More

    ಅದ್ದೂರಿಯಾಗಿ ಹಬ್ಬ ಆಚರಿಸಿ, ಪಟಾಕಿ ಮಾತ್ರ ಸಿಡಿಸಬೇಡಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟ ವಿರಾಟ್ ಕೊಹ್ಲಿ..!

    ಸಿಡ್ನಿ: ಇಡೀ ವಿಶ್ವವೇ ದೀಪಾವಳಿ ಹಬ್ಬದ ಸಡಗರದಲ್ಲಿ ಮುಳುಗಿದೆ. ನರಕ ಚತುರ್ದಶಿ ದಿನವಾದ ಶುಕ್ರವಾರ ಎಲ್ಲೆಡೆ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಪಟಾಕಿ ಸದ್ದು ಈ ಬಾರಿ ಅಷ್ಟಾಗಿ ಕೇಳಿ ಬರುತ್ತಿಲ್ಲ. ವಾಯು ಮಾಲಿನ್ಯ ತಡೆಗಟ್ಟುವುದು, ಜತೆಗೆ ದೊಡ್ಡ ಶಬ್ದದ ಪಟಾಕಿಗಳನ್ನು ಸಿಡಿಸಬೇಡಿ ಎಂದು ಸರ್ಕಾರವೇ ಜನರಲ್ಲಿ ಜನರಲ್ಲಿ ಮಾಡುತ್ತಿದೆ. ಇದೀಗ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಪಟಾಕಿ ಸಿಡಿಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ತಮ್ಮ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.

    ಈ ದೀಪಾವಳಿ ಎಲ್ಲರಿಗೂ ಶುಭತರಲಿ, ಆ ದೇವರು ಎಲ್ಲರ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ತರಲಿ ಎಂದು ಕೊಹ್ಲಿ ಹಾರೈಸಿದ್ದಾರೆ. ಆದರೆ, ಒಂದು ವಿಷಯ ನೆನಪಿಡಿ ಯಾರು ಪಟಾಕಿ ಸಿಡಿಸಬೇಡಿ, ಸುತ್ತಮುತ್ತಲಿನ ವಾತಾವರಣ ಶುದ್ಧವಿಡಿ. ಸುರಕ್ಷಿತವಾಗಿರಿ, ದೇವರು ಒಳ್ಳೆದು ಮಾಡಲಿ ಎಂದು ಕೊಹ್ಲಿ ಹೇಳಿದ್ದಾರೆ. ದೆಹಲಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧ ಹೇರಿದ್ದು, ಪಂಜಾಬ್ ಹಾಗೂ ಹರಿಯಾಣದಲ್ಲಿ ಕೇವಲ 2 ಗಂಟೆಗಳ ಕಾಲ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ.

    ಐಪಿಎಲ್ ಮುಕ್ತಾಯದ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಸದ್ಯ ಸಿಡ್ನಿಯಲ್ಲಿ ಕ್ವಾರಂಟೈನ್‌ನಲ್ಲಿದೆ. ಶನಿವಾರದಿಂದ ಆಟಗಾರರ ಅಭ್ಯಾಸ ಆರಂಭಿಸಿದ್ದಾರೆ. ಆಸ್ಟ್ರೇಲಿಯಾ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಆಟಗಾರರು ದೀಪಾವಳಿ ಸಡಗರದಿಂದ ದೂರ ಉಳಿದಿದ್ದಾರೆ. ನವೆಂಬರ್ 27 ರಿಂದ ಏಕದಿನ ಸರಣಿ ನಡೆಯಲಿದೆ. ಮೊದಲ ಟೆಸ್ಟ್ ಮುಕ್ತಾಯದ ಬಳಿಕ ಕೊಹ್ಲಿ ತವರಿಗೆ ಪಿತೃತ್ವ ರಜೆ ಮೇಲೆ ವಾಪಸಾಗಲಿದ್ದಾರೆ. ಕೊಹ್ಲಿ-ಅನುಷ್ಕಾ ದಂಪತಿ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts