More

    VIDEO| ಜಿಮ್‌ನಲ್ಲಿ ವಿರಾಟ್ ಕೊಹ್ಲಿ ನೆಚ್ಚಿನ ವ್ಯಾಯಾಮ ಯಾವುದು ಗೊತ್ತೇ?

    ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್, ಶತಕ ಸಿಡಿಸುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರೀಗ ಕರೊನಾ ಹಾವಳಿಯಿಂದಾಗಿ ಮನೆಯಲ್ಲೇ ಲಾಕ್ ಆಗಿದ್ದಾರೆ. ಈ ನಡುವೆ ಅವರಿಗೆ ಫಿಟ್ನೆಸ್ ಕಾಯ್ದುಕೊಳ್ಳಲು ಇರುವ ಏಕೈಕ ಮಾರ್ಗ ವ್ಯಾಯಾಮ. ವಿಶ್ವದ ಅತ್ಯಂತ ಫಿಟ್ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಿಮ್‌ನಲ್ಲಿ ತಮ್ಮ ನೆಚ್ಚಿನ ಮತ್ತು ತಾವು ಪ್ರತಿದಿನ ಮಾಡಲು ಬಯಸುವ ವ್ಯಾಯಾಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಪಂಜಾಬಿ ಹಾಡಿನ ಹಿನ್ನೆಲೆಯಲ್ಲಿ ಪವರ್ ಸ್ನಾೃಚ್ ವೇಟ್‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಕೊಹ್ಲಿ, ‘ನನಗೆ ಪ್ರತಿದಿನ ಒಂದೇ ವ್ಯಾಯಾಮ ಮಾಡಬೇಕು ಎಂಬ ಆಯ್ಕೆಯನ್ನು ನೀಡಿದರೆ ಅದು ಇದಾಗಿರುತ್ತದೆ. ಪವರ್ ಸ್ನಾೃಚ್ ಅನ್ನು ಇಷ್ಟ ಪಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: VIDEO| ಹಾರ್ದಿಕ್​ ಪಾಂಡ್ಯ ಜಂಪಿಂಗ್ ಪುಷ್-ಅಪ್ ಸವಾಲಿಗೆ ಟ್ವಿಸ್ಟ್ ಕೊಟ್ಟ ವಿರಾಟ್​ ಕೊಹ್ಲಿ!

    ಕಾಲೆಳೆದ ಕೆವಿನ್ ಪೀಟರ್ಸೆನ್, ವಾರ್ನರ್

    ಕೊಹ್ಲಿ ಪವರ್ ಸ್ನಾೃಚ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಮಾಜಿ ಬ್ಯಾಟ್ಸ್‌ಮನ್ ಹಾಗೂ ಆರ್‌ಸಿಬಿ ತಂಡದಲ್ಲಿ ಸಹ-ಆಟಗಾರರಾಗಿದ್ದ ಕೆವಿನ್ ಪೀಟರ್ಸೆನ್, ‘ಬೈಕ್ ಒಂದನ್ನು ಎತ್ತಿ’ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಯಾಗಿ 31 ವರ್ಷದ ಕೊಹ್ಲಿ, ನಿವೃತ್ತಿಯ ನಂತರ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಂದಡೆ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ‘ಸುಲಭವಾಗಿ ಎತ್ತಬಹುದಾದ ವೇಟ್ ಇರುವಂತೆ ಕಾಣುತ್ತಿದೆ’ ಎಂದು ನಗುವಿನ ಇಮೋಜಿ ಪ್ರಕಟಿಸಿದ್ದಾರೆ. ಕೊಹ್ಲಿ ಇದಕ್ಕೆ ಮುನ್ನ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಜಂಪಿಂಗ್ ಪುಷ್-ಅಪ್ ವ್ಯಾಯಾಮಕ್ಕೆ ಚಪ್ಪಾಳೆಯನ್ನು ಸೇರಿಸಿ ಹೊಸ ಟ್ವಿಸ್ಟ್ ನೀಡುವ ಮೂಲಕ ಗಮನ ಸೆಳೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts