More

    ಗ್ರಾಮಸ್ಥರಿಂದ ಗ್ರಾಮದ ಸಂಪರ್ಕ ರಸ್ತೆ ದುರಸ್ತಿ

    ಕಳಸ: ಹದೆಗೆಟ್ಟ ರಸ್ತೆಗೆ ಗ್ರಾಪಂ ಅನುದಾನದ ಜತೆಗೆ ಗ್ರಾಮಸ್ಥರು ಚಂದಾ ನೀಡಿ ಕಳಸ ಗ್ರಾಪಂ ವ್ಯಾಪ್ತಿಯ ಅಜ್ಜಯ್ಯನ ಮನೆ, ತಾರಿಕೊಂಡ, ಮಡೇಮನೆ, ಲಲಿತಾದ್ರಿ, ಕುಮಾರ್‌ಪಾಲ್, ಬೆಟಿಗೇರಿ ಗ್ರಾಮದ ಸಂಪರ್ಕ ರಸ್ತೆ ದುರಸ್ತಿ ಮಾಡಿದರು.
    ಈ ಗ್ರಾಮಗಳಲ್ಲಿ 22 ಮನೆಗಳಿವೆ. ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದ ಮೂರು ಕಿ.ಮೀ. ದೂರದ ಗುಂಡಿಮಯ ರಸ್ತೆಯ ಸಂಚಾರವೇ ಸಾಹಸದ ಕೆಲಸವಾಗಿತ್ತು. ವಾಹನಗಳು ಸಂಚರಿಸಲು ಸಾಧ್ಯವಾಗದೆ ಈ ಭಾಗದಿಂದ ಶಾಲಾ, ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ರಸ್ತೆ ಸಮಸ್ಯೆ ಮನಗಂಡ ಆ ಭಾಗದ ಗ್ರಾಪಂ ಸದಸ್ಯ ಸುಂದರ ಶೆಟ್ಟಿ, 25 ಸಾವಿರ ರೂ. ಅನುದಾನವನ್ನು ರಸ್ತೆ ರಿಪೇರಿಗಾಗಿ ಮೀಸಲಿಟ್ಟಿದ್ದರು. ಆದರೆ ಈ ಅನುದಾನ ರಸ್ತೆ ದುರಸ್ತಿಗೆ ಸಾಕಾಗದ ಕಾರಣ ಆ ಭಾಗದ 22 ಮನೆಯವರೂ ಸೇರಿ ಚಂದಾ ನೀಡಿ ಹೊಂಡಮಯವಾಗಿದ್ದ ರಸ್ತೆಯಗುಂಡಿ ಮುಚ್ಚುವ ಕಾರ್ಯ ಮಾಡಿದರು. ಗ್ರಾಮಸ್ಥರಾದ ಸುಧೀರ, ಲಕ್ಷ್ಮೀನಾರಾಯಣ, ಜನಾರ್ದನ ಭಟ್, ಆದರ್ಶ, ಶಿವಕುಮಾರ್, ಭಾಸ್ಕರ, ರಂಜನ್, ಅರುಣ, ಅರುಂದತಿ, ಪ್ರಭಾಕರ್, ಅದಿತ್ಯಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts