ದುಬೈ: ಐಪಿಎಲ್ ಟೂರ್ನಿಗಾಗಿ ಈಗಾಗಲೆ ಯುಎಇಗೆ ತೆರಳಿರುವ ಎಲ್ಲ ತಂಡಗಳು ಭರ್ಜರಿ ಅಭ್ಯಾಸದಲ್ಲೂ ತೊಡಗಿಕೊಂಡಿವೆ. ಇದೇ ವೇಳೆ ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಕಳೆದ 5 ತಿಂಗಳಿನಿಂದ ಕ್ರಿಕೆಟ್ ಆಡದಿದ್ದರೂ ಲಯ ಕಳೆದುಕೊಂಡಿಲ್ಲ ಮತ್ತು ಚುರುಕುತನ ಕಡಿಮೆಯಾಗಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.
ವಿರಾಟ್ ಕೊಹ್ಲಿ ಗಾಳಿಯಲ್ಲಿ ಹಾರುತ್ತಾ, ಬಲಗೈಯಲ್ಲಿ ಅದ್ಭುತವಾಗಿ ಚೆಂಡನ್ನು ಹಿಡಿದಿರುವ ವಿಡಿಯೋವನ್ನು ಆರ್‌ಸಿಬಿ ತಂಡದ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೂ ಪಾತ್ರವಾಗಿದೆ.
ಇದನ್ನೂ ಓದಿ: VIDEO: ಆರ್‌ಸಿಬಿ ತಂಡವನ್ನು ಎಂದಿಗೂ ಬಿಡಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ಯಾಕೆ..?
31 ವರ್ಷದ ವಿರಾಟ್ ಕೊಹ್ಲಿ ವರ್ಷಾರಂಭದ ನ್ಯೂಜಿಲೆಂಡ್ ಪ್ರವಾಸದ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆದಿದ್ದ ವಿರಾಟ್ ಕೊಹ್ಲಿ ಮರಳಿ ಮೈದಾನಕ್ಕಿಳಿದಾಗ ಹಿಂದಿನ ಲಯದಲ್ಲೇ ಮುಂದುವರಿಯುವ ಹಂಬಲದಲ್ಲಿದ್ದಾರೆ.
ಇದಕ್ಕೆ ಮುನ್ನ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅಭ್ಯಾಸದ ವಿಡಿಯೋವನ್ನು ಕೂಡ ಟ್ವಿಟರ್‌ನಲ್ಲಿ ಪ್ರಕಟಿಸಿತ್ತು. ಅದರಲ್ಲೂ ವಿರಾಟ್ ಕೊಹ್ಲಿ, 5 ತಿಂಗಳ ಬಳಿಕ ಬ್ಯಾಟ್ ಹಿಡಿದರೂ ಹಿಂದಿನ ಬ್ಯಾಟಿಂಗ್ ಲಯದಲ್ಲೇ ಆಡಿರುವುದು ಗಮನ ಸೆಳೆದಿದೆ. ಆರ್‌ಸಿಬಿ ತಂಡಕ್ಕೆ ಕಳೆದ 12 ವರ್ಷಗಳಿಂದ ಕಾಡುತ್ತಿರುವ ಪ್ರಶಸ್ತಿಯ ಕೊರತೆಯನ್ನೂ ನೀಗಿಸುವ ಪಣತೊಟ್ಟಿದ್ದಾರೆ.
We’re running out of things to say at this point, Skip! 🤯#PlayBold #IPL2020 #WeAreChallengers pic.twitter.com/4gRuKzsKCQ
— Royal Challengers Bangalore (@RCBTweets) September 3, 2020
5️⃣ months since Virat Kohli padded up and batted in the nets, but it looked like he wasn’t away from the game even for five minutes. Enjoy the symphony! #PlayBold #IPL2020 #WeAreChallengers pic.twitter.com/qQlmhfyRCU
— Royal Challengers Bangalore (@RCBTweets) September 4, 2020