More

  ಸಂಗೀತ ಕಲಾವಿದನಿಗೆ ಕಚ್ಚಿದ ರಸ್ಸೆಲ್ಸ್ ವೈಪರ್…. ಈ ಹಾವಿನಿಂದ ಎಚ್ಚರವಾಗಿರಿ !

  ಬೆಂಗಳೂರು: ಬೆಂಗಳೂರಿನ ನಿವಾಸಿ ಗಾಯಕ, ಗಿಟಾರಿಸ್ಟ್ ಮತ್ತು ಸ್ಟಾಂಡ್ಅಪ್ ಕಾಮೆಡಿಯನ್ ಆದ ಹರ್ಬರ್ಟ್ ಪೌಲ್ ಅವರಿಗೆ ಇತ್ತೀಚೆಗೆ ರಸ್ತೆಯಲ್ಲಿ ಹಾವು ಕಚ್ಚಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಹಾವುಗಳ ಹ್ಯಾಚಿಂಗ್ ಸೀಸನ್ ಆಗಿರುವುದರಿಂದ ನಾಗರೀಕರು ಎಚ್ಚರಿಕೆಯಿಂದ ಇರಬೇಕಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

  ಉತ್ತರ ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿರುವ ಬಿಗ್ ಬ್ರೂಸ್ಕಿ ಪಬ್​ನಲ್ಲಿ ಲೀಡ್ ಗಿಟಾರಿಸ್ಟ್ ಆಗಿರುವ ಪೌಲ್ ಮಂಗಳವಾರ ರಾತ್ರಿ ಮನೆಗೆ ಹಿಂತಿರುಗುತ್ತಿದ್ದಾಗ ಹಾವು ಕಚ್ಚಿದೆ. ತಕ್ಷಣವೇ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಪೌಲ್​ಗೆ ಕಚ್ಚಿರುವ ಹಾವು ಭಾರತದ ನಾಲ್ಕು ಪ್ರಮುಖ ಹಾವು ಪ್ರಬೇಧಗಳಲ್ಲಿ ಒಂದಾದ ‘ರಸ್ಸೆಲ್ಸ್ ವೈಪರ್’ ಎಂದು ಗುರುತಿಸಲಾಗಿದೆ.

  ಇದನ್ನೂ ಓದಿ: VIDEO| ನಿತ್ಯ ಪೂಜೆ ವೇಳೆಗೆ ಬರುತ್ತೆ ಈ ಹಾವು! ಗಣಪತಿಗೆ ಪ್ರದಕ್ಷಿಣೆ ಹಾಕಿ ವಾಪಸ್​ ಹೋಗುತ್ತೆ

  ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಬಿಬಿಎಂಪಿ ವೈಲ್ಡ್​ಲೈಫ್​ ವಾರ್ಡನ್ ಪ್ರಸನ್ನಕುಮಾರ್ ಅವರು, ಇದೀಗ ಹಾವುಗಳ ಹ್ಯಾಚಿಂಗ್ ಸೀಸನ್ ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ. ರಸ್ಸೆಲ್ಸ್ ವೈಪರ್ ಅನ್ನು ಗುರುತಿಸುವುದು ಕಷ್ಟ. ಕೆಲವು ಲಕ್ಷಣಗಳೆಂದರೆ ಜೋರಾಗಿ ಬುಸುಗುಟ್ಟುತ್ತದೆ ಮತ್ತು ಹೆಚ್ಚಾಗಿ ಕತ್ತಲಲ್ಲಿ ಹರಿದಾಡುತ್ತದೆ. ಆರ್.ಆರ್.ನಗರ, ಜೆ.ಪಿ.ನಗರ, ನಾಗರಬಾವಿ, ವಿದ್ಯಾರಣ್ಯಪುರ ಮುಂತಾದ ಪ್ರದೇಶಗಳಲ್ಲಿ ಕಾಣಸಿಗುವ ಇದು ವಿಷಕಾರಿ ಹಾವು. ಅದಕ್ಕೆ ತೊಂದರೆ ಮಾಡದಿದ್ದರೆ ತಾನಾಗೇ ಕಚ್ಚುವುದಿಲ್ಲ. ಆದರೆ ಅದು ಕಚ್ಚಿದರೆ ಹೃದಯ ಬಡಿತದಲ್ಲಿ ಏರಿಳಿತ ಉಂಟಾಗುವುದರಿಂದ ಅಪಾಯಕಾರಿಯಾಗಿದೆ ಎಂದಿದ್ದಾರೆ.

  ಈ ರೀತಿಯಾಗಿ ಹಾವು ಕಂಡಲ್ಲಿ ಕನಿಷ್ಠ 15 ಅಡಿಗಳ ಅಂತರ ಇಟ್ಟುಕೊಂಡು ಕೂಡಲೇ ಬಿಬಿಎಂಪಿ ಕಂಟ್ರೋಲ್ ರೂಮ್​ಗೆ (080-22221188) ಕರೆ ಮಾಡಬೇಕು. ಸ್ನೇಕ್​ ರೆಸ್​ಕ್ಯೂ ತಂಡದವರು ಹಾವನ್ನು ಹಿಡಿದು ಕಾಡಿನಲ್ಲಿ ಬಿಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)

  192 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು; ಅರ್ಧ ಜನ ಒಂದೇ ಟ್ಯೂಷನ್​​ಗೆ ಹೋಗುತ್ತಿದ್ದರು!

  ಮಂಗಳೂರಿನಲ್ಲಿ ರ‍್ಯಾಗಿಂಗ್: ಒಂದೇ ಕಾಲೇಜಿನ 11 ವಿದ್ಯಾರ್ಥಿಗಳು ಅರೆಸ್ಟ್

  VIDEO: ತೆಲಂಗಾಣದ ಸುಂದರಿಗೆ ಒಲಿದ ಮಿಸ್ ಇಂಡಿಯಾ ವರ್ಲ್ಡ್‌ 2020 ಕಿರೀಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts