More

    VIDEO: ಆರ್‌ಸಿಬಿ ತಂಡವನ್ನು ಎಂದಿಗೂ ಬಿಡಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ಯಾಕೆ..?

    ಬೆಂಗಳೂರು: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಂಡ ದಿನದಿಂದಲೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದಾರೆ. ಅಂದಿನ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಸೇರಿದ ಕೊಹ್ಲಿ, ಇಂದು ಅದೇ ತಂಡಕ್ಕೆ ನಾಯಕನಾಗಿದ್ದಾರೆ. ಕ್ರಿಕೆಟ್ ಆಡುವವರೆಗೂ ಆರ್‌ಸಿಬಿ ತ್ಯಜಿಸುವುದಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಕಳೆದ 12 ವರ್ಷಗಳಿಂದ ತಂಡದಲ್ಲಿರುವೆ, ಇಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಯಾವುದೇ ಕಾರಣಕ್ಕೂ ಆರ್‌ಸಿಬಿ ಬಿಡುವ ಮನಸು ಮಾಡುವುದಿಲ್ಲ ಎಂದು ಕೊಹ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಬಯೋ ಬಬಲ್ ನಿರ್ಮಾಣಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮಾಡುತ್ತಿರುವ ಖರ್ಚು ಎಷ್ಟು.?

    2008ರ 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕನಾಗಿದ್ದ ಕೊಹ್ಲಿ, ಅದೇ ವರ್ಷ ಆರಂಭಗೊಂಡ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪಾಲಾದರು. 2013 ರಿಂದ ತಂಡದ ನಾಯಕನಾಗಿದ್ದಾರೆ. ಕೊಹ್ಲಿ ಸಾರಥ್ಯದಲ್ಲಿ ಆರ್‌ಸಿಬಿ 2015ರಲ್ಲಿ ಪ್ಲೇ-ಆಫ್ ನಲ್ಲಿ ಆಡಿದರೆ, 2016ರಲ್ಲಿ ಫೈನಲ್ ಪ್ರವೇಶಿಸಿತ್ತು. ‘ಕಳೆದ 12 ವರ್ಷಗಳಿಂದ ತಂಡದಲ್ಲಿರುವೆ, ಇದೊಂದು ಅತ್ಯದ್ಭುತ ಜರ್ನಿ. ಮೂರು ಬಾರಿ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದೇವೆ. ತಂಡಕ್ಕೆ ನಮ್ಮಿಂದ ಉತ್ತಮ ಕೊಡುಗೆ ನೀಡಬೇಕು ಎಂಬುದೇ ನಮ್ಮೆಲ್ಲರ ಗುರಿ. ತಂಡ ತೊರೆಯಬೇಕು ಎಂದು ನನಗೆ ಯಾವಾತ್ತೂ ಅನಿಸಿಲ್ಲ, ಅನಿಸೋದು ಇಲ್ಲ ಎಂದು 31 ವರ್ಷದ ಕೊಹ್ಲಿ ಹೇಳಿಕೊಂಡಿದ್ದಾರೆ. ಆರ್‌ಸಿಬಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೊಹ್ಲಿ ಮಾತನಾಡಿರುವ ವಿಡಿಯೋ ಪ್ರಟಿಸಲಾಗಿದೆ.

    ಇದನ್ನೂ ಓದಿ: ಪಬ್‌ಜಿ ಗೇಮ್​ ಬ್ಯಾನ್ ಆಗಿದ್ದಕ್ಕೆ ಟ್ರೋಲ್‌ಗೆ ಒಳಗಾದ ಧೋನಿ!

    ಐಪಿಎಲ್‌ನಲ್ಲಿ ಇದುವರೆಗೂ ಅತಿಹೆಚ್ಚು ರನ್ ಪೇರಿಸಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ ಕೊಹ್ಲಿ, 5 ಶತಕ ಒಳಗೊಂಡಂತೆ 5412 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. 2019ರಲ್ಲಿ ಅತಿಹೆಚ್ಚು ರನ್‌ಗಳಿಸಿದ್ದರೂ ಆರ್‌ಸಿಬಿ ಮಾತ್ರ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ಪಡೆದಿತ್ತು. ಕೋವಿಡ್-19 ರಿಂದಾಗಿ ಈ ಬಾರಿ ಯುಎಇಗೆ ಐಪಿಎಲ್ ಸ್ಥಳಾಂತರಗೊಂಡಿದ್ದು, ಸೆ.19 ರಿಂದ ಆರಂಭಗೊಳ್ಳಲಿರುವ ಟೂರ್ನಿಗೆ ಬಿಸಿಸಿಐ ಇನ್ನಷ್ಟೇ ವೇಳಾಪಟ್ಟಿ ಪ್ರಕಟಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts