More

    ಇಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದರೂ ವಿಐಪಿ ಆತಿಥ್ಯ!; ಅದಕ್ಕೆಂದೇ ವಿಶೇಷ ಸೆಲ್..

    ಬಿಹಾರ: ಇದು ವಿಶೇಷ ಸೆಲ್, ಇಂಥ ಒಂದೊಂದು ಸೆಲ್​ನಲ್ಲೂ 2 ಬೆಡ್, ಒಂದು ಸೋಫಾ, ಮೇಜು ಹಾಗೂ ರಕ್ಷಣೆಗೆಂದು ಗೇಟ್​ ಬಳಿ ತರಬೇತಾದ ನಾಯಿ.

    – ಹೌದು.. ಹೀಗಿದ್ದೊಂದು ಸೆಲ್​ ಅರ್ಥಾತ್ ಸೆರಮನೆ ಇರುವುದು ಸಾರ್ವಜನಿಕವಾಗಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ವಿಐಪಿಗಳಿಗಾಗಿ. ಸರ್ಕಾರಿ ಅಧಿಕಾರಿಗಳು, ವಿಐಪಿಗಳು, ಜನಪ್ರತಿನಿಧಿಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ್ದು ಕಂಡುಬಂದರೆ ಅವರನ್ನು ಕರೆದುಕೊಂಡು ಬಂದು ಈ ಸೆಲ್​ನಲ್ಲಿ ಇರಿಸಲಾಗುತ್ತದೆ.

    ಇಂಥದ್ದೊಂದು ಸೆರಮನೆ ಇರುವುದು ಬಿಹಾರದ ಸಮಷ್ಟಿಪುರದಲ್ಲಿ. ಬಿಹಾರದ ಅಬಕಾರಿ ಇಲಾಖೆಯು ಸಮಷ್ಟಿಪುರದಲ್ಲಿ ವಿಐಪಿಗಳಿಗೆಂದೇ ಹೀಗೊಂದು ವಿಐಪಿ ಸೆಲ್​ ವ್ಯವಸ್ಥೆ ಮಾಡಿದೆ. ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲವೇ ಯಾವುದೇ ಗಣ್ಯವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ್ದು ಕಂಡುಬಂದರೆ ಅಂಥವರನ್ನು ಕರೆತಂದು ಈ ಸೆಲ್​ನಲ್ಲಿ 24 ಗಂಟೆಗಳ ಕಾಲ ಇರಿಸಿಕೊಳ್ಳಲಾಗುತ್ತದೆ.

    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 2015ರ ಚುನಾವಣೆ ಸಂದರ್ಭದಲ್ಲಿ ಮಹಿಳೆಯರ ಒಂದು ಗುಂಪಿಗೆ ನೀಡಿದ ಭರವಸೆಯಂತೆ 2016ರ ಏಪ್ರಿಲ್​ನಿಂದ ರಾಜ್ಯದಲ್ಲಿ ಮದ್ಯಕ್ಕೆ ನಿರ್ಬಂಧ ಹೇರಿದ್ದಾರೆ.

    ಇನ್ನು ಇಲ್ಲಿ ಸಂಬಂಧಿತ ಕಾನೂನಿಗೆ ತಿದ್ದುಪಡಿ ತರಲಾಗಿದ್ದು, ಮದ್ಯ ಸೇವನೆ ಮಾಡಿ ಮೊದಲ ಸಲ ಸಿಕ್ಕಿಬಿದ್ದವರನ್ನು ಅವರು ದಂಡ ತೆತ್ತ ಬಳಿಕ ಬಿಡುಗಡೆ ಮಾಡಲಾಗುತ್ತದೆ. ಬಿಹಾರ್ ಪ್ರೊಹಿಬಿಷನ್​ ಆ್ಯಂಡ್ ಎಕ್ಸೈಸ್​ ಅಮೆಂಡ್​ಮೆಂಟ್ ಆ್ಯಕ್ಟ್ 2022ರ ಪ್ರಕಾರ ಮದ್ಯ ಸೇವಿಸಿ ಮೊದಲ ಸಲ ಸಿಕ್ಕಿಬಿದ್ದವರಿಗೆ 2ರಿಂದ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ದಂಡ ನೀಡಲು ವಿಫಲರಾದರೆ 1 ತಿಂಗಳ ಕಾಲ ಸೆರೆಯಲ್ಲಿ ಇಡಲಾಗುತ್ತದೆ. 2018ರಲ್ಲಿ ರೂಪಿಸಲಾದ ಈ ಕಾಯ್ದೆ ಪ್ರಕಾರ ಈ ಹಿಂದೆ ಮದ್ಯ ಸೇವಿಸಿ ಮೊದಲ ಸಲ ಸಿಕ್ಕಿಬಿದ್ದವರಿಗೆ 50 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು.

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts