More

    Viral Video: “ಕರಿ ಮಣಿ ಮಾಲೀಕ ನೀನಲ್ಲ…” ; ಈ ಮುದ್ದು ಬಾಲಕಿಯ ಕ್ಯೂಟ್ ರೀಲ್ಸ್​ಗೆ ನೆಟ್ಟಿಗರು ಫಿದಾ

    ಬೆಂಗಳೂರು: ಸದ್ಯ ನೀವು ಸೋಶಿಯಲ್ ಮೀಡಿಯಾ ಸರ್ಚ್ ಮಾಡಿದರೆ ಮೊದಲು ಕೇಳ ಸಿಗುವ ಸಾಂಗ್ “ಕರಿ ಮಣಿ ಮಾಲೀಕ ನೀನಲ್ಲ…”. ಉಪೇಂದ್ರ ಸಿನಿಮಾದ ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಹವಾ ಕ್ರಿಯೇಟ್ ಮಾಡಿದೆ. ಈ ಹಾಡಿಗೆ ಸಾಮಾನ್ಯ ಜನರು ಮಾತ್ರವಲ್ಲ, ಸೆಲೆಬ್ರಿಟಿಗಳೂ ಸಹ ಈಗಾಗಲೇ ಸಖತ್​​ ಆಗಿಯೇ ಸ್ಟೆಪ್ಸ್ ಹಾಕಿದ್ದಾರೆ.

    ಜನರು ಈ ಹಾಡಿಗೆ ಎಷ್ಟರಮಟ್ಟಿಗೆ ಅಡಿಕ್ಟ್ ಆಗಿದ್ದಾರೆ ಎಂದರೆ ಎಲ್ಲೆಂದರಲ್ಲಿ ದೊಡ್ಡವರು, ಚಿಕ್ಕವರು ಎನ್ನದೆ ರೀಲ್ಸ್​​ ಮಾಡುತ್ತಿದ್ದಾರೆ. ನಟ-ನಟಿಯರು ಕೂಡ ಹೆಜ್ಜೆ ಹಾಕಿರುವುದನ್ನು ಈಗಾಗಲೇ ನೀವು ನೋಡಿರುತ್ತೀರಿ. ಅಂದಹಾಗೆ ಕೆಲವು ದಿನಗಳಿಂದ ಮುದ್ದು ಬಾಲಕಿಯೊಬ್ಬಳು ಮಾಡುವ ಕೆಲವು ರೀಲ್ಸ್​​ಗಳು ಇನ್ಸ್ಟಾದಲ್ಲಿ ಸಖತ್ ಸದ್ದು ಮಾಡುತ್ತಿವೆ.

    ಹೌದು, ಈ ಬಾಲಕಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಕೂಡ ಇದ್ದಾರೆ. ಬಾಲಕಿಯ ಹೆಸರು ಶಮಿಕಾ ಗೌಡ, ಇತ್ತೀಚೆಗೆ ಬಾಲಕಿ “ಕರಿ ಮಣಿ ಮಾಲೀಕ ನೀನಲ್ಲ…”ಗೆ ರೀಲ್ಸ್ ಮಾಡಿದ್ದು, ಇದು ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲ, ಸಾಕಷ್ಟು ಲೆಕ್ಸ್, ಕಾಮೆಂಟ್ಸ್ ಪಡೆದುಕೊಂಡಿದೆ.

    ಸದ್ಯ ಈ ಸುದ್ದಿ ಬರೆಯುವವರೆಗೂ ರೀಲ್ಸ್​​​​​ 13.6 ಮಿಲಿಯನ್ ವೀಕ್ಷಣೆ ಹಾಗೂ 778,127 ಲೈಕ್ಸ್​​​​ ಪಡೆದುಕೊಂಡಿದೆ. ವೀಕ್ಷರು ರೀಲ್ಸ್ ಸಾಕಷ್ಟು ಇಷ್ಟಪಟ್ಟಿದ್ದು, “ನೆಟ್ಟಿಗರು ನಾಯಕಿಯಾಗುವ ಎಲ್ಲಾ ಲಕ್ಷಣಗಳಿವೆ, ಆಲ್ ದಿ ಬೆಸ್ಟ್” ಎಂದೆಲ್ಲಾ ವಿಶ್ ಮಾಡಿದ್ದಾರೆ.

    ಶಮಿಕಾ ಅವರ “ಕರಿ ಮಣಿ ಮಾಲೀಕ ನೀನಲ್ಲ ” ರೀಲ್ಸ್ ಮಾತ್ರವಲ್ಲದೆ, ಇನ್ನು ಅನೇಕ ರೀಲ್ಸ್​​​ಗಳು ವೈರಲ್ ಆಗಿದ್ದು, ಬಾಲಕಿಯ ಮುದ್ದು ಡ್ಯಾನ್ಸ್​​ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts