More

    ಶಿಕ್ಷಕರ ದಿನದಂದು ಕೋಚ್‌ಗಳಿಗೆ ನಮಿಸಿದ ಕ್ರೀಡಾ ತಾರೆಯರು…!

    ಬೆಂಗಳೂರು: ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ 5 ರಂದು ದೇಶದಾದ್ಯಂತ ‘ಶಿಕ್ಷಕರ ದಿನಾಚರಣೆ’ ಎಂದು ಆಚರಿಸಲಾಗುತ್ತಿದೆ. ಗುರು-ಶಿಷ್ಯರ ಸಂಬಂಧ ನೆನೆಪಿಸಿಕೊಳ್ಳುವುದು ಕೂಡ ಈ ದಿನದ ವಿಶೇಷ. ಅದು ಯಾವುದೇ ಕ್ಷೇತ್ರವೇ ಇರಬಹುದು ಗುರು-ಶಿಷ್ಯರ ಸಂಬಂಧ ಇದ್ದೇ ಇರುತ್ತದೆ. ಹೀಗೆ ಕ್ರೀಡಾ ಕ್ಷೇತ್ರದಲ್ಲೂ ಗುರುವಿಲ್ಲದೆ ಗುರಿ ತಲುಪುವುದು ಕಷ್ಟಸಾಧ್ಯ. ಕ್ರೀಡಾ ಕ್ಷೇತ್ರದಲ್ಲಿ ಸ್ಟಾರ್ ಗಿರಿ ಪಟ್ಟ ಗಳಿಸಿದ್ದರೂ ಗುರುವಿನ ಕಾಣಿಕೆ ಮಾತ್ರ ಮರೆತಿಲ್ಲ ನಮ್ಮ ಕ್ರೀಡಾಪಟುಗಳು. ಕ್ರಿಕೆಟಿಗರಾದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ದಿಗ್ಗಜ ಸಚಿನ್ ತೆಂಡುಲ್ಕರ್, ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮ, ಹಾಕಿ ತಂಡದ ಆಟಗಾರರು ತಮ್ಮ ಗುರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಿಸಿದ್ದಾರೆ.

    ಇದನ್ನೂ ಓದಿ: VIDEO | ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ಗೆ ರೋಚಕ ಗೆಲುವು

    ಕ್ರಿಕೆಟ್ ಜೀವನಕ್ಕೆ ತಿರುವುಕೊಟ್ಟ ನನ್ನ ಕೋಚ್‌ಗಳಿಗೆ, ಮೆಂಟರ್‌ಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಿಮ್ಮ ಪ್ರೋತ್ಸಾಹ ಇಲ್ಲದೆ ನಾನು ಉತ್ತಮ ಸಾಧನೆ ಮಾಡಲು ಆಗುತ್ತಿರಲಿಲ್ಲ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಕೋವಿಡ್-19 ಮಹಾಮಾರಿಯಿಂದಾಗಿ ಶಾಲೆಗಳು ಬಂದ್ ಆಗಿದ್ದರೂ ಆನ್‌ಲೈನ್ ಶಿಕ್ಷಣದ ಮೂಲಕ ಪಾಠ ಮಾಡುತ್ತಿರುವ ಶಿಕ್ಷಕರಿಗೆ ವಂದನೆಗಳು. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ದೊಡ್ಡದು ಎಂದು ಸಚಿನ್ ಬರೆದುಕೊಂಡಿದ್ದಾರೆ. ಶಿಕ್ಷಕರ ಸಾಲಿನಲ್ಲಿ ತಂದೆ, ಅಜ್ರೇಕರ್ ಸರ್ ಹಾಗೂ ನನ್ನ ಸಹೋದರ ಅಜಿತ್ ಕೂಡ ನಿಲ್ಲುತ್ತಾರೆ ಎಂದು ಸಚಿನ್ ಹೇಳಿದ್ದಾರೆ.

    ಇದನ್ನೂ ಓದಿ: ಯುಎಸ್ ಓಪನ್‌ನಲ್ಲಿ ಅಮ್ಮಂದಿರ ಗೆಲುವಿನ ಓಟ

    ಕ್ರಿಕೆಟಿಗರಲ್ಲದೆ, ರಾಷ್ಟ್ರೀಯ ಹಾಕಿ ತಂಡದ ಆಟಗಾರರು ತಮ್ಮ ಕೋಚ್‌ಗಳನ್ನು ಶಾಲಾ ಶಿಕ್ಷಕರನ್ನು ಸ್ಮರಿಸಿದ್ದಾರೆ. ಅಲ್ಲದೆ, ಕ್ರೀಡಾವಲಯದ ಇತರ ಕ್ರೀಡಾಪಟುಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts