More

    ಹಾಲಗಳಲೆಯಲ್ಲಿ ಹೋರಿಗಳ ಓಟ

    ಸೊರಬ: ಗಾಪಂ ಚುನಾವಣೆ ಮುಗಿಯುತ್ತಿದ್ದಂತೆ ಹಳ್ಳಿಗಳಲ್ಲಿ ಹೋರಿ ಬೆದರಿಸುವ ಹಬ್ಬ ರಂಗೇರಿದೆ. ಹಾಲಗಳಲೆಯಲ್ಲಿ ಶುಕ್ರವಾರ ಹೋರಿ ಬೆದರಿಸುವ ಮೂಲಕ ಹೊಸ ವರ್ಷದ ಮೊದಲ ದಿನ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.

    ರೈತರು ಕೊಯ್ಲು ಮುಗಿಸಿ ಒಕ್ಕಲು ಮಾಡುವ ಹಾಗೂ ಬೇಸಿಗೆ ಕೆಲಸಕ್ಕೆ ಅಣಿಯಾಗುವ ಮುನ್ನ ತಮ್ಮ ಜೀವದ ಜೋಡಿಗಳೆಂದೆ ಕರೆಯುವ ಎತ್ತುಗಳ ಜತೆ ಸಾಂಪ್ರದಾಯಿಕ ಹೋರಿಗಳ ಓಟಗಳನ್ನು ಹಮ್ಮಿಕೊಂಡು ಸಂಭ್ರಮಿಸುವುದು ವಾಡಿಕೆ. ಅದರಂತೆ ತಾಲೂಕಿನ ಹಾಲಗಳಲೆಯಲ್ಲಿ ಹೋರಿ ಬೆದರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗ್ರಾಮವನ್ನು ಸಿಂಗಾರಗೊಳಿಸಿ ನೂರಾರು ಹೋರಿಗಳನ್ನು ಬೆದರಿಸುವ ಮೂಲಕ ಹಬ್ಬಕ್ಕೆ ಮೆರá-ಗು ತಂದರು. ಅಕ್ಕಪಕ್ಕದ ಗ್ರಾಮದಿಂದ ಹೋರಿ ಬೆದರಿಸುವ ಕಾರ್ಯಕ್ರಮ ನೋಡಲು ಸಾವಿರಾರು ಜನರು ನೆರದಿದ್ದರು. ತಾಲೂಕಿನ ವಿವಿಧ ಗ್ರಾಮಗಳಿಂದ ಹೋರಿಗಳು ಆಗಮಿಸಿದ್ದು ನೂರಾರು ಯುವ ಪೈಲ್ವಾನರು ಓಡುವ ಹೋರಿಗಳನ್ನು ಹಿಡಿಯುವಲ್ಲಿ ಸಫಲರಾದರು. ಗ್ರಾಮದ ಯುವಕರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಹೋರಿ ಬೆದರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts