More

    VIDEO| ಹಾರ್ದಿಕ್​ ಪಾಂಡ್ಯ ಜಂಪಿಂಗ್ ಪುಷ್-ಅಪ್ ಸವಾಲಿಗೆ ಟ್ವಿಸ್ಟ್ ಕೊಟ್ಟ ವಿರಾಟ್​ ಕೊಹ್ಲಿ!

    ನವದೆಹಲಿ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ‘ಜಂಪಿಂಗ್ ಪುಷ್-ಅಪ್’ ಚಾಲೆಂಜ್‌ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲ ಬಾಲಿವುಡ್ ನಟಿಯರೂ ಇದಕ್ಕೆ ಮನಸೋತಿದ್ದರು. ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ‘ಜಂಪಿಂಗ್ ಪುಷ್-ಅಪ್’ ಚಾಲೆಂಜ್‌ಗೆ ಟ್ವಿಸ್ಟ್ ನೀಡಿದ್ದಾರೆ. ಅದೇನೆಂದು ಮುಂದೆ ಓದಿ.

    ಹಾರ್ದಿಕ್ ಪಾಂಡ್ಯರ ಜಂಪಿಂಗ್ ಪುಷ್-ಅಪ್ ಅನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ ಅದನ್ನು ಇನ್ನಷ್ಟು ಕಠಿಣಗೊಳಿಸಿರುವ ವಿರಾಟ್ ಕೊಹ್ಲಿ, ಪುಷ್-ಅಪ್ ಜಂಪಿಂಗ್ ನಡುವೆ ಚಪ್ಪಾಳೆಯನ್ನೂ ಹೊಡೆದಿದ್ದಾರೆ. ಹಾರ್ದಿಕ್ ಪಾಂಡ್ಯರಂತೆ ಜಂಪಿಂಗ್ ಪುಷ್-ಅಪ್ ಮಾಡಿರುವ ಕೊಹ್ಲಿ ಮುಂದೆ ಮತ್ತು ಹಿಂದೆ ಚಲಿಸುವ ನಡುವೆ ಕ್ಲ್ಯಾಪ್ ಹೊಡೆದಿರುವ ವಿಡಿಯೋವನ್ನು ಟ್ವಿಟರ್​, ಇನ್‌ಸ್ಟಾಗ್ರಾಂನಲ್ಲಿ ಗುರುವಾರ ಪ್ರಕಟಿಸಿದ್ದಾರೆ.

    ಇದನ್ನೂ ಓದಿ: ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲೇ ಪತ್ರಿಕೆ ಓದಿದ್ದ ಫೀಲ್ಡರ್! ಕಾರಣವೇನು ಗೊತ್ತೇ?

    ‘ಹೇ ಹಾರ್ದಿಕ್ ಪಾಂಡ್ಯ, ನಿನ್ನ ಫ್ಲೈ ಪುಷ್-ಅಪ್‌ಗಳನ್ನು ಇಷ್ಟಪಟ್ಟೆ. ನಾನು ಇದಕ್ಕೆ ಸಣ್ಣ ಕ್ಲ್ಯಾಪ್ ಅನ್ನು ಸೇರಿಸುತ್ತಿದ್ದೇನೆ’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ. ಕೊಹ್ಲಿ ಮತ್ತು ಪಾಂಡ್ಯ ಭಾರತದ ಅತ್ಯಂತ ಫಿಟ್ ಕ್ರಿಕೆಟಿಗರ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನ ಪಡೆದಿದ್ದಾರೆ. ಲಾಕ್‌ಡೌನ್ ನಡುವೆ ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳಲು ಈಗಾಗಲೆ ಸಾಕಷ್ಟು ಪರಿಶ್ರಮಪಟ್ಟಿದ್ದಾರೆ.

    ಕ್ರೀಡಾ ಪತ್ರಕರ್ತರಿಗೆ ಕ್ರೀಡಾತಾರೆಯರಿಂದ ಸಲಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts