192 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು; ಅರ್ಧ ಜನ ಒಂದೇ ಟ್ಯೂಷನ್​​ಗೆ ಹೋಗುತ್ತಿದ್ದರು!

ತಿರುವನಂತಪುರಂ: ಹತ್ತನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಗಳನ್ನೇನೋ ತೆರೆಯಲಾಗಿದೆ. ಆದರೆ ಕರೊನಾ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಳ ಮಹತ್ವ ಹೆಚ್ಚಿನದು. ಇದನ್ನು ನಿರೂಪಿಸುವಂತೆ ಕೇರಳದಲ್ಲಿ ಇತ್ತೀಚೆಗೆ ಸಾರಾಸಗಟಾಗಿ ಎರಡು ಶಾಲೆಗಳ 192 ವಿದ್ಯಾರ್ಥಿಗಳಲ್ಲಿ ಮತ್ತು 72 ಶಿಕ್ಷಕರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಕೇರಳದ ಮಲಪ್ಪುರಂನ ಎರಡು ಶಾಲೆಗಳಲ್ಲಿ ನಡೆದ ಮಾಸ್ ಟೆಸ್ಟಿಂಗ್​ನಲ್ಲಿ 192 ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಹಾಗೂ ಆ ವಿದ್ಯಾರ್ಥಿಗಳಲ್ಲಿ 91 ಮಂದಿ ಒಂದೇ ಟ್ಯೂಷನ್ ಸೆಂಟರ್​ಗೆ ಹೋಗುತ್ತಿದ್ದರು … Continue reading 192 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು; ಅರ್ಧ ಜನ ಒಂದೇ ಟ್ಯೂಷನ್​​ಗೆ ಹೋಗುತ್ತಿದ್ದರು!