More

    ರೆಡ್ ಝೋನ್ ನ್ಯಾಯಾಲಯಗಳಲ್ಲಿ ಆಗಸ್ಟ್ 15 ರವರೆಗೆ ವರ್ಚುವಲ್ ಹಿಯರಿಂಗ್

    ಶ್ರೀನಗರ: ಕರೊನಾದಿಂದಾಗಿ ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯಗಳು ಆಗಸ್ಟ್ 15 ರವರೆಗೆ ವರ್ಚುವಲ್ ವಿಧಾನದ ಮೂಲಕ ಪ್ರಕರಣಗಳ ವಿಚಾರಣೆಯನ್ನು ಮುಂದುವರಿಸಲಿವೆ.
    ಉಚ್ಛನ್ಯಾಯಾಲಯ ಸೋಮವಾರ ಹೊರಡಿಸಿದ ಆದೇಶದ ಪ್ರಕಾರ, ಕೆಂಪು ವಲಯಗಳಲ್ಲಿರುವ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳು ಆಗಸ್ಟ್ 15 ರವರೆಗೆ ವರ್ಚುವಲ್ ಮೋಡ್ ಮೂಲಕ ಪ್ರಕರಣಗಳನ್ನು ಆಲಿಸುತ್ತವೆ.
    ಆದೇಶದ ಪ್ರಕಾರ, ವಕೀಲರು ತಮ್ಮ ನಿವಾಸ ಅಥವಾ ಕಚೇರಿಗಳಿಂದ ವರ್ಚುವಲ್ ಆಗಿ ಕಾಣಿಸಿಕೊಳ್ಳುತ್ತಾರೆ. ನ್ಯಾಯಾಧೀಶರು ತಮ್ಮ ನಿವಾಸ ಅಥವಾ ಕಚೇರಿಯಲ್ಲಿದ್ದುಕೊಂಡು ವಿಷಯವನ್ನು ಆಲಿಸಬೇಕಾಗುತ್ತದೆ.

    ಇದನ್ನೂ ಓದಿ:  ಬಾರ್‌ ಓಪನ್‌ ಆದ್ರೂ ಸ್ಯಾನಿಟೈಸರ್‌ ಹೀರಿ ಪಾರ್ಟಿ- ಕುಡುಕರ ಹೊಸರೂಪಕ್ಕೆ ಪೊಲೀಸರು ಸುಸ್ತು!

    ಕರ್ತವ್ಯದಲ್ಲಿರುವ ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಎಲ್ಲ ಸರ್ಕಾರಿ ಸುರಕ್ಷತಾ ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕೆಂದು ತಿಳಿಸಲಾಗಿದೆ.
    ಯಾವುದೇ ಕೆಂಪು ವಲಯದಲ್ಲಿರುವ ನ್ಯಾಯಾಲಯಗಳ ಪ್ರಿಸೈಡಿಂಗ್ ಅಧಿಕಾರಿ ಪ್ರತಿ ಕೆಲಸದ ದಿನದಂದು ಕೇವಲ ಶೇ.50 ಸಿಬ್ಬಂದಿ ಹಾಜರಾತಿ ಖಾತ್ರಿಪಡಿಸುವ ರೀತಿ ಸಿಬ್ಬಂದಿ ಪಟ್ಟಿಯನ್ನು ತಯಾರಿಸಲು ತಿಳಿಸಲಾಗಿದೆ.

    ಇದನ್ನೂ ಓದಿ:  ಅಯೋಧ್ಯೆ ರೈಲು ನಿಲ್ದಾಣ ಹೀಗಿರಲಿದೆ…

    ಈ ಆದೇಶದ ನಂತರ, ಶ್ರೀನಗರ ಮತ್ತು ಅನಂತ್‌ನಾಗ್ ಜಿಲ್ಲಾ ನ್ಯಾಯಾಲಯಗಳು ಆಗಸ್ಟ್ 15 ರವರೆಗೆ ವರ್ಚುವಲ್ ಮೋಡ್ ಮೂಲಕ ವಿಚಾರಣೆಯನ್ನು ಮುಂದುವರಿಸಲು ಆದೇಶ ಹೊರಡಿಸಿವೆ.
    ಈ ನಿಟ್ಟಿನಲ್ಲಿ ಶ್ರೀನಗರ ಜಿಲ್ಲಾ ನ್ಯಾಯಾಲಯ ಹೊರಡಿಸಿದ ಆದೇಶದ ಮೂಲಕ ಪ್ರಿಸೈಡಿಂಗ್ ಅಧಿಕಾರಿಗಳು ತಮ್ಮ ಅಧಿಕೃತ ನಿವಾಸಗಳಿಂದ ಅಥವಾ ಕಚೇರಿಯಿಂದ ಆಲಿಸಬೇಕೆಂದು ತಿಳಿಸಲಾಗಿದೆ. ಸಾರ್ವಜನಿಕ, ಅಪರಾಧ, ಜಾಮೀನು, ನಿರ್ವಹಣಾ ಪ್ರಕರಣಗಳು ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಬರುವ ತುರ್ತು ವಿಷಯಗಳನ್ನು ವರ್ಚುವಲ್ ವಿಧಾನದ ಮೂಲಕ ತಮ್ಮ ನಿವಾಸ ಅಥವಾ ಕಚೇರಿಯಿಂದ ಪ್ರಿಸೈಡಿಂಗ್ ಅಧಿಕಾರಿಗಳು ಮಾತ್ರ ತೆಗೆದುಕೊಳ್ಳಬೇಕೆಂದು ತಿಳಿಸಲಾಗಿದೆ.
    “ಅಪರಾಧ ವಿಷಯಗಳ ಬಗ್ಗೆ, ಸಂಬಂಧಪಟ್ಟ ಪ್ರಾಸಿಕ್ಯೂಟ್ ಅಧಿಕಾರಿ ಕ್ರಿಮಿನಲ್ ನ್ಯಾಯಾಲಯಗಳು ನೀಡಿದ ಆದೇಶಗಳನ್ನು ಸಂಬಂಧಪಟ್ಟ ಎಲ್ಲರಿಗೂ ವರ್ಚುವಲ್ ಮೋಡ್ ಮೂಲಕ ರವಾನಿಸಬೇಕು.
    ಯಾವುದೇ ನ್ಯಾಯಾಂಗ ಅಧಿಕಾರಿಗಳು ಅಥವಾ ಯಾವುದೇ ರೀತಿಯ ಸಹಾಯದ ಅಗತ್ಯವಿರುವವರು, ತೊಂದರೆಯಲ್ಲಿರುವ ಸಿಬ್ಬಂದಿ ಸದಸ್ಯರಿಗೆ ಸ್ಪಂದಿಸಲು ನ್ಯಾಯಾಲಯ ಶ್ರೀನಗರದ 4 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹಕ್ ನವಾಜ್ ಜರ್ಗರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.
    ಉಚಿತ ಕಾನೂನು ಸೇವೆಗಳಿಗೆ ಶ್ರೀನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಅದ್ನಾನ್ ಸಯೀದ್ ಅವರನ್ನು 9419167570 ಸಂಖ್ಯೆ ಮತ್ತು ಇಮೇಲ್ [email protected] ನಲ್ಲಿ ಸಂಪರ್ಕಿಸಬಹುದೆಂದು ಆದೇಶದಲ್ಲಿ ತಿಳಿಸಲಾಗಿದೆ.

    ಭಯೋತ್ಪಾದಕರ ಉತ್ಪಾದನೆಯಲ್ಲಿ ಪಾಕಿಸ್ತಾನ ನೇರ ಕೈವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts