More

    ದ್ರಾವಿಡ್ ತರಬೇತಿಯಲ್ಲಿ ಅವರದೇ ದಾಖಲೆ ಮುರಿಯುವತ್ತ ವಿರಾಟ್ ಕೊಹ್ಲಿ!

    ಸೆಂಚುರಿಯನ್: ಕಳೆದ 2 ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹಿಂದಿನ ಲಯಕ್ಕೆ ಮರಳುವ ಸಿದ್ಧತೆಯಲ್ಲಿದ್ದಾರೆ. ಇದಕ್ಕಾಗಿ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿರಾಟ್ ಕೊಹ್ಲಿ, ಇದೀಗ ಅವರದೇ ದಾಖಲೆಯನ್ನು ಮುರಿಯುವತ್ತ ಕಣ್ಣಿಟ್ಟಿದ್ದಾರೆ.

    ಮಾಜಿ ನಾಯಕ ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾದಲ್ಲಿ ಆಡಿರುವ 22 ಟೆಸ್ಟ್ ಇನಿಂಗ್ಸ್‌ಗಳಲ್ಲಿ 624 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 2 ಅರ್ಧಶತಕಗಳು ಒಳಗೊಂಡಿವೆ. ಕೊಹ್ಲಿ 66 ರನ್ ಗಳಿಸಿದರೆ ದ್ರಾವಿಡ್ ಅವರನ್ನು ಹಿಂದಿಕ್ಕಲಿದ್ದಾರೆ. ಕೊಹ್ಲಿ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಆಡಿರುವ 10 ಇನಿಂಗ್ಸ್‌ಗಳಲ್ಲಿ 558 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ ಕೊಹ್ಲಿ ಸದ್ಯ 4ನೇ ಸ್ಥಾನದಲ್ಲಿದ್ದಾರೆ. ವಿವಿಎಸ್ ಲಕ್ಷ್ಮಣ್ (556) 3ನೇ ಸ್ಥಾನದಲ್ಲಿದ್ದಾರೆ. 15 ಟೆಸ್ಟ್‌ಗಳಲ್ಲಿ 5 ಶತಕಗಳ ಸಹಿತ 1,161 ರನ್ ಸಿಡಿಸಿರುವ ಸಚಿನ್ ತೆಂಡುಲ್ಕರ್ ದಕ್ಷಿಣ ಆಫ್ರಿಕಾದಲ್ಲಿ ಗರಿಷ್ಠ ರನ್ ಬಾರಿಸಿದ ಭಾರತೀಯರೆನಿಸಿದ್ದಾರೆ.

    ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಒಟ್ಟಾರೆ ರನ್ ಗಳಿಕೆಯಲ್ಲೂ ಕೊಹ್ಲಿ, ದ್ರಾವಿಡ್ ಅವರನ್ನು ಹಿಂದಿಕ್ಕುವತ್ತ ಗಮನಹರಿಸಿದ್ದಾರೆ. ಇದಕ್ಕಾಗಿ ಕೊಹ್ಲಿ ಸರಣಿಯಲ್ಲಿ ಕನಿಷ್ಠ 177 ರನ್ ಗಳಿಸಬೇಕಾಗಿದೆ. ದ್ರಾವಿಡ್ ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟು 1,252 ರನ್ ಗಳಿಸಿದ್ದರೆ, ಕೊಹ್ಲಿ ಸದ್ಯ 1,075 ರನ್ ಬಾರಿಸಿದ್ದಾರೆ. 1,741 ರನ್ ಗಳಿಸಿರುವ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದರೆ, ವೀರೇಂದ್ರ ಸೆಹ್ವಾಗ್ (1,306) ನಂತರದಲ್ಲಿದ್ದಾರೆ.

    ಕೊಹ್ಲಿ ಬ್ಯಾಟಿಂಗ್‌ನತ್ತ ಕೋಚ್ ದ್ರಾವಿಡ್ ವಿಶೇಷ ಗಮನ, ನೀಗುತ್ತಾ ಶತಕಗಳ ಬರ?

    ಒಮಿಕ್ರಾನ್ ಭಯ; ಭಾರತ-ದಕ್ಷಿಣ ಆಫ್ರಿಕಾ ಸರಣಿಯ ಎಲ್ಲ ಪಂದ್ಯಗಳಿಗೆ ಪ್ರೇಕ್ಷಕರಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts