More

    192 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು; ಅರ್ಧ ಜನ ಒಂದೇ ಟ್ಯೂಷನ್​​ಗೆ ಹೋಗುತ್ತಿದ್ದರು!

    ತಿರುವನಂತಪುರಂ: ಹತ್ತನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಗಳನ್ನೇನೋ ತೆರೆಯಲಾಗಿದೆ. ಆದರೆ ಕರೊನಾ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಳ ಮಹತ್ವ ಹೆಚ್ಚಿನದು. ಇದನ್ನು ನಿರೂಪಿಸುವಂತೆ ಕೇರಳದಲ್ಲಿ ಇತ್ತೀಚೆಗೆ ಸಾರಾಸಗಟಾಗಿ ಎರಡು ಶಾಲೆಗಳ 192 ವಿದ್ಯಾರ್ಥಿಗಳಲ್ಲಿ ಮತ್ತು 72 ಶಿಕ್ಷಕರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.

    ಕೇರಳದ ಮಲಪ್ಪುರಂನ ಎರಡು ಶಾಲೆಗಳಲ್ಲಿ ನಡೆದ ಮಾಸ್ ಟೆಸ್ಟಿಂಗ್​ನಲ್ಲಿ 192 ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಹಾಗೂ ಆ ವಿದ್ಯಾರ್ಥಿಗಳಲ್ಲಿ 91 ಮಂದಿ ಒಂದೇ ಟ್ಯೂಷನ್ ಸೆಂಟರ್​ಗೆ ಹೋಗುತ್ತಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಶಾಲೆಗಳನ್ನು ಅದಾಗಲೇ ಮುಚ್ಚಲಾಗಿದ್ದು, ಇದೀಗ ಹತ್ತಿರದ ಮತ್ತೊಂದು ಶಾಲೆಯನ್ನೂ ಸದರಿ ಟ್ಯೂಷನ್ ಸೆಂಟರ್​ಅನ್ನೂ ಮುಚ್ಚಲಾಗಿದೆ.

    ಇದನ್ನೂ ಓದಿ: ಕರೊನಾ ಲಸಿಕೆ ಪಡೆಯಲು ಹಿಂದೇಟು!, ಮೊದಲ ಹಂತದಲ್ಲಿ ಶೇ.61 ಮಂದಿಗಷ್ಟೆ ವಾಕ್ಸಿನ್, ಎರಡನೇ ಹಂತದಲ್ಲೂ ನೀರಸ ಪ್ರತಿಕ್ರಿಯೆ

    ಒಂದು ಶಾಲೆಯ ಒಬ್ಬ ವಿದ್ಯಾರ್ಥಿ ಮತ್ತು ಇನ್ನೊಂದು ಶಾಲೆಯ ಒಬ್ಬ ಶಿಕ್ಷಕರಲ್ಲಿ ಕರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಮಾಸ್ ಟೆಸ್ಟಿಂಗ್ ನಡೆಸಲಾಗಿತ್ತು. ಒಟ್ಟು 600 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಂದು ಶಾಲೆಯ 149 ವಿದ್ಯಾರ್ಥಿಗಳು ಮತ್ತು 39 ಸಿಬ್ಬಂದಿ ಪಾಸಿಟೀವ್ ಬಂದಿದ್ದರೆ, ಮತ್ತೊಂದು ಶಾಲೆಯ 43 ವಿದ್ಯಾರ್ಥಿಗಳು ಮತ್ತು 33 ಸಿಬ್ಬಂದಿ ಪಾಸಿಟೀವ್ ಬಂದಿದ್ದಾರೆ. ಬಹುತೇಕ ಜನರು ಲಕ್ಷಣರಹಿತರಾಗಿದ್ದರು ಎನ್ನಲಾಗಿದೆ.

    ಎರಡೂ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೂ ಮನೆಯಲ್ಲೇ ಪ್ರತ್ಯೇಕವಾಗಿ ಇರಲು ಹೇಳಲಾಗಿದೆ. ಸದರಿ ಟ್ಯೂಷನ್ ಸೆಂಟರ್ ವಿದ್ಯಾರ್ಥಿಗಳಿಗೂ ಗುರುವಾರ ಕರೊನಾ ಪರೀಕ್ಷೆ ನಡೆಸಲಾಗಿದೆ. ಮುನ್ನೆಚ್ಚರಿಕೆಯಾಗಿ ವಿದ್ಯಾರ್ಥಿಗಳ ಪಾಲಕರೂ ಸೇರಿದಂತೆ ಸೋಂಕಿತರ ಮನೆಗಳ ಸಮೀಪದಲ್ಲಿ 2000 ಜನರ ಮಾಸ್ ಟೆಸ್ಟಿಂಗ್ ಕೂಡ ನಡೆಯಲಿದೆ. ಸೋಂಕು ಹರಡಿದ ಮೂಲವನ್ನು ಪತ್ತೆ ಹಚ್ಚಲಾಗುತ್ತಿದ್ದು, ಕಾಂಟ್ಯಾಕ್ಟ್ ಟ್ರೇಸಿಂಗ್ ನಡೆಯುತ್ತಿದೆ ಎಂದು ಮಲಪ್ಪುರಂ ಜಿಲ್ಲಾ ವೈದ್ಯಾಧಿಕಾರಿ ಡಾ.ಕೆ.ಸಕೀನಾ ಹೇಳಿದ್ದಾರೆ.(ಏಜೆನ್ಸೀಸ್)

    ರೈತ ಹೋರಾಟದ ಮುಖ್ಯಸ್ಥ ರಾಕೇಶ್​ ಟಿಕೈಟ್​ 80 ಕೋಟಿ ರೂ. ಆಸ್ತಿ ಒಡೆಯ! 4 ರಾಜ್ಯಗಳಲ್ಲಿದೆ ಕೋಟಿ ಕೋಟಿ ಬೆಲೆಯ ಆಸ್ತಿ!

    ಕೇರಳ ವಿದ್ಯಾರ್ಥಿಗಳ ಗಂಟಲದ್ರವ ನಿಮ್ಹಾನ್ಸ್‌ಗೆ, ರೂಪಾಂತರಿ ಕರೊನಾ ಭೀತಿ ಹಿನ್ನೆಲೆ ಜಿಲ್ಲಾಡಳಿತ ತೀರ್ಮಾನ

    ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆಗಾಗಿ 25 ದೇಶಗಳು ಕ್ಯೂನಲ್ಲಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts