More

    ವೈರಲ್ ವಿಡಿಯೋ: ಮುದ್ದಾದ ಆನೆಮರಿಯ ಚಿನ್ನಾಟವನ್ನು ನೋಡಿ

    ಬೆಂಗಳೂರು: ಮುದ್ದಾದ ಪ್ರಾಣಿಗಳ ಚಿನ್ನಾಟ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಆನೆ ಮರಿಗಳೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಆನೆ ಮರಿಗಳು ಯಾವಾಗಲು ತಾಯಿ ಆನೆ ಜೊತೆ ಇರುತ್ತಾ ತುಂಟಾಟ ಮಾಡುತ್ತಾ ಕಾಲ ಕಳೆಯುತ್ತವೆ.

    ಪ್ರಸ್ತುತ ಈ ಕರೊನಾ ಸಂದರ್ಭದಲ್ಲಿ ಆನೆಮರಿಯೊಂದು ಚಿನ್ನಾಟವಾಡಿರುವುದು ನಾಗರಿಕ ಸಮಾಜಕ್ಕೆ ಪಾಠ ಹೇಳುವಂತಿದೆ. ಕಾಡಿನಲ್ಲಿ ಆನೆ ಮರಿಯೊಂದು ಏಕಾಂಗಿಯಾಗಿ ತುಂಟಾಟ ಆಡುತ್ತಾ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ.

    ಐಎಫ್​ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟ್ಟರ್​​ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ಆನೆ ಮರಿಯ ಉದಾಹರಣೆಯೊಂದಿಗೆ ಒಬ್ಬರೇ ಸಂತೋಷದಿಂದ ಇದ್ದು ಸಾಮಾಜಿಕ ಅಂತರ ಕಾಪಾಡಿಕೊಂಡು ಸದ್ಯ ಕಾಲ ಕಳೆಯಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಮುದ್ದಾದ ಆನೆ ಮರಿ ಹುಲ್ಲಿನ ಕಟ್ಟಿನೊಂದಿಗೆ ಚಿನ್ನಾಟ ಆಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. (ವೆಬ್​ ಡೆಸ್ಕ್)

    ಕರೊನಾ ಎಫೆಕ್ಟ್: ರೈಲು ಪ್ರಯಾಣಿಕರಿಗೂ ಶಾಕ್​! ಈ ಎಲ್ಲ ರೈಲು ಸಂಚಾರ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts