ಕೇರಳ ವಿದ್ಯಾರ್ಥಿಗಳ ಗಂಟಲದ್ರವ ನಿಮ್ಹಾನ್ಸ್‌ಗೆ, ರೂಪಾಂತರಿ ಕರೊನಾ ಭೀತಿ ಹಿನ್ನೆಲೆ ಜಿಲ್ಲಾಡಳಿತ ತೀರ್ಮಾನ

ಮಂಗಳೂರು: ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರೊನಾ ಪ್ರಕರಣಗಳು ಪತ್ತೆಯಾಗುತ್ತಿರುವುದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಪ್ರತಿನಿತ್ಯ ವರದಿಯಾಗುತ್ತಿರುವ ಪಾಸಿಟಿವ್ ಪ್ರಕರಣಗಳಲ್ಲಿ ಶೇ.50ರಷ್ಟು ಕೇರಳದಿಂದ ಬಂದವರಲ್ಲಿ ಕಂಡು ಬರುತ್ತಿದೆ. ಆದ್ದರಿಂದ ಇದರೊಂದಿಗೆ ರೂಪಾಂತರಿ ಕರೊನಾ ಏನಾದರೂ ಜಿಲ್ಲೆಗೆ ಕಾಲಿಟ್ಟಿದೆಯೇ ಎಂದು ತಿಳಿಯುವ ಉದ್ದೇಶದಿಂದ ಈಗಾಗಲೇ ಪಾಸಿಟಿವ್ ಬಂದಿರುವ ಕೆಲವು ಗಂಟಲ ದ್ರವ ಸ್ಯಾಂಪಲ್‌ಗಳನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಅದರಂತೆ ಗುರುವಾರ ಮೊದಲ ಹಂತದಲ್ಲಿ ಸ್ಯಾಂಪಲ್ ಕಳುಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ … Continue reading ಕೇರಳ ವಿದ್ಯಾರ್ಥಿಗಳ ಗಂಟಲದ್ರವ ನಿಮ್ಹಾನ್ಸ್‌ಗೆ, ರೂಪಾಂತರಿ ಕರೊನಾ ಭೀತಿ ಹಿನ್ನೆಲೆ ಜಿಲ್ಲಾಡಳಿತ ತೀರ್ಮಾನ