More

    ಯುಎಸ್ ಓಪನ್‌ನಲ್ಲಿ ಅಮ್ಮಂದಿರ ಗೆಲುವಿನ ಓಟ

    ನ್ಯೂಯಾರ್ಕ್: ಸ್ಟಾರ್ ಯುವ ಆಟಗಾರ್ತಿಯರು ಕರೊನಾ ಭೀತಿಯಿಂದ ಹಿಂದೆ ಸರಿದಿರುವ ನಡುವೆ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಅಮ್ಮಂದಿರಾಗಿರುವ ಆಟಗಾರ್ತಿಯರು ಮುನ್ನಡೆ ಸಾಧಿಸಿದ್ದಾರೆ. 4ನೇ ದಿನದ ಪಂದ್ಯಗಳಲ್ಲಿ ಅಮ್ಮಂದಿರಾದ ಆತಿಥೇಯ ತಾರೆ ಸೆರೇನಾ ವಿಲಿಯಮ್ಸ್ ಮತ್ತು ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮೂರನೇ ಸುತ್ತಿಗೇರುವಲ್ಲಿ ಸಲರಾಗಿದ್ದಾರೆ. ದಿನದ ಮೊದಲ ಪಂದ್ಯದಲ್ಲಿ, 3 ವರ್ಷಗಳ ತಾಯ್ತನದ ಬಿಡುವಿನ ಬಳಿಕ ಮರಳಿರುವ ಬಲ್ಗೇರಿಯಾದ ಸ್ವೆಟನಾ ಪಿರೊಂಕೋವಾ ಸ್ಪೇನ್ ತಾರೆ ಗಾರ್ಬಿನ್ ಮುಗುರುಜಾಗೆ ಆಘಾತ ನೀಡಿ ಗಮನ ಸೆಳೆದಿದ್ದರು. ಆತಿಥೇಯ ಯುವ ಆಟಗಾರ್ತಿಯರಾದ ಸೋಫಿಯಾ ಕೆನಿನ್, ಅಮಂಡ ಅನಿಸಿಮೋವಾ, ಸ್ಲೋವನ್ ಸ್ಟೀಫನ್ಸ್​ , ಮ್ಯಾಡಿಸನ್ ಕೀಯ್ಸ ಕೂಡ 2ನೇ ಸುತ್ತಿನ ತಡೆ ದಾಟಿದ್ದಾರೆ.

    ದಾಖಲೆಯ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಸೆರೇನಾ ವಿಲಿಯಮ್ಸ್ ಗುರುವಾರ ನಡೆದ 2ನೇ ಸುತ್ತಿನ ಕಾದಾಟದಲ್ಲಿ ರಷ್ಯಾದ ಮಾರ್ಗರಿಟಾ ಗಸ್ಪರ‌್ಯಾನ್ ವಿರುದ್ಧ 6-2, 6-4 ನೇರಸೆಟ್‌ಗಳಿಂದ ಜಯಿಸಿದರು. ಮತ್ತೋರ್ವ ಮಾಜಿ ನಂ. 1 ಆಟಗಾರ್ತಿ ಅಜರೆಂಕಾ ದೇಶಬಾಂಧವೆ ಹಾಗೂ 5ನೇ ಶ್ರೇಯಾಂಕಿತೆ ಅರಿನಾ ಸಬಲೆಂಕಾ ವಿರುದ್ಧ 6-1, 6-3 ನೇರಸೆಟ್‌ಗಳಿಂದ ಗೆಲುವು ಒಲಿಸಿಕೊಂಡರು.

    ಕಳೆದ ವಾರವಷ್ಟೇ ಡಬ್ಲ್ಯುಟಿಎ ಟೂರ್ನಿಯಲ್ಲಿ ಪ್ರಶಸ್ತಿ ಒಲಿಸಿಕೊಂಡಿದ್ದ ಅಜರೆಂಕಾ, ತಾಯ್ತನ ಮತ್ತು ಟೆನಿಸ್ ನಡುವೆ ಸಮತೋಲನ ಕಾಪಾಡಿಕೊಂಡು ಯಶಸ್ಸು ಕಾಣುತ್ತಿರುವ ಬಗ್ಗೆ ಸಂಭ್ರಮ ಹಂಚಿಕೊಂಡಿದ್ದಾರೆ. ‘ತಾಯಿಯಾಗಿದ್ದರೇನಂತೆ ನಾವು ಕೂಡ ಟೆನಿಸ್ ಆಟಗಾರ್ತಿಯರು. ಇತರ ಮಹಿಳೆಯರಂತೆ ನಾವು ಕೂಡ ಕನಸು, ಗುರಿ ಮತ್ತು ಪ್ಯಾಷನ್ ಹೊಂದಿದ್ದೇವೆ. ತಾಯಿಯಾದ ತಕ್ಷಣ ಜೀವನ ನಿಲ್ಲುವುದಿಲ್ಲ’ ಎಂದು 4 ವರ್ಷದ ಪುತ್ರನನ್ನು ಹೊಂದಿರುವ ಅಜರೆಂಕಾ ಹೇಳಿದ್ದಾರೆ.

    ಯುಎಸ್ ಓಪನ್‌ನಲ್ಲಿ ಈ ಬಾರಿ ಒಟ್ಟು 9 ಅಮ್ಮಂದಿರು ಕಣಕ್ಕಿಳಿದಿದ್ದಾರೆ. ಈ ಪೈಕಿ ಮೂವರು 3ನೇ ಸುತ್ತಿಗೇರಿದ್ದರೆ, ಉಳಿದ 6 ತಾಯಂದಿರಾದ ಕಿಮ್ ಕ್ಲೈಸ್ಟರ್ಸ್‌, ವೆರಾ ವೊನರೆವಾ, ತಜನಾ ಮರಿಯಾ, ಕ್ಯಾಟರಿನ್ ಬೊಂಡಾರೆಂಕೊ, ಪ್ಯಾಟ್ರಿಸಿಯಾ ಮರಿಯಾ ಟಿಗ್ ಮತ್ತು ಒಲ್ಗಾ ಗೊವೊರ್ಸೊವಾ ಈಗಾಗಲೆ ಹೊರಬಿದ್ದಿದ್ದಾರೆ.

    ಇದನ್ನೂ ಓದಿ:

    ಕೆನಿನ್, ಅನಿಸಿಮೋವಾ ಮುನ್ನಡೆ

    ಯುಎಸ್ ಓಪನ್‌ನಲ್ಲಿ ಅಮ್ಮಂದಿರ ಗೆಲುವಿನ ಓಟ
    ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಹಾಗೂ 2ನೇ ಶ್ರೇಯಾಂಕಿತೆ ಸೋಫಿಯಾ ಕೆನಿನ್ 6-4, 6-3ರಿಂದ ಕೆನಡದ ಫೆನಾರ್ರ್ಂಡೆಜ್ ವಿರುದ್ಧ ಜಯಿಸಿದರು. 19 ವರ್ಷದ ಅಮಂಡ ಅನಿಸಿಮೋವಾ ದೇಶಬಾಂಧವೆ ಕತ್ರಿಕಾ ಸ್ಕಾಟ್ ವಿರುದ್ಧ 4-6, 6-4, 6-1ರಿಂದ ಹೋರಾಟಯು ಗೆಲುವು ಕಂಡರು. 7ನೇ ಶ್ರೆಯಾಂಕಿತೆ ಮ್ಯಾಡಿಸನ್ ಕೀಯ್ಸ 6-2, 6-1 ನೇರಸೆಟ್‌ಗಳಿಂದ ಸ್ಪೇನ್‌ನ ಬೊಲ್‌ಸೋವಾಗೆ ಸೋಲುಣಿಸಿದರು.

    ಆಂಡಿ ಮರ‌್ರೆ ನಿರ್ಗಮನ

    ಯುಎಸ್ ಓಪನ್‌ನಲ್ಲಿ ಅಮ್ಮಂದಿರ ಗೆಲುವಿನ ಓಟ

    ಗಾಯದಿಂದ ಗುಣಮುಖರಾಗಿ ಮರಳಿ ಕಣಕ್ಕಿಳಿದಿದ್ದ ಬ್ರಿಟನ್ ತಾರೆ ಆಂಡಿ ಮರ‌್ರೆ 2ನೇ ಸುತ್ತಿನ ಪಂದ್ಯದಲ್ಲಿ ಕೆನಡದ 20 ವರ್ಷದ ಆಟಗಾರ ಫೆಲಿಕ್ಸ್ ಆಗೆರ್-ಅಲಿಯಸ್ಸಿಮ್ ಎದುರು 2-6, 3-6, 4-6 ನೇರಸೆಟ್‌ಗಳಿಂದ ಪರಾಭವಗೊಂಡರು. ಮಾಜಿ ನಂ. 1 ಹಾಗೂ ಮಾಜಿ ಚಾಂಪಿಯನ್ ಮರ‌್ರೆ, 2019ರ ಆಸ್ಟ್ರೇಲಿಯನ್ ಓಪನ್ ಬಳಿಕ ಆಡಿದ ಮೊದಲ ಗ್ರಾಂಡ್ ಸ್ಲಾಂ ಇದಾಗಿತ್ತು. ಕೆನಡದ ಮಿಲೋಸ್ ರಾವೊನಿಕ್ ಪುರುಷರ ಸಿಂಗಲ್ಸ್‌ನಲ್ಲಿ ಆಘಾತ ಎದುರಿಸಿದ ಮತ್ತೋರ್ವ ಪ್ರಮುಖ ಆಟಗಾರ.

    ಎರಡನೇ ಸುತ್ತಿನಲ್ಲಿ ನಗಾಲ್‌ಗೆ ನಿರಾಸೆ
    ಕಳೆದ 7 ವರ್ಷಗಳಲ್ಲಿ ಗ್ರಾಂಡ್ ಸ್ಲಾಂ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಗೆಲುವು ದಾಖಲಿಸಿದ ಮೊದಲ ಭಾರತೀಯರೆನಿಸಿದ್ದ ಸುಮಿತ್ ನಗಾಲ್ 2ನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ. 2ನೇ ಶ್ರೇಯಾಂಕಿತ ಆಸ್ಟ್ರಿಯಾದ ತಾರೆ ಡೊಮಿನಿಕ್ ಥೀಮ್ ವಿರುದ್ಧ ನಗಾಲ್ ದಿಟ್ಟ ಹೋರಾಟ ತೋರಿದರೂ, 3-6, 3-6, 2-6 ನೇರಸೆಟ್‌ಗಳಿಂದ ಸೋಲು ಕಂಡರು. ಇದರಿಂದಾಗಿ ಡೊಮಿನಿಕ್ ಥೀಮ್ 27ನೇ ಜನ್ಮದಿನಕ್ಕೆ ಗೆಲುವಿನ ಉಡುಗೊರೆ ಪಡೆದರು.

    ಯುಎಸ್ ಓಪನ್‌ನಲ್ಲಿ ಅಮ್ಮಂದಿರ ಗೆಲುವಿನ ಓಟ

    ಆಸ್ಟ್ರೇಲಿಯನ್ ಓಪನ್ ರನ್ನರ್‌ಅಪ್ ಥೀಮ್, ಪಂದ್ಯದ ಬಳಿಕ ನಗಾಲ್ ಆಟವನ್ನು ಪ್ರಶಂಸಿಸಿ, ಸಮಾಧಾನ ಪಡಿಸಿದರು. ಪಂದ್ಯಕ್ಕೆ ಮುನ್ನ ನಗಾಲ್ ಆಟದ ವಿಡಿಯೋವನ್ನು ನೋಡಿ, ಆಘಾತ ಎದುರಾಗದಂತೆ ಎಚ್ಚರಿಕೆ ವಹಿಸಿದ್ದ ಥೀಮ್, ನಗಾಲ್ ಮುಂಗೈ ಹೊಡೆತಕ್ಕೆ ಹೆಚ್ಚಿನ ಚೆಂಡುಗಳನ್ನು ನೀಡದಂತೆ ಕಾರ್ಯತಂತ್ರವನ್ನೂ ಅನುಸರಿಸಿದರು. ನಗಾಲ್ ಕಳೆದ ವರ್ಷದ ಟೂರ್ನಿಯಲ್ಲಿ ರೋಜರ್ ಫೆಡರರ್ ವಿರುದ್ಧ ಮೊದಲ ಸುತ್ತಿನಲ್ಲಿ ದಿಟ್ಟ ಹೋರಾಟ ತೋರಿ ಗಮನಸೆಳೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts