More

    ಈ ಸೋಪು ಕರಗೋದೇ ಇಲ್ಲ ಯಾಕೆ? ಎನ್ನುತ್ತ ಬೇಸ್ತು ಬಿದ್ದ ಮಹಿಳೆ

    ಬೇಸ್ತು ಬೀಳುವುದಕ್ಕೆ ಹಲವು ಕಾರಣಗಳು. ಏನನ್ನೋ ನೋಡಿ ಇನ್ನೇನೋ ಅಂದುಕೊಂಡು ಬೇಸ್ತು ಬೀಳುವವರ ಸಂಖ್ಯೆಯೂ ಕಡಿಮೆ ಇಲ್ಲ ಬಿಡಿ.. ಈ ಹಿಂದೆ ಬೆಕ್ಕಿನ ಮರಿ ಅಂತ ಮನೆಗೆ ತಂದು ಸಾಕಿ ಬೇಸ್ತು ಬಿದ್ದ ಮಹಿಳೆಯ ಸುದ್ದಿಯನ್ನೂ ಪ್ರಕಟಿಸಿದ್ದೆವು ಇಲ್ಲಿ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅನೇಕ ಪ್ರಸಂಗಗಳನ್ನು ಅನೇಕರು ಅಪ್ಡೇಟ್ ಮಾಡುತ್ತಿರುತ್ತಾರೆ. ಅಂಥದ್ದೇ ಒಂದು ಸುದ್ದಿ ಇದು..

    ಕೆನಡಾದ ವ್ಯಾಂಕೋವರ್ ಎಂಬ ನಗರ. ಮಿಲ್ಲಿ ಎಂಬ ಮಹಿಳೆ ಅಲ್ಲಿನ ನಿವಾಸಿ. ಅವರು ರೆಡಿಟ್ ಬಳಕೆದಾರರೂ ಹೌದು. ಅವರೊಂದು ಪೇಚಿನ ಪ್ರಸಂಗವನ್ನು ವಿವರಿಸಿರುವುದು ಹೀಗೆ-
    ಎಲ್ಲರೂ ಕರೊನಾ ವೈರಸ್ Covid19 ಸೋಂಕಿನ ಕಾರಣಕ್ಕೆ ಕೈ ತೊಳೆಯುವ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಹ್ಯಾಂಡ್ ವಾಷ್​, ಸ್ಯಾನಿಟೈಸರ್, ಸೋಪು ಇತ್ಯಾದಿ ವಿಚಾರಗಳು ಸಾಮಾಜಿಕ ತಾಣಗಳಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಇಂತಹ ಸನ್ನಿವೇಶದಲ್ಲಿ ಸ್ವಲ್ಪ ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡರೆ ಒಳಿತೆನಿಸುತ್ತದೆ. ನಾನು ಪೇಚಿಗೆ ಸಿಲುಕಿದ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
    ಅದೊಂದು ದಿನ ಹಳದಿ ಬಣ್ಣದ ಸೋಪಿನ ತುಂಡೊಂದು ಸಿಕ್ಕಿತು ನನಗೆ. ಹೇಗೂ ಸೋಪಿನ ತುಂಡು ಸಿಕ್ಕಿತ್ತಲ್ಲ ಎಂದು ಕಿಚನ್ ಬೇಸಿನ್ ಬಳಿ ಇರಿಸಿದ್ದೆ. ಮೊದಲ ದಿನ ಅದರಲ್ಲೇ ಕೈ ತೊಳೆದೆ. ಸೋಪಿನ ನೊರೆಯೇನೂ ಕೈ ಮೇಲೆ ಕಾಣಲಿಲ್ಲ. ಕೆಲವು ದಿನಗಳ ಕಾಲ ಅದರಲ್ಲೇ ಕೈ ತೊಳೆದೆ. ಆದರೆ, ಅದು ಕರಗಲಿಲ್ಲ. ನೊರೆಯೂ ಬರುತ್ತಿರಲಿಲ್ಲ.
    ಹಳದಿ ಬಣ್ಣ, ಸಣ್ಣ ಸೋಪಿನ ತುಂಡಿನ ಮಾದರಿಯಲ್ಲೇ ಇದ್ದ ಅದನ್ನು ನಾನು ಸೋಪು ಎಂದೇ ತೀರ್ಮಾನಿಸಿದ್ದೆ. ಆದರೆ ನೊರೆ ಬಾರದ ಹಿನ್ನೆಲೆಯಲ್ಲಿ ಡೇಟ್ ಬಾರ್ ಆಗಿತ್ತೇನೋ ಎಂಬ ಸಂದೇಹವೂ ಕಾಡಿತ್ತು. ಯಾವುದಕ್ಕೂ ಇರಲಿ ಎಂದು ಮತ್ತೊಮ್ಮೆ ಪರಿಶೀಲಿಸಿದೆ. ನನ್ನ ಮೊದಲ ಊಹೆ ತಪ್ಪಾಗಿತ್ತು. ಆ ಹಳದಿ ಬಣ್ಣದ ತುಂಡು, ಚೀಸ್ ಆಗಿತ್ತು. ಡೇಟ್ ಬಾರ್ ಆದ ಕಾರಣ ಗಟ್ಟಿಯಾಗಿ ಸೋಪಿನ ತುಂಡಿನಂತೆ ಆಗಿತ್ತು. ಅದನ್ನು ಸೋಪು ಎಂದು ತಿಳಿದು ದಿನಗಟ್ಟಲೆ ಕೈ ತೊಳೆದುದನ್ನು ನೆನಪಿಸಿಕೊಂಡು ಪೆಚ್ಚಾದೆ ನಾನು!

    ಅವರ ಈ ಪೋಸ್ಟ್​ಗೆ ಅನೇಕರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಶಾಕ್ ವ್ಯಕ್ತಪಡಿಸಿದರೆ, ಇನ್ನು ಕೆಲವರೂ ಸಹಜ ಎಂಬಂತೆ ಸ್ವೀಕರಿಸಿದ್ದಾರೆ. 7,600 ರಷ್ಟು ಮೆಚ್ಚುಗೆ ವ್ಯಕ್ತವಾದರೆ, 220ರಷ್ಟು ಪ್ರತಿಕ್ರಿಯೆಗಳು ಪೋಸ್ಟ್​ಗೆ ಲಭ್ಯವಾಗಿದೆ. (ಏಜೆನ್ಸೀಸ್​)

    ಬೀದಿಬದಿಯಲ್ಲಿ ಇದ್ದ ಪ್ರಾಣಿಯನ್ನು ಬೆಕ್ಕಿನಮರಿಯೆಂದು ಭಾವಿಸಿ ಮನೆಗೆ ತಂದು, ಬಳಿಕ ವೈದ್ಯರ ಮಾತು ಕೇಳಿ ತಬ್ಬಿಬ್ಬಾದ ಮಹಿಳೆ…

    Just realized my soap wasn’t working because it’s literally a block of cheese from funny

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts