More

    ಬಯಲು ಸೀಮೆ ಹಳ್ಳಿಗಳಲ್ಲಿ ಸೀಲ್​ಡೌನ್

    ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕರೊನಾ ಪತ್ತೆಯಾಗಿದ್ದು ಗ್ರಾಮೀಣ ಪ್ರದೇಶದಲ್ಲೂ ಸೋಂಕು ವ್ಯಾಪಿಸುತ್ತಿದೆ. ಬಯಲು ಸೀಮೆ ಹಲವು ಹಳ್ಳಿಗಳಲ್ಲಿ ಸೀಲ್​ಡೌನ್ ಕಂಡುಬರುತ್ತಿದೆ.

    ಸೋಂಕಿನಿಂದ ಚೇತರಿಸಿಕೊಂಡ ಹಲವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದು, ಮತ್ತೆ ಕೆಲವರು ಹೋಮ್ ಐಸೋಲೇಷನ್​ನಲ್ಲಿ ಇದ್ದಾರೆ. ಇದರಿಂದ ಬಹಳಷ್ಟು ಪ್ರದೇಶಗಳಲ್ಲಿ ಸೀಲ್​ಡೌನ್ ಮಾಡಲಾಗಿದೆ.

    ಬೆಂಗಳೂರಿನ ಖಾಸಗಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸೋಂಕಿತ ಯುವಕರು ಕೆಬಿ ಹಾಳ್​ನಲ್ಲಿ ವಾಸವಿದ್ದು ಅವರು ಗುಣಹೊಂದಿದ ನಂತರ ಈಗ ಇಬ್ಬರು ಮಹಿಳೆಯರಿಗೆ ಸೋಂಕು ಹರಡಿ ಗ್ರಾಮದ ರಸ್ತೆಯೊಂದನ್ನು ಸೀಲ್​ಡೌನ್ ಮಾಡಲಾಗಿದೆ.

    ಲಕ್ಯಾದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿ ವಾಸವಿರುವ ರಸ್ತೆಯನ್ನು ನಾಲ್ಕು ದಿನಗಳಿಂದ ಸೀಲ್​ಡೌನ್ ಮಾಡಿ ಹೋಮ್ ಕ್ವಾರಂಟೈನ್​ಲ್ಲಿರಿಸಿದ್ದಾರೆ. ವಡ್ಡರಹಳ್ಳಿಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಪುರುಷನಿಗೆ ಸೋಂಕು ತಗುಲಿ ಗುಣಹೊಂದಿದ್ದಾರೆ. ಮಂಗಳೂರಿನಿಂದ ಆಗಮಿಸಿದ್ದ ಸೋಂಕಿತನೋರ್ವ ಕಳಸಾಪುರದಲ್ಲಿ ವಾಸವಿದ್ದು ಚೇತರಿಸಿಕೊಂಡಿದ್ದಾರೆ. ಜಿಪಂ ಉಪಾಧ್ಯಕ್ಷರ ವಾಹನ ಚಾಲಕನಿಗೆ ಸೋಂಕು ತಗುಲಿ ಗಾಣದಾಳು ಗ್ರಾಮ ಸೀಲ್​ಡೌನ್ ಮಾಡಲಾಗಿತ್ತು. ಈಗ ಚಾಲಕ ಗುಣಹೊಂದಿದ್ದಾರೆ.

    ಬಯಲು ಭಾಗದಲ್ಲಿ 8 ಕರೊನಾ ಸೋಂಕಿತರಲ್ಲಿ ಐವರು ಚೇತರಿಸಿಕೊಂಡು ಮೂವರು ಹೋಮ್ ಕ್ವಾರಂಟೈನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಸಚಿವ ಸಿ.ಟಿ.ರವಿ ಅವರಿಗೆ ಸೋಂಕು ತಗುಲಿದ ಸುದ್ದಿ ತಿಳಿದು ಲಕ್ಯಾ ಸುತ್ತಮುತ್ತ ಭಾಗದಲ್ಲಿ ಸಚಿವರೊಂದಿಗೆ ಪ್ರವಾಸದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಸೇರಿ ಲಕ್ಯಾ ಹೋಬಳಿಯ 24 ಮಂದಿ ಹೋಮ್ ಕ್ವಾರಂಟೈನ್​ಗೆ ಒಳಗಾಗಿದ್ದರು. ನೆಗೆಟಿವ್ ವರದಿ ಬಂದ ನಂತರ ಎಲ್ಲರೂ ಕರೊನಾ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ.

    ಗ್ರಾಪಂನಿಂದ ಜನಜಾಗೃತಿ: ಬಯಲು ಭಾಗದಲ್ಲಿ ಕರೊನಾ ಕಾಣಿಸಿಕೊಂಡಿದ್ದರಿಂದ ಗ್ರಾಪಂನಿಂದ ಅಲ್ಲಲ್ಲಿ ಸ್ಯಾನಿಟೈಸರ್ ಸಿಂಪಡಿಸುವ ಕಾರ್ಯ ನಡೆಯುತ್ತಿದ್ದು ಸೀಲ್​ಡೌನ್ ಆದ ಪ್ರದೇಶಗಳಲ್ಲಿ ಫ್ಲ್ಲೆಕ್ಸ್ ಅಳವಡಿಸಲಾಗಿದೆ. ಲಕ್ಯಾ ಜಿಪಂ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆ ಆಟೋಗಳಲ್ಲಿ ಧ್ವನಿವರ್ಧಕದ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

    ಸೋಂಕು ತಡೆಗೆ ಎಲ್ಲರ ಹೋರಾಟ: ನಾನು ಕೂಡ ಹೋಮ್ ಕ್ವಾರಂಟೈನ್​ಗೆ ಒಳಗಾಗಿದ್ದೆ. ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ 8 ಮಂದಿ ಸೋಂಕಿತರಲ್ಲಿ ಐವರು ಚೇತರಿಸಿಕೊಂಡಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಐದು ದಿನಕ್ಕೊಮ್ಮೆ ಕರೊನಾ ಜಾಗೃತಿ ಸಭೆ, ವಾರಕ್ಕೊಮ್ಮೆ ಧ್ವನಿವರ್ಧಕದ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸಚಿವ ಸಿ.ಟಿ.ರವಿ ಅವರು ಕರೊನಾ ಆರಂಭದಿಂದಲೂ ಹಲವು ಬಾರಿ ಆಗಮಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗ್ರಾಮಗಳ ಸಮಸ್ಯೆ ಆಲಿಸಿ ಅವಶ್ಯಕತೆಗನುಗುಣವಾಗಿ ಸಹಕರಿಸಿದ್ದರು. ಸೋಂಕಿನಿಂದ ಗುಣಹೊಂದಿದ ನಂತರವೂ ಈ ಭಾಗದಲ್ಲಿ ಎರಡು ಬಾರಿ ಪ್ರವಾಸ ಮಾಡಿದ್ದಾರೆ. ಈ ವ್ಯಾಪ್ತಿಯಲ್ಲಿ ಎಲ್ಲ ಪಿಡಿಒ, ಕಾರ್ಯದರ್ಶಿ, ಆರೋಗ್ಯ ಇಲಾಖೆ, ಆಶಾ, ಅಂಗನವಾಡಿ ಕಾರ್ಯರ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳೆಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯ ರವೀಂದ್ರ ಬೆಳವಾಡಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts