More

    ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ದಂಪತಿಗಳಲ್ಲಿ ಕೊಹ್ಲಿ-ಅನುಷ್ಕಾ ನಂ. 1

    ನವದೆಹಲಿ: ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿ ದಂಪತಿಗಳಲ್ಲಿ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮ ಜೋಡಿ ನಂ. 1 ಸ್ಥಾನ ಪಡೆದಿದೆ. ಟಿಎಎಂ ಆಡ್​ಎಕ್ಸ್​ ವರದಿಯ ಪ್ರಕಾರ, 2020ರಲ್ಲಿ ಕರೊನಾ ಹಾವಳಿಯ ನಡುವೆ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ವಿರೂಷ್ಕಾ ಖ್ಯಾತಿಯ ಕೊಹ್ಲಿ-ಅನುಷ್ಕಾ ದಂಪತಿಯೇ ಅತಿಹೆಚ್ಚು ಸಮಯ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದೆ. ಬಾಲಿವುಡ್​ನ ಹಲವು ಸ್ಟಾರ್​ ದಂಪತಿಗಳನ್ನು ಅವರು ಹಿಂದಿಕ್ಕಿದ್ದಾರೆ.

    ಟಿಎಎಂ ಆಡ್​ಎಕ್ಸ್​ನ ತ್ರೈಮಾಸಿಕ ವರದಿಯ ಪ್ರಕಾರ, ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಒಟ್ಟಾರೆ 16 ಬ್ರಾಂಡ್​ಗಳ ಪ್ರಚಾರಕ್ಕಾಗಿ ಶೇ. 26ರಷ್ಟು ಸಮಯ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದೆ. ಬಾಲಿವುಡ್​ ನಟ-ನಟಿಯರಾದ ಅಕ್ಷಯ್​ ಕುಮಾರ್​ ಮತ್ತು ಟ್ವಿಂಕಲ್​ ಖನ್ನಾ ದಂಪತಿ 22 ಬ್ರಾಂಡ್​ಗಳ ಪ್ರಚಾರ ಮಾಡುತ್ತಿದ್ದರೂ, 2ನೇ ಸ್ಥಾನದಲ್ಲಿದೆ. ಇವರು ಶೇ. 19ರಷ್ಟು ಪಾಲು ಹೊಂದಿದ್ದಾರೆ. 11 ಬ್ರಾಂಡ್​ಗಳ ಪ್ರಚಾರ ಮಾಡುವ ಕರೀನಾ ಕಪೂರ್​ ಮತ್ತು ಸೈಫ್​ ಅಲಿ ಖಾನ್​ (ಶೇ. 11)ದಂಪತಿ 3ನೇ ಸ್ಥಾನದಲ್ಲಿದೆ. 18 ಬ್ರಾಂಡ್​ಗಳ ಪ್ರಚಾರ ಮಾಡುವ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ (ಶೇ. 12)ದಂಪತಿ 4ನೇ ಸ್ಥಾನದಲ್ಲಿದೆ. ಅಮಿತಾಭ್​ ಬಚ್ಚನ್​-ಜಯ ಬಚ್ಚನ್​ (ಶೇ. 9), ಅಮೀರ್​ ಅಲಿ-ಸಂಜೀದ ಶೇಕ್​ (ಶೇ. 3), ರಿತೇಶ್​ ದೇಶ್​ಮುಖ್​-ಜೆನಿಲಿಯಾ ಡಿಸೋಜ (ಶೇ. 3), ನೇಹಾ ದೂಪಿಯಾ-ಅಂಗದ್​ ಬೇಡಿ (ಶೇ. 2), ಧರ್ಮೇಂದ್ರ-ಹೇಮಾ ಮಾಲಿನಿ (ಶೇ. 2) ಮತ್ತು ಅಜಯ್​ ದೇವಗನ್​-ಕಾಜೋಲ್​ (ಶೇ. 1) ಅನಂತರದ ಸ್ಥಾನದಲ್ಲಿದೆ.

    ಇದನ್ನೂ ಓದಿ: ಪಾಕಿಸ್ತಾನ​ ಪರ ಆಡಲು ಬಯಸಿದ್ದ ಇಮ್ರಾನ್​ ತಾಹಿರ್​ ಪತ್ನಿ ಮಾತು ಕೇಳಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದರು!

    ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ದಂಪತಿಗಳಲ್ಲಿ ಕೊಹ್ಲಿ-ಅನುಷ್ಕಾ ನಂ. 1

    ಈ ವರದಿಯ ಪ್ರಕಾರ 2020ರ ಏಪ್ರಿಲ್​ನಿಂದ ಜೂನ್​ವರೆಗೆ ಕರೊನಾ ಹಾವಳಿಯಿಂದಾಗಿ ಟಿವಿ ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವುದು ಜನವರಿ-ಮಾರ್ಚ್​ಗಿಂತ ಶೇ. 39ರಷ್ಟು ಕಡಿಮೆಯಾಗಿದೆ. ಅಲ್ಲದೆ ಏಪ್ರಿಲ್​ನಿಂದ ಜೂನ್​ವರೆಗೆ ನಾನ್​-ಸೆಲೆಬ್ರಿಟಿ ಜಾಹೀರಾತುಗಳೇ ಹೆಚ್ಚಾಗಿ ಪ್ರಸಾರವಾಗಿವೆ ಎಂದು ವರದಿ ತಿಳಿಸಿದೆ. 2020ರ ಜನವರಿಯಿಂದ ಮಾರ್ಚ್​ವರೆಗೆ ಜಾಹೀರಾತುಗಳಲ್ಲಿ ಒಟ್ಟಾರೆ 200 ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದರೆ, ಏಪ್ರಿಲ್​ನಿಂದ ಜೂನ್​ವರೆಗೆ ಇದು 180ಕ್ಕೆ ಕುಸಿತ ಕಂಡಿದೆ.

    ಮೋಟಾರ್​ಸ್ಪೋರ್ಟ್ಸ್​ಗೆ ಮರಳಲು ಸಜ್ಜಾದ ಆಸೀಸ್​ ನೀಲಿಚಿತ್ರ ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts