವಾಲಯದ ಇತಿಹಾಸ, ವಿಶೇಷ ಆಚರಣೆ, ಉತ್ಸವಗಳು, ಕೆರೆ, ಕಲ್ಯಾಣಿ, ಅವುಗಳ ಹಿನ್ನೆಲೆ, ಮೂಲಸೌಕರ್ಯ, ಆಸ್ತಿ ವಿವರ ಸೇರಿ ಸಮಗ್ರ ಮಾಹಿತಿ ಒದಗಿಸಲಿದೆ. ಇದರಿಂದಾಗಿ ಜನರು ಮನೆಯಲ್ಲಿಯೇ ಕುಳಿತು ಟೆಂಪಲ್ ಟೂರ್ ಮಾಡಬಹುದು.

    ಆನ್​ಲೈನ್ ಬುಕ್ಕಿಂಗ್ ವ್ಯವಸ್ಥೆ

    ಇಲಾಖೆಗೆ ಸೇರಿದ ಪ್ರತಿ ದೇವಾಲಯಕ್ಕೂ ವೆಬ್​ಸೈಟ್ ರಚನೆಯಾಗಿದ್ದು, ಮೊಬೈಲ್​ಫೋನ್​​ನಲ್ಲಿಯೇ ಐಟಿಎಂಎಸ್​​ನಲ್ಲಿ ಕ್ಲಿಕ್ ಮಾಡಿ ತಮ್ಮ ಆಯ್ಕೆಯ ದೇವಾಲಯಗಳ ಮಾಹಿತಿಯನ್ನು ಪಡೆಯಬಹುದು. ಆನ್​ಲೈನ್ ಮೂಲಕ ಬುಕ್ಕಿಂಗ್ ಮಾಡಿ ಹಣ ಪಾವತಿಸಿ ದೇವಾಲಯಗಳಲ್ಲಿ ನಡೆಯುವ ಅರ್ಚನೆ, ವಿಶೇಷ ಪೂಜೆ, ಸೇವೆಗಳನ್ನು ಮಾಡಿಸಬಹುದು. ಹಣ ಪಾವತಿ ಮಾಡಿದ ಕೂಡಲೇ ಎಸ್​ಎಂಎಸ್ ಹಾಗೂ ಇ-ಮೇಲ್ ಮೂಲಕ ನೀವು ಮಾಡಿಸುತ್ತಿರುವ ಪೂಜೆ, ಸಮಯ ಸೇರಿ ಸಂಪೂರ್ಣ ವಿವರದೊಂದಿಗೆ ಸಂದೇಶ ರವಾನೆಯಾಗಲಿದೆ. ಇದೇ ಅಲ್ಲದೆ ದೇವಾಲಯ ತಲುಪಲು ಅನುಕೂಲವಾಗುಂತೆ ಆನ್​ಲೈನ್​​ನಲ್ಲಿ ನಕ್ಷೆಯನ್ನೂ ಒದಗಿಸಲಿದ್ದು, ಇದಕ್ಕಾಗಿ ಜಿಐಎಸ್ (ಜಿಯೋಗ್ರಾಫಿಕ್ ಇನ್​ಫಾರ್ಮೇಷನ್ ಸಿಸ್ಟಮ್ ) ವ್ಯವಸ್ಥೆ ಜಾರಿಗೊಳಿಸಲಾಗಿದೆ.

    ಇ-ಆಫೀಸ್ ಅನುಷ್ಠಾನ

    ಇಲಾಖೆ ಅಡಿಯಲ್ಲಿ 34,562 ದೇವಾಲಯಗಳಿದ್ದು, ಇವುಗಳಲ್ಲಿ ಬಹಳಷ್ಟು ದೇಗುಲಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚರ ಹಾಗೂ ಸ್ಥಿರ ಆಸ್ತಿ, ಅತ್ಯಮೂಲ್ಯ ದಾಖಲೆಗಳನ್ನು ಹೊಂದಿವೆ. ಅವುಗಳ ಸಂರಕ್ಷಣೆ ಹಾಗೂ ಪಾರದರ್ಶಕ ನಿರ್ವಹಣೆ ದೃಷ್ಟಿಯಿಂದ ಇ-ಆಫೀಸ್ ವ್ಯವಸ್ಥೆ ಸಹ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಿಂದ ಇಲಾಖೆಯ ದೈನಂದಿನ ಕಾರ್ಯಚಟುವಟಿಕೆಗಳು ಸುಗಮವಾಗಲಿವೆ. ಜತೆಗೆ ಇ-ಹುಂಡಿ ಯೋಜನೆ ಬಗ್ಗೆಯೂ ಚಿಂತನೆ ನಡೆಸಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಈ ಎಲ್ಲಾ ಸೌಲಭ್ಯಗಳನ್ನು ಮೊದಲನೆಯ ಹಂತದಲ್ಲಿ ಇಲಾಖೆ ಅಡಿಯಲ್ಲಿನ 205 ಎ ವರ್ಗದ ದೇವಾಲಯಗಳಲ್ಲಿ ಅನುಷ್ಠಾನಗೊಳಿಸಲಿದ್ದು, ಎರಡನೇ ಹಂತದಲ್ಲಿ 139 ಬಿ ವರ್ಗದ ಹಾಗೂ ಮೂರನೇ ಹಂತದಲ್ಲಿ ಇಲಾಖೆ ವ್ಯಾಪ್ತಿಯ 34,219 ಸಿ ವರ್ಗದ ದೇವಾಲಯಗಳಲ್ಲಿ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮಜರಾಯಿ ಇಲಾಖೆ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಇಲಾಖೆಯ ಅಡಿಯಲ್ಲಿರುವ ದೇವಸ್ಥಾನಗಳಲ್ಲಿ ಪಾರದರ್ಶಕತೆ, ಹಣಕಾಸು ನಿರ್ವಹಣೆಯಲ್ಲಿ ಉತ್ತರದಾಯಿತ್ವ ಹಾಗೂ ಸೇವೆಗಳು ಮತ್ತು ಪ್ರಸಾದಕ್ಕೆ ಡಿಜಿಟಲ್ ಪೇಮೆಂಟ್ಸ್ ವ್ಯವಸ್ಥೆ

    | ಶಶಿಕಲಾ ಜೊಲ್ಲೆ ಮುಜರಾಯಿ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts